ಬೌಲಿಂಗೇ ಮಾಡದೆ ವಿಕೆಟ್ ಕಿತ್ತ ವಿಶ್ವದ ಏಕೈಕ ಕ್ರಿಕೆಟಿಗ ಯಾರು ಗೊತ್ತಾ? ಇವರು ಭಾರತದವರೇ... ಇಡೀ ಜಗತ್ತೇ ಮೆಚ್ಚಿದ ʼಮಹಾʼ ಆಟಗಾರನೀತ
ಕ್ರಿಕೆಟ್ ಇತಿಹಾಸದಲ್ಲಿ ಅನೇಕ ದಾಖಲೆಗಳು ಸೃಷ್ಟಿಯಾಗುತ್ತವೆ, ಜೊತೆಗೆ ಮುರಿಯಲ್ಪಡುತ್ತವೆ. ಆದರೆ ಅವುಗಳಲ್ಲೂ ಕೆಲವೊಂದು ದಾಖಲೆಗಳನ್ನು ಇದುವರೆಗೆ ಯಾವೊಬ್ಬ ಕ್ರಿಕೆಟಿಗನಿಂದಲೂ ಮುಟ್ಟಲೂ ಸಾಧ್ಯವಾಗದೆ ಉಳಿದಿವೆ. ಅಂತಹ ಒಂದು ವಿಶೇಷ ದಾಖಲೆ ಬಗ್ಗೆ ನಾವಿಂದು ಮಾತನಾಡಲಿದ್ದೇವೆ.
ಕ್ರಿಕೆಟ್ ಲೋಕ ಕಂಡ ದಿಗ್ಗಜ ಕ್ರಿಕೆಟಿಗರಲ್ಲಿ ವಿರಾಟ್ ಕೊಹ್ಲಿ ಕೂಡ ಒಬ್ಬರು. ಬ್ಯಾಟಿಂಗ್‌ನಲ್ಲಿ ಹಲವು ದೊಡ್ಡ ದಾಖಲೆಗಳನ್ನು ಮಾಡಿರುವ ಅವರು ತಮ್ಮ ಅಂತರಾಷ್ಟ್ರೀಯ ವೃತ್ತಿ ಜೀವನದಲ್ಲಿ 25000 ರನ್ ಪೂರೈಸಿದ್ದಾರೆ.
ಇನ್ನು ಇದಲ್ಲದೆ, ಕೊಹ್ಲಿ ತಮ್ಮ ವೃತ್ತಿಜೀವನದಲ್ಲಿ ಯಾವುದೇ ಬಾಲ್ ಬೌಲ್ ಮಾಡದೆ ವಿಕೆಟ್ ಪಡೆದ ದಾಖಲೆಯನ್ನು ಹೊಂದಿದ್ದಾರೆ. ಅದು ಹೇಗೆ ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಬಹುದು! ಅದಕ್ಕೆ ಉತ್ತರ ಇಲ್ಲಿದೆ.
ಕೊಹ್ಲಿ ಅವರ ಟಿ20 ಅಂತಾರಾಷ್ಟ್ರೀಯ ವೃತ್ತಿಜೀವನದ ಮೊದಲ ಎಸೆತವಾಗಿದ್ದು, ಆ ಎಸೆತದಲ್ಲೇ ಮಾಜಿ ಇಂಗ್ಲೆಂಡ್ ಬ್ಯಾಟ್ಸ್‌ಮನ್ ಕೆವಿನ್ ಪೀಟರ್ಸನ್ ಅವರನ್ನು ಔಟ್ ಮಾಡಿದ್ದರು.
ಅಷ್ಟಕ್ಕೂ ಬೌಲಿಂಗ್ ಮಾಡದೆಯೆ ವಿಕೆಟ್ ಪಡೆದಿದ್ದು ಹೇಗೆ ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ. ಕೊಹ್ಲಿ ಎಸೆದ ಬಾಲ್ ವೈಡ್ ಆಗಿತ್ತು. ಇದರ ಬೆನ್ನಲ್ಲೇ ವಿಕೆಟ್ ಹಿಂದೆ ನಿಂತಿದ್ದ ಮಹೇಂದ್ರ ಸಿಂಗ್ ಧೋನಿ, ಪೀಟರ್ಸನ್ ಅವರನ್ನು ಸ್ಟಂಪ್ ಔಟ್ ಮಾಡಿದ್ದರು. ಈ ಮೂಲಕ ಕೊಹ್ಲಿ ಯಾವುದೇ ಚೆಂಡನ್ನು ಎಸೆಯದೇ ವಿಕೆಟ್ ಪಡೆದರು.
ಈ ಸಾಧನೆ ಮಾಡಿದ ವಿಶ್ವದ ಏಕೈಕ ಬೌಲರ್ ವಿರಾಟ್ ಕೊಹ್ಲಿ. ಆ ದಿನಗಳಲ್ಲಿ ಕೊಹ್ಲಿ ಬಾರ್ಡರ್-ಗವಾಸ್ಕರ್ ಟ್ರೋಫಿ ಆಡುತ್ತಿದ್ದಾರೆ.