Virat Kohli: ಫಿಟ್ನೆಸ್ ನಲ್ಲಿಯೂ ಕೊಹ್ಲಿಯೇ ‘ಕಿಂಗ್’: ಈ ವರ್ಷದಲ್ಲಿ ಒಮ್ಮೆಯೂ ಗಾಯಗೊಂಡಿಲ್ಲ ವಿರಾಟ್!
ಭಾರತ ತಂಡದ ಮಾಜಿ ನಾಯಕ ಮತ್ತು ಅಗ್ರ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ ಕೇವಲ ತಮ್ಮ ಬ್ಯಾಟಿಂಗ್ ಶೈಲಿಯಲ್ಲಿ ಮಾತ್ರವಲ್ಲ ಫಿಟ್ನೆಸ್‌ನಲ್ಲಿಯೂ ಎಲ್ಲರ ಮನ ಗೆದ್ದಿದ್ದಾರೆ. ಕೂಡ ಸಾಕಷ್ಟು ಸುದ್ದಿಯಾಗುತ್ತಿರುತ್ತಾರೆ.
2021-22ನೇ ಸಾಲಿನಲ್ಲಿ ವಿರಾಟ್ ಕೊಹ್ಲಿ ಒಮ್ಮೆಯೂ ಗಾಯಗೊಂಡಿಲ್ಲ. ಅಷ್ಟೇ ಅಲ್ಲದೆ, ತಮ್ಮ ಫಿಟ್ನೆಸ್ ಸಾಬೀತುಪಡಿಸಲು ಬೆಂಗಳೂರಿನ ಎನ್‌ಸಿಎಗೆ ಹಾಜರಾಗಿಲ್ಲ. ಏಕೆಂದರೆ ಅವರಿಗೆ ಅದರ ಅವಶ್ಯಕತೆ ಕಂಡುಬಂದಿಲ್ಲ.
ಟೀಂ ಇಂಡಿಯಾ ಆಟಗಾರರು ಬಿಸಿಸಿಐ ಸೂಚನೆಯಂತೆ 2021-22ರಲ್ಲಿ ಫಿಟ್ನೆಸ್ ಸಾಬೀತುಪಡಿಸಲು ಎನ್‌ಸಿಎಗೆ ಹಾಜರಾಗಿದ್ದರು.
2021-22 ಸೀಸನ್ ನಲ್ಲಿ ಮಾಜಿ ನಾಯಕನನ್ನು ಹೊರತುಪಡಿಸಿ ಕನಿಷ್ಠ 23 ಕೇಂದ್ರೀಯ ಗುತ್ತಿಗೆ ಪಡೆದ ಭಾರತೀಯ ಕ್ರಿಕೆಟಿಗರು ಎನ್‌ಸಿಎಗೆ ಭೇಟಿ ನೀಡಬೇಕೆಂದು ಬಿಸಿಸಿಐ ವರದಿ ಬಹಿರಂಗಪಡಿಸಿದೆ
ಬಿಸಿಸಿಐ ಸಿಇಒ ಹೇಮಂಗ್ ಅಮೀನ್ ಸಿದ್ಧಪಡಿಸಿದ ವರದಿಯು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಮತ್ತು ಕಳೆದ ಸೀಸನ್ ನಲ್ಲಿ ಮಾಡಿದ ಕೆಲಸದ ಬಗ್ಗೆ ಮಾಹಿತಿ ನೀಡುತ್ತದೆ