ಟೆನ್ನಿಸ್ ತಾರೆ ಸಾನಿಯಾ ಮಿರ್ಜಾಗೆ ಈ ಕ್ರಿಕೆಟಿಗನೆಂದರೆ ಪಂಚಪ್ರಾಣ: ಮೂಗುತಿ ಸುಂದರಿ ಮನಗೆದ್ದವ ಬೇರಾರು ಅಲ್ಲ…

Fri, 21 Jun 2024-2:41 pm,

ಭಾರತದ ಮಾಜಿ ಟೆನಿಸ್ ಸೆನ್ಸೇಶನ್ ಸಾನಿಯಾ ಮಿರ್ಜಾ ಕ್ರಿಕೆಟ್‌’ನ ದೊಡ್ಡ ಅಭಿಮಾನಿ. ಅನೇಕ ಸಂದರ್ಭದಲ್ಲಿ ಸ್ಟೇಡಿಯಂಗೆ ಆಗಮಿಸಿ ಪಂದ್ಯವನ್ನು ಎಂಜಾಯ್ ಮಾಡುವುದನ್ನು ಕಾಣಬಹುದು.

ಇನ್ನು ಸಾನಿಯಾಗೆ ಟೀಂ ಇಂಡಿಯಾದ ಓರ್ವ ಕ್ರಿಕೆಟಿಗನೆಂದರೆ ಬಲು ಪ್ರಿಯವಂತೆ. ಆ ಬಗ್ಗೆ ಸಂದರ್ಶನವೊಂದರಲ್ಲಿ ಸ್ವತಃ ಅವರೇ ಹೇಳಿಕೊಂಡಿದ್ದಾರೆ.

ಈ ಪಾಡ್ ಕಾಸ್ಟ್’ನಲ್ಲಿ ಅಭಿಮಾನಿಯೊಬ್ಬ, ಸಾನಿಯಾ ಮಿರ್ಜಾಗೆ ಟೀಂ ಇಂಡಿಯಾದ ನೆಚ್ಚಿನ ಕ್ರಿಕೆಟಿಗ ಯಾರೆಂದು ಪ್ರಶ್ನೆ ಮಾಡಿದ್ದಾನೆ.

ಇದಕ್ಕೆ ಪ್ರತಿಕ್ರಿಯಿಸಿದ ಸಾನಿಯಾ, “ಭಾರತೀಯ ಕ್ರಿಕೆಟ್‌’ನಲ್ಲಿ ಅನೇಕ ಶ್ರೇಷ್ಠ ಕ್ರಿಕೆಟಿಗರು ಇದ್ದಾರೆ. ಆದರೆ ವಿರಾಟ್ ಕೊಹ್ಲಿ, ಸಚಿನ್ ತೆಂಡೂಲ್ಕರ್ ಮತ್ತು ಎಂಎಸ್ ಧೋನಿ ನೆಚ್ಚಿನ ಕ್ರಿಕೆಟಿಗರು” ಎಂದು ಹೆಸರಿಸಿದ್ದಾರೆ.

ಇಷ್ಟೇ ಅಲ್ಲ, ವಿರಾಟ್ ಕೊಹ್ಲಿಯನ್ನು ಒಂದೇ ಪದದಲ್ಲಿ ವಿವರಿಸಬೇಕಾದರೆ ಅದು ಯಾವ ಪದ ಎಂದು ಅಭಿಮಾನಿಯೊಬ್ಬರು ಸಾನಿಯಾ ಮಿರ್ಜಾಗೆ ಕೇಳಿದರು. ಇದಕ್ಕೆ ಒಂದೇ ಪದದಲ್ಲಿ ಉತ್ತರಿಸದ ಸಾನಿಯಾ, ‘ಚಾಂಪಿಯನ್’ ಎಂದು ಹೇಳಿದ್ದಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link