ಈ ಒಂದು ವಿಶೇಷ ಕಾರಣದಿಂದಲೇ ವಿರಾಟ್ RCB ಬಿಟ್ಟು ಬೇರೆ ತಂಡ ಸೇರುತ್ತಿಲ್ಲ..! ಸ್ವತಃ ಕೊಹ್ಲಿ ಹೇಳಿದ ರಹಸ್ಯವಿದು
ಪ್ರಸ್ತುತ, ಕೋಟ್ಯಂತರ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಮನಗೆದ್ದಿರುವ ವಿರಾಟ್ ಕೊಹ್ಲಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತೊರೆಯುವ ಸಂದರ್ಭ ಬಂದಿತ್ತು. ಆದರೆ ಕೊನೆಯಲ್ಲಿ ಅವರು ತಮ್ಮ ಮನಸ್ಸನ್ನು ಬದಲಾಯಿಸಿದ್ದರಂತೆ.
ಸುಮಾರು ಒಂದು ದಶಕ ಕಾಲ ಆರ್’ಸಿಬಿ ನಾಯಕನಾಗಿದ್ದ ಕೊಹ್ಲಿಗೆ ಒಂದೇ ಒಂದು ಪ್ರಶಸ್ತಿಯನ್ನು ಗೆಲ್ಲಲು ಸಾಧ್ಯವಾಗಲಿಲ್ಲ
2022 ರಲ್ಲಿ RCB ಯೊಂದಿಗಿನ ನಡೆಸಿದ ಸಂಭಾಷಣೆಯಲ್ಲಿ ಈ ಬಗ್ಗೆ ಪ್ರಸ್ತಾಪಿಸಿದ್ದಾರೆ. ಇತರ ಫ್ರಾಂಚೈಸಿ ತಂಡಗಳು ತನ್ನ ಹೆಸರನ್ನು ಹರಾಜಿಗೆ ಕಳುಹಿಸಲು ಮನವಿ ಮಾಡಿಕೊಂಡಿದ್ದರೂ ಸಹ, RCBಯೊಂದಿಗೆ ಉಳಿಯಲು ನಿರ್ಧರಿಸಿದ್ದೆ ಎಂದಿದ್ದಾರೆ.
ಆರ್‌ಸಿಬಿ ಜೊತೆಗಿನ ತನ್ನ ಆಲೋಚನೆಯನ್ನು ವಿವರಿಸುತ್ತಾ, “ನೀವು ಒಳ್ಳೆಯವರಾಗಿದ್ದರೆ, ಜನರು ನಿಮ್ಮನ್ನು ಇಷ್ಟಪಡುತ್ತಾರೆ. ನೀವು ಕೆಟ್ಟ ವ್ಯಕ್ತಿಯಾಗಿದ್ದರೆ ಜನರು ನಿಮ್ಮಿಂದ ದೂರ ಉಳಿಯುತ್ತಾರೆ. ಇದುವೇ ಜೀವನ” ಎಂದಿದ್ದಾರೆ.
“ಬೇರೆ ಯಾವುದೇ ಫ್ರಾಂಚೈಸಿಗಳು ನನ್ನ ಮೇಲೆ ನಂಬಿಕೆ ಇಡದಿದ್ದಾಗ ಆರ್’ಸಿಬಿ ತನ್ನ ಮೇಲೆ ನಂಬಿಕೆ ಇಟ್ಟಿತ್ತು. ಇದೇ ಕಾರಣದಿಂದ ಟ್ರೋಫಿ ಗೆಲ್ಲದಿದ್ದರೂ ಪರವಾಗಿಲ್ಲ. ಈ ತಂಡದಲ್ಲೇ ಇರುತ್ತೇನೆ” ಎಂದು ಕೊಹ್ಲಿ ಹೇಳಿದ್ದಾರೆ.
ಬೇರೆ ಯಾವುದೇ ತಂಡವನ್ನು ಸೇರಿಕೊಂಡು ಐಪಿಎಲ್ ಟ್ರೋಫಿ ಗೆಲ್ಲುವುದಕ್ಕಿಂತ ಇದು ನನಗೆ ಮುಖ್ಯ ಎಂದು ಆರ್ ಸಿ ಬಿ ಜೊತೆಗಿನ ಬಾಂಧವ್ಯವನ್ನು ಬಿಚ್ಚಿಟ್ಟಿದ್ದಾರೆ.