Audi RS 5 ಲಾಂಚ್ ಮಾಡಿದ ವಿರಾಟ್ ಕೊಹ್ಲಿ; ಈ ಕಾರಿನಲ್ಲಿದೆ ವಿಶೇಷ ಫೀಚರ್ಸ್

Mon, 16 Apr 2018-10:34 am,

ಜರ್ಮನಿಯ ಐಷಾರಾಮಿ ಕಾರು ತಯಾರಕ ಕಂಪೆನಿ ಆಡಿ(Audi) ತನ್ನ ಎರಡನೇ ಜನರೇಶನ್ನಿನ RS 5 ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ಕಾರಿನ ಎಕ್ಸ್-ಷೋ ರೂಮ್ ಬೆಲೆ 1.10 ಕೋಟಿ ರೂ.ಗಳಾಗಿದ್ದು, ಭಾರತದಲ್ಲಿರುವ ಎಲ್ಲಾ ಆಡಿ ಶೋರೂಂಗಳಲ್ಲಿ ಮಾರಟಕ್ಕೆ ಲಭ್ಯವಿದೆ.  ಈ ಕಾರನ್ನು ಟೀಂ ಇಂಡಿಯಾ ಮತ್ತು ಐಪಿಎಲ್ ರಾಯಲ್ ಚಾಲೆಂಜರ್ ತಂಡದ ನಾಯಕ ವಿರಾಟ್ ಬಿಡುಗಡೆ ಮಾಡಿದ್ದಾರೆ.

 

ಈ ಕಾರಿನೊಂದಿಗಿನ ಅವಿನಾಭಾವ ಸಂಬಂಧದ ಕುರಿತು ವಿರಾಟ್ ಕೊಹ್ಲಿ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. 2016 ರಲ್ಲಿ,ಇದೇ ಕಂಪೆನಿಯ Audi R8 V10 Plus ಅನ್ನು ವಿರಾಟ್ ಕೊಹ್ಲಿ ಬಿಡುಗಡೆ ಮಾಡಿದ್ದರು. ಇದೊಂದು ಅದ್ಭುತ ಸ್ಪೋರ್ಟ್ಸ್ ಕಾರ್ ಆಗಿತ್ತು. 

ಆಡಿ ಇಂಡಿಯಾ ಮುಖ್ಯಸ್ಥ ರಹೀಲ್ ಅನ್ಸಾರಿ ಅವರು ಆಡಿ ಯಾವಾಗಲೂ ಯಂಗ್ ಮತ್ತು ಸ್ಪೋರ್ಟಿ ಬ್ರ್ಯಾಂಡ್ ಎಂದೇ ಹೆಸರಾಗಿದೆ. ಈ ಕಂಪನಿಯ ಎರಡನೇ ತಲೆಮಾರಿನ Audi RS 5 ಕಾರು 2.9 ಟಿಎಫ್ಎಸ್ಐ ಬೈ-ಟರ್ಬೊ ಇಂಜಿನ್ ಹೊಂದಿದ್ದು, 450HP ಮತ್ತು 600 ಎನ್ಎಮ್ ಟಾರ್ಕ್ನ ಶಕ್ತಿಯನ್ನು ನೀಡುತ್ತದೆ. ಈ ಕಾರು ಕೇವಲ 3.9 ಸೆಕೆಂಡ್ಗಳಲ್ಲಿ 0 ರಿಂದ 100 ಕಿಲೋಮೀಟರ್ಗಳ ವೇಗದಲ್ಲಿ ಚಲಿಸಲಿದೆ.  ಈ ಕಾರಿನ ಗರಿಷ್ಠ ವೇಗ 250km/h ಆಗಿದೆ.

ಈ 4 ಆಸನದ ಕಾರಿನ ಒಳ ಭಾಗ ಬಹಳ ವಿಶಾಲವಾಗಿದ್ದು, ಮುಂಭಾಗದ ಶೋಲ್ಡರ್ ರೂಂ ಅನ್ನು 26 ಎಂ.ಎಂ.ಗೆ ಹೆಚ್ಚಿಸಲಾಗಿದೆ. ಅಲ್ಲದೆ, ಮೊಣಕಾಲಿನ ಜಾಗವನ್ನು 23 ಎಂಎಂಗೆ ಹೆಚ್ಚಿಸಲಾಗಿದೆಯಲ್ಲದೆ, ಆಸನಗಳನ್ನು ಹೈ ಕ್ವಾಲಿಟಿ ಲೆದರ್ನಿಂದ ತಯಾರಿಸಲಾಗಿದೆ. ಕಾರು 3 ಭಾಗಗಳಲ್ಲಿ ಎಸಿ ಮತ್ತು ಆಂಬಿಯೆಂಟ್ ಲೈಟ್ ಸಿಸ್ಟಂ ಹೊಂದಿದೆ.  ಅಷ್ಟೇ ಅಲ್ಲದೆ, ಆಪಲ್ ಮತ್ತು ಆಂಡ್ರಾಯ್ಡ್ ಸ್ಮಾರ್ಟ್ಫೋನ್ಗಳನ್ನು ಸಂಪರ್ಕಿಸುವ ಆಡಿ ಸ್ಮಾರ್ಟ್ಫೋನ್ ಇಂಟರ್ಫೇಸ್ ಸಹ ಹೊಂದಿದೆ. 3D ಸೌಂಡ್, 19 ಲೌಡ್ ಸ್ಪೀಕರ್ ಹೊಂದಿದೆ. ಹೊಂದಿಕೊಳ್ಳುತ್ತದೆ. ಸುರಕ್ಷತೆಗಾಗಿ ಎಬಿಎಸ್, ಇಬಿಡಿ, ಪಾರ್ಕ್, 6 ಏರ್ಬ್ಯಾಗ್ಸ್ ಇತ್ಯಾದಿಗಳನ್ನು ಒಳಗೊಂಡಿದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link