1000 ಕೋಟಿ ದಾಟಿತು ವಿರಾಟ್ ಆಸ್ತಿ ಮೌಲ್ಯ… ‘ಕಿಂಗ್ ಕೊಹ್ಲಿ’ Instagram ಪೋಸ್ಟ್ ಒಂದಕ್ಕೆ ಎಷ್ಟು ಬೆಲೆ ಗೊತ್ತಾ?
ಸ್ಟಾಕ್ ಗ್ರೋ ಪ್ರಕಾರ, ವಿರಾಟ್ ಕೊಹ್ಲಿಯ ನಿವ್ವಳ ಮೌಲ್ಯ 1,050 ಕೋಟಿ ರೂ. (Virat Kohli Net worth). ವಿರಾಟ್ ಕ್ರೀಡೆಯಿಂದ ಮತ್ತು ಇತರ ಅನೇಕ ಪ್ಲಾಟ್ ಫಾರಂಗಳಿಂದ ಗಳಿಕೆ ಮಾಡುತ್ತಾರೆ.
'ಎ+' ಟೀಮ್ ಇಂಡಿಯಾ ಒಪ್ಪಂದದಿಂದ ವಿರಾಟ್ ಕೊಹ್ಲಿ ರೂ. 7 ಕೋಟಿ ಗಳಿಸುತ್ತಾರೆ. ಟೆಸ್ಟ್ ಪಂದ್ಯಕ್ಕೆ 15 ಲಕ್ಷ, ಏಕದಿನ ಪಂದ್ಯಕ್ಕೆ 6 ಲಕ್ಷ ಹಾಗೂ ಟಿ20 ಪಂದ್ಯಕ್ಕೆ 3 ಲಕ್ಷ ರೂ. ಪಡೆಯುತ್ತಾರೆ.
ವಿರಾಟ್ ಕೊಹ್ಲಿ ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡುತ್ತಿದ್ದಾರೆ. ಐಪಿಎಲ್ ನ ಒಂದು ಸೀಸನ್ ಗೆ ವಿರಾಟ್ 15 ಕೋಟಿ ರೂ. ಪಡೆಯುತ್ತಾರೆ. ಇದಲ್ಲದೆ, ಅವರು ಅನೇಕ ಬ್ರಾಂಡ್ ಗಳ ಮಾಲೀಕರೂ ಆಗಿದ್ದು, ಅದರಿಂದಲೂ ಹಣ ಬರುತ್ತದೆ.
ಇನ್ನು ವಿರಾಟ್ ಇನ್‌ಸ್ಟಾಗ್ರಾಂನಲ್ಲಿ 252 ಮಿಲಿಯನ್ ಗಿಂತಲೂ ಹೆಚ್ಚು ಫಾಲೋವರ್ಸ್ ಇದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಅವರ ಗಳಿಕೆ ಕೂಡ ಈ ಆದಾಯದ ಮೂಲದಲ್ಲಿ ಸೇರಿಕೊಂಡಿದೆ. ಹೂಪರ್ 2022-ಇನ್‌ಸ್ಟಾಗ್ರಾಂ ಶ್ರೀಮಂತ ಪಟ್ಟಿಯ ಪ್ರಕಾರ, ವಿರಾಟ್ ಪ್ರಾಯೋಜಿತ ಪೋಸ್ಟ್ ನಿಂದ ಸುಮಾರು 8.69 ಕೋಟಿ ರೂಪಾಯಿಗಳನ್ನು ಗಳಿಸುತ್ತಾರಂತೆ. ಟ್ವಿಟ್ಟರ್’ನಲ್ಲಿ ಒಂದು ಪೋಸ್ಟ್ ಗೆ 2.5 ಕೋಟಿ ಸಂಪಾದನೆ ಮಾಡುತ್ತಾರಂತೆ..
ವಿರಾಟ್ ಕೊಹ್ಲಿ ಬಳಿ ಐಷಾರಾಮಿ ಕಾರುಗಳ ಸಂಗ್ರಹವೂ ಇದೆ. ಇದರ ಜೊತೆಗೆ ಮುಂಬೈ ಮತ್ತು ಗುರುಗ್ರಾಂಬಲ್ಲಿ ಮನೆ ಹೊಂದಿದ್ದಾರೆ. ವಿರಾಟ್ ಅವರ ಗುರುಗ್ರಾಮ್ ಮನೆಯ ವೆಚ್ಚ ಸುಮಾರು 80 ಕೋಟಿ ರೂ, ಮತ್ತು ಮುಂಬೈನ ಮನೆಯ ವೆಚ್ಚ ಸುಮಾರು 34 ಕೋಟಿ ರೂ, ಇದೆ.