ವಿಶ್ವಕಪ್ ಬಳಿಕ ಪ್ರತಿ ಜಾಹಿರಾತಿಗೆ ವಿರಾಟ್ ಕೊಹ್ಲಿ ಪಡೆಯುತ್ತಿರುವ ಸಂಭಾವನೆ ಎಷ್ಟು ಕೋಟಿ ಗೊತ್ತೇ?
ಸ್ಟಾಕ್ ಗ್ರೋ ವರದಿಯ ಪ್ರಕಾರ ಭಾರತದ ಮಾಜಿ ನಾಯಕ, ದಿಗ್ಗಜ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಅವರ ನಿವ್ವಳ ಮೌಲ್ಯ 1050 ಕೋಟಿ ರೂ.ಗೂ ಹೆಚ್ಚಿದೆ ಎಂದು ತಿಳಿದುಬಂದಿದೆ.
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತನ್ನ ಗುತ್ತಿಗೆ ಪಟ್ಟಿಯಲ್ಲಿ 35 ವರ್ಷದ ವಿರಾಟ್ ಅವರನ್ನು 'ಎ+' ವಿಭಾಗದಲ್ಲಿ ಇರಿಸಿದೆ. ಒಪ್ಪಂದದಡಿ ಮಂಡಳಿಯಿಂದ ವಾರ್ಷಿಕ 7 ಕೋಟಿ ರೂ. ಸಂಭಾವನೆಯನ್ನು ಪಡೆಯುತ್ತಾರೆ. ಇದಲ್ಲದೇ ಬಿಸಿಸಿಐ ಟೆಸ್ಟ್ ಆಡಲು 15 ಲಕ್ಷ ರೂ., ಏಕದಿನ ಪಂದ್ಯವಾಡಲು 6 ಲಕ್ಷ ಹಾಗೂ ಟಿ20 ಪಂದ್ಯವಾಡಲು 3 ಲಕ್ಷ ರೂ. ಸಂಭಾವನೆಯನ್ನು ನೀಡುತ್ತದೆ.
ಭಾರತ ತಂಡದ ಹೊರತಾಗಿ, ಕೊಹ್ಲಿ ಐಪಿಎಲ್’ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಪರ ಆಡುತ್ತಾರೆ. ಆರ್‌ಸಿಬಿ ಒಂದು ಸೀಸನ್’ಗೆ ವಿರಾಟ್ ಕೊಹ್ಲಿಗೆ 15 ಕೋಟಿ ರೂ. ನೀಡುತ್ತದೆ.
ಕ್ರೀಡೆಯ ಹೊರತಾಗಿ ಕೊಹ್ಲಿ ಹಲವು ಬ್ರಾಂಡ್’ಗಳ ಒಡೆಯ. ಬ್ಲೂ ಟ್ರೈಬ್, ಯುನಿವರ್ಸಲ್ ಸ್ಪೋರ್ಟ್ಸ್ ಬಿಜ್, ಎಂಪಿಎಲ್ ಮತ್ತು ಸ್ಪೋರ್ಟ್ಸ್ ಕಾನ್ವೋ ಸೇರಿದಂತೆ ಏಳು ಸ್ಟಾರ್ಟ್ ಅಪ್’ಗಳಲ್ಲಿ ಹೂಡಿಕೆ ಮಾಡಿದ್ದಾರೆ.
ಅಂದಹಾಗೆ ಕೊಹ್ಲಿ ಜಾಹೀರಾತುದಾರರ ನೆಚ್ಚಿನ ಸೆಲೆಬ್ರಿಟಿ ಎಂದರೆ ತಪ್ಪಾಗಲಾರದು. 18 ಕ್ಕೂ ಹೆಚ್ಚು ಬ್ರ್ಯಾಂಡ್’ಗಳನ್ನು ಅನುಮೋದಿಸುವ ವಿರಾಟ್, ಪ್ರತಿ ಜಾಹೀರಾತು ಚಿತ್ರೀಕರಣಕ್ಕೆ ವಾರ್ಷಿಕವಾಗಿ 7.50 ರಿಂದ 10 ಕೋಟಿ ರೂ.ವರೆಗೆ ಸಂಭಾವನೆ ಪಡೆಯುತ್ತಾರೆ. ಈ ವಿಷಯದಲ್ಲಿ ಎಲ್ಲರಕ್ಕಿಂತ ಒಂದು ಹೆಜ್ಜೆ ಮುಂದೆಯೇ ಇದ್ದಾರೆ.
ಬ್ರಾಂಡ್ ಎಂಡಾರ್ಸ್‌ಮೆಂಟ್’ಗಳಿಂದ ಅವರು ಸುಮಾರು 175 ಕೋಟಿ ರೂಪಾಯಿಗಳನ್ನು ಗಳಿಸುತ್ತಾರೆ. ಇದಲ್ಲದೇ ವಿರಾಟ್ ಫುಟ್ಬಾಲ್, ಟೆನಿಸ್ ಮತ್ತು ಕುಸ್ತಿ ತಂಡಗಳ ಮಾಲೀಕರೂ ಕೂಡ ಹೌದು.
ಇನ್ನು ಸೋಷಿಯಲ್ ಮೀಡಿಯಾದ ಬಗ್ಗೆ ಮಾತನಾಡುವುದಾದರೆ, ಕೊಹ್ಲಿ ಇನ್‌ಸ್ಟಾಗ್ರಾಂನಲ್ಲಿ ಒಂದು ಪೋಸ್ಟ್’ಗೆ 8.9 ಕೋಟಿ ರೂ. ಪಡೆಯುತ್ತಾರೆ. ಟ್ವಿಟರ್ (ಈಗಿನ ಎಕ್ಸ್)ನಲ್ಲಿ ಪ್ರತಿ ಪೋಸ್ಟ್’ಗೆ 2.5 ಕೋಟಿ ರೂ. ಗಳಿಕೆ ಮಾಡುತ್ತಾರೆ.
ವಿರಾಟ್’ಗೆ ಎರಡು ಮನೆಗಳಿವೆ. ಮುಂಬೈನ ಮನೆಯ ಬೆಲೆ 34 ಕೋಟಿ ರೂ., ಗುರುಗ್ರಾಮ್ ಮನೆಯ ಬೆಲೆ 80 ಕೋಟಿ ರೂ. ಇದಲ್ಲದೇ ಅವರಿಗೆ ಕಾರುಗಳೆಂದರೆ ಬಲು ಇಷ್ಟ. 31 ಕೋಟಿ ಮೌಲ್ಯದ ಐಷಾರಾಮಿ ಕಾರುಗಳನ್ನೂ ಸಹ ವಿರಾಟ್ ಹೊಂದಿದ್ದಾರೆ.