RCB ಅಭಿಮಾನಿಗಳಿಗೆ ಗುಡ್ ನ್ಯೂಸ್..ತಂಡಕ್ಕೆ ಕಿಂಗ್ ಕೊಹ್ಲಿ ಕ್ಯಾಪ್ಟನ್..!
IPL 2025 ಋತುವಿನ ಮೆಗಾ ಹರಾಜಿಗೆ ಎಲ್ಲಾ ತಂಡಗಳು ಸಜ್ಜಾಗಿದೆ. ಅದರಲ್ಲೂ ಉಳಿಸಿಕೊಳ್ಳುವ ಆಟಗಾರರ ಬಗ್ಗೆ ಈಗಾಗಲೇ ತಿಳುವಳಿಕೆಗೆ ಬಂದಿರುವ ಆರ್‌ಸಿಬಿ, ಮೆಗಾ ಹರಾಜಿನಲ್ಲಿ ಅನುಸರಿಸಬೇಕಾದ ಯೋಜನೆಗಳ ಮೇಲೆ ಗಮನಹರಿಸಿದೆ. RCB ಮುಖ್ಯ ಕೋಚ್ ಆಂಡಿ ಫ್ಲವರ್ ನೇತೃತ್ವದಲ್ಲಿ RCB ಮುಂಬರುವ ಋತುವಿಗೆ ಸಿದ್ಧವಾಗುತ್ತಿದೆ.
ಮತ್ತೊಂದೆಡೆ ಬಿಸಿಸಿಐ ಕೂಡ ಮೆಗಾ ಹರಾಜು ಆಯೋಜನೆಯತ್ತ ಒತ್ತು ನೀಡಿದೆ. ಧಾರಣ ನೀತಿ ರೂಪಿಸುವ ಕಾರ್ಯದಲ್ಲಿ ತೊಡಗಿರುವ ಬಿಸಿಸಿಐ ಈಗಾಗಲೇ 10 ಫ್ರಾಂಚೈಸಿಗಳ ಸಲಹೆ, ಸೂಚನೆಗಳನ್ನು ಪಡೆದುಕೊಂಡಿದೆ.
ಈ ವರ್ಷದ ಡಿಸೆಂಬರ್‌ನಲ್ಲಿ ಮೆಗಾ ಹರಾಜು ನಡೆಯುವ ಸಾಧ್ಯತೆ ಇದ್ದು, ಮೆಗಾ ಹರಾಜಿನ ನಿಯಮಗಳ ಪ್ರಕಾರ, ಎಲ್ಲಾ ತಂಡಗಳಿಗೂ ಗರಿಷ್ಠ ನಾಲ್ಕರಿಂದ ಐದು ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶವಿದೆ.
ಆದರೆ ಮೆಗಾ ಹರಾಜಿಗೂ ಮುನ್ನ ಆರ್‌ಸಿಬಿ ಹೊಸ ನಾಯಕನನ್ನು ಆಯ್ಕೆ ಮಾಡಬೇಕಿತ್ತು. ವಿರಾಟ್ ಕೊಹ್ಲಿ ನಂತರ ಆರ್‌ಸಿಬಿ ನಾಯಕತ್ವ ವಹಿಸಿಕೊಂಡಿದ್ದ ಫಾಫ್ ಡುಪ್ಲೆಸಿಸ್ ಅವರನ್ನು ಉಳಿಸಿಕೊಳ್ಳುವ ಅವಕಾಶವಿಲ್ಲದ ಕಾರಣ ವಿರಾಟ್ ಕೊಹ್ಲಿ RCB ತಂಡದ ಮುಂಭರುವ ನಾಯಕ ಎಂದು ಹೇಳಲಾಗುತ್ತಿದೆ.
ಇನ್ನು ಮೂರು ವರ್ಷಗಳವರೆಗೆ ಮೆಗಾ ಹರಾಜು ನಡೆಯುವುದಿಲ್ಲ. ಈ ಸಂದರ್ಭದಲ್ಲಿ, 40 ವರ್ಷದ ಫಾಫ್ ಡುಪ್ಲೆಸಿಸ್ ಅವರನ್ನು ಉಳಿಸಿಕೊಳ್ಳುವ ಮೂಲಕ RCB ಅಪಾಯವನ್ನು ತೆಗೆದುಕೊಳ್ಳಲು ಭಯಸದ ಕಾರಣ ಇವರನ್ನು ಕೈ ಬಿಡುವ ನಿರ್ಧಾರಕ್ಕೆ RCB ತಂಡ ಬಂದಿದೆ.
ಒಂದು ವೇಳೆ ಅವರನ್ನು ಉಳಿಸಿಕೊಂಡರೆ ನಾಯಕತ್ವದ ಜವಾಬ್ದಾರಿಯಿಂದ ಕೆಳಗಿಳಿಯುವ ಸಾಧ್ಯತೆಗಳಿವೆ. ಹರಾಜಿನಲ್ಲಿ ಭಾರತದ ಸ್ಟಾರ್ ಆಟಗಾರನನ್ನು ಖರೀದಿಸಿ ನಾಯಕನನ್ನಾಗಿ ಆಯ್ಕೆ ಮಾಡುವುದು ಆರ್‌ಸಿಬಿ ಆಲೋಚನೆಯಂತೆ.
ಪ್ರಸ್ತುತ ಮುಂಬೈ ಇಂಡಿಯನ್ಸ್ ತಂಡದಲ್ಲಿರುವ ಜಸ್ಪ್ರೀತ್ ಬುಮ್ರಾ ಮತ್ತು ಸೂರ್ಯಕುಮಾರ್ ಯಾದವ್ ಮತ್ತು ಲಕ್ನೋ ಸೂಪರ್‌ಜೈಂಟ್ಸ್ ನಾಯಕ ಕೆಎಲ್ ರಾಹುಲ್ ಅವರನ್ನು ಆರ್‌ಸಿಬಿ ಟಾರ್ಗೆಟ್ ಮಾಡಿದೆ ಎಂದು ವರದಿಯಾಗಿದೆ.
ವಿರಾಟ್ ಕೊಹ್ಲಿಗೆ ಮತ್ತೊಮ್ಮೆ ನಾಯಕತ್ವ ನೀಡಿ ತಂಡಕ್ಕೆ ಬೇಕಾದ ಆಟಗಾರರನ್ನು ಖರೀದಿಸುವುದು ಉತ್ತಮ ಎಂದು ಫ್ರಾಂಚೈಸಿ ಮಾಲೀಕರು ಯೋಚಿಸುತ್ತಿರುವಂತಿದೆ.
ವಿರಾಟ್ ಕೊಹ್ಲಿ ಮತ್ತೆ ನಾಯಕತ್ವ ವಹಿಸಿಕೊಳ್ಳಲು ಸಿದ್ಧರಿಲ್ಲದಿದ್ದರೂ, ಫ್ರಾಂಚೈಸಿ,ಕೊಹ್ಲಿ ಅವರನ್ನು ಮನವೊಲಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರ್‌ಸಿಬಿ ಮೂಲಗಳು ತಿಳಿಸಿವೆ.
ವಿರಾಟ್ ಕೊಹ್ಲಿ ತಂಡಕ್ಕಾಗಿ ಏನು ಬೇಕಾದರೂ ಮಾಡಲು ಸಿದ್ಧ. ಹಾಗೆ ನೋಡಿದರೆ ವಿರಾಟ್ ಕೊಹ್ಲಿ ಅವರನ್ನು ಮತ್ತೊಮ್ಮೆ ನಾಯಕತ್ವ ವಹಿಸಿಕೊಳ್ಳುವಂತೆ ಮನವೊಲಿಸಲು ಯತ್ನಿಸುತ್ತಿರುವಂತಿದೆ.
ಅದೇನೇ ಇರಲಿ ವಿರಾಟ್ ಕೊಹ್ಲಿ ಮತ್ತೊಮ್ಮೆ ಆರ್‌ಸಿಬಿ ನಾಯಕತ್ವ ವಹಿಸಿಕೊಂಡರೆ ತಂಡದ ಅಭಿಮಾನಿಗಳ ಸಂತಸಕ್ಕೆ ಮಿತಿಯೇ ಇಲ್ಲ. ಅಭಿಮಾನಿಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಕೊಹ್ಲಿಗೆ ನಾಯಕತ್ವ ವಹಿಸುವಂತೆ ಕೇಳುತ್ತಿದ್ದಾರೆ.
ಸದ್ಯ ಲಂಡನ್‌ನಲ್ಲಿರುವ ವಿರಾಟ್ ಕೊಹ್ಲಿ ತಮ್ಮ ಕುಟುಂಬ ಸದಸ್ಯರೊಂದಿಗೆ ಬಿಡುವಿನ ವೇಳೆಯನ್ನು ಕಳೆಯುತ್ತಿದ್ದಾರೆ.