ದಿನಾ ಬೆಳಿಗ್ಗೆ ಈ ಒಣಹಣ್ಣಿನ ರಸ ಕುಡಿಯೋದಕ್ಕೆ ಇಷ್ಟೊಂದು ಫಿಟ್ ಆಗಿದ್ದಾರಂತೆ ವಿರಾಟ್ ಕೊಹ್ಲಿ! ಸಣ್ಣ ಆಗೋಕೆ ಪರದಾಡೋರಿಗೆ ಸ್ವತಃ ಅವರೇ ಹೇಳಿದ ಟಿಪ್ಸ್ ಇದು
ಸಾಮಾನ್ಯವಾಗಿ ಜನರು ದೀರ್ಘಕಾಲದವರೆಗೆ ಫಿಟ್ ಆಗಿರಲು ಏನು ಮಾಡಬೇಕು ಎಂದು ತಿಳಿಯುವ ಆಸಕ್ತಿ ಹೊಂದಿರುತ್ತಾರೆ. ಇನ್ನೊಂದೆಡೆ ಇತ್ತೀಚಿನ ದಿನಗಳಲ್ಲಿ ಆಟಗಾರರು ತಮ್ಮ ಫಿಟ್ನೆಸ್ ಬಗ್ಗೆ ಬಹಳ ಜಾಗೃತರಾಗಿದ್ದಾರೆ. ಕ್ರಿಕೆಟ್‌ನಲ್ಲಿ ಫಿಟ್‌ನೆಟ್‌ನಲ್ಲಿ ವಿರಾಟ್‌ಗೆ ಸರಿಸಾಟಿ ಯಾರೂ ಇಲ್ಲ. ತನ್ನನ್ನು ತಾನು ಫಿಟ್ ಆಗಿಟ್ಟುಕೊಳ್ಳಲು, ಕೊಹ್ಲಿ ಕಠಿಣ ಪರಿಶ್ರಮ ಮಾತ್ರವಲ್ಲದೆ ತನ್ನ ಆಹಾರಕ್ರಮದ ಬಗ್ಗೆಯೂ ಕಾಳಜಿ ವಹಿಸುತ್ತಾರೆ.
35 ನೇ ವಯಸ್ಸಿನಲ್ಲೂ 20ರ ಯುವಕನಂತೆ ಕಾಣುವ ಕೊಹ್ಲಿ ಫಿಟ್ನೆಸ್ ಸೀಕ್ರೆಟ್ ಅನೇಕರಿಗೆ ತಿಳಿದಿಲ್ಲ. ಅಂದಹಾಗೆ ಕಳೆದ ಕೆಲವು ವರ್ಷಗಳಿಂದ ಕೊಹ್ಲಿ ಶುದ್ಧ ಸಸ್ಯಾಹಾರಿಯಾಗಿದ್ದಾರೆ.
ವಿರಾಟ್ ಕೊಹ್ಲಿ ಕ್ರಿಕೆಟ್ ಜಗತ್ತಿನಲ್ಲಿ ಜನಪ್ರಿಯ ಹೆಸರು. ಅವರ ಕ್ರೀಡೆಯ ಜೊತೆಗೆ ಅವರ ಫಿಟ್‌ನೆಸ್ ವಿಚಾರದಿಂದಲೂ ಫೇಮಸ್ ಆಗಿದ್ದಾರೆ. ತನ್ನನ್ನು ತಾನು ಫಿಟ್ ಆಗಿಟ್ಟುಕೊಳ್ಳಲು, ಕೆಲಸದ ಜೊತೆಯಲ್ಲಿ ಆಹಾರಕ್ರಮವನ್ನು ಸಹ ನೋಡಿಕೊಳ್ಳುತ್ತಾರೆ. ಜಿಮ್‌ನಲ್ಲಿ ಗಂಟೆಗಟ್ಟಲೆ ಕಳೆಯುವುದರ ಜೊತೆಗೆ, ತಮ್ಮ ಆಹಾರದಲ್ಲಿ ಪ್ರೋಟೀನ್ ಇತ್ಯಾದಿಗಳನ್ನು ಸಹ ನೋಡಿಕೊಳ್ಳುತ್ತಾರೆ.
ವಿರಾಟ್ ಕೊಹ್ಲಿ ತಮ್ಮ ಕ್ರಿಕೆಟ್ ವೃತ್ತಿಜೀವನದ ಆರಂಭದಿಂದಲೂ ಇಲ್ಲಿಯವರೆಗೆ ತಮ್ಮ ಫಿಟ್ನೆಸ್ ಬಗ್ಗೆ ತುಂಬಾ ಕಾಳಜಿ ವಹಿಸಿದ್ದಾರೆ. ವಿರಾಟ್ ಹಸು ಅಥವಾ ಎಮ್ಮೆ ಹಾಲು ಕುಡಿಯುವುದಿಲ್ಲ. ಬದಲಾಗಿ ಬಾದಾಮಿ ಹಾಲು ಕುಡಿಯುತ್ತಾರಂತೆ. ಈ ಬಗ್ಗೆ ಕೆಲ ಸಮಯದ ಹಿಂದೆ ಸಂದರ್ಶನವೊಂದರಲ್ಲಿ ಹೇಳಿದ್ದರು. ಬಾದಾಮಿ ಹಾಲು ಏಕೆ ಕುಡಿಯುತ್ತೇನೆ ಎಂಬುದನ್ನು ಸಹ ವಿರಾಟ್ ಸಂದರ್ಶನದಲ್ಲಿ ಹೇಳಿದ್ದರು.
ಅದರಲ್ಲಿ ಕೊಬ್ಬಿನಂಶ ತುಂಬಾ ಕಡಿಮೆ. ಇದು ತೂಕವನ್ನು ನಿರ್ವಹಿಸಲು ಉತ್ತಮವೆಂದು ಪರಿಗಣಿಸಲಾಗಿದೆ. ಲ್ಯಾಕ್ಟೋಸ್ ಅನ್ನು ಸಹ ಹೊಂದಿರುವುದಿಲ್ಲ. ಅದಕ್ಕಾಗಿಯೇ ನಾನು ಈ ಸ್ಪೆಷಲ್ ಹಾಲನ್ನು ಕುಡಿಯುತ್ತೇನೆ ಎಂದು ಹೇಳಿದ್ದಾರೆ.
ವಿರಾಟ್ ಕೊಹ್ಲಿ ಮೊದಲು ಮಾಂಸಾಹಾರ ಸೇವನೆ ಮಾಡುತ್ತಿದ್ದರು. ಅಂದರೆ, 2018 ರ ಮೊದಲು... ಆದರೆ ಆ ಬಳಿಕ ಗಂಭೀರ ಆರೋಗ್ಯ ಸಮಸ್ಯೆಯನ್ನು ಎದುರಿಸಿದ ಅವರು ಶುದ್ಧ ಸಸ್ಯಾಹಾರಿಯಾಗಿದ್ದಾರೆ.
ವಿರಾಟ್ ಕೊಹ್ಲಿ ತಮ್ಮ ಆಹಾರದಲ್ಲಿ ಈ 7 ವಿಷಯಗಳನ್ನು ಸೇರಿಸಿಕೊಂಡಿದ್ದಾರೆ. 2 ಕಪ್ ಕಾಫಿ, ದಾಲ್, ಪಾಲಕ್, ನವಣೆ, ಗ್ರೀನ್ಸ್ ಮತ್ತು ದೋಸೆ ಇಷ್ಟು ಮಾತ್ರ ಸೇರಿವೆ. ಸಕ್ಕರೆ ಅಥವಾ ಯಾವುದೇ ಸಿಹಿಯನ್ನು ತನ್ನ ಆಹಾರ ಕ್ರಮದಲ್ಲಿ ವಿರಾಟ್ ಸೇರಿಸುತ್ತಿಲ್ಲ.