ಅನುಷ್ಕಾ ಜೊತೆ ಮದುವೆ ಆಗಲು ನಕಲಿ ಹೆಸರು ಬಳಸಿದ್ದರಂತೆ ವಿರಾಟ್‌ ಕೊಹ್ಲಿ!?

Thu, 29 Feb 2024-7:58 am,

ಟೀಮ್‌ ಇಂಡಿಯಾ ಸ್ಟಾರ್‌ ಆಟಗಾರ ವಿರಾಟ್‌ ಕೊಹ್ಲಿ ತಮ್ಮ ಮದುವೆ ಸಮಯದಲ್ಲಿ ನಕಲಿ ಹೆಸರನ್ನು ಬಳಸಿ ಸುದ್ದಿಯಾಗಿದ್ದರು. 

ಸಂದರ್ಶನವೊಂದರಲ್ಲಿ ಅನುಷ್ಕಾ ಶರ್ಮಾ ಈ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ. ನಮ್ಮ ಕುಟುಂಬ ಮತ್ತು ಸ್ನೇಹಿತರನ್ನು ಒಳಗೊಂಡಂತೆ ಕೇವಲ 42 ಜನರು ಮಾತ್ರ ವಿವಾಹದಲ್ಲಿ ಭಾಗಿಯಾಗಬೇಕೆಂದು ನಾವು ಬಯಸಿದ್ದೆವು. 

ನನ್ನ ಮತ್ತು ವಿರಾಟ್ ವಿವಾಹವನ್ನು ಯಾವುದೇ ದೊಡ್ಡ ಸೆಲೆಬ್ರಿಟಿಯ ಮದುವೆ ರೀತಿ ಮಾಎಉವ ಹಂಬಲ ನಮಗೆ ಇರಲಿಲ್ಲ. ಹೀಗಾಗಿ ಅನೇಕ ಕಡೆ ವಿರಾಟ್‌ ತಮ್ಮ ನಿಜವಾದ ಹೆಸರನ್ನು ಮರೆ ಮಾಚಿ ನಕಲಿ ಹೆಸರು ಬಳಸಬೇಕಾದ ಅನಿವಾರ್ಯತೆ ಇತ್ತು. 

ಕ್ಯಾಟರಿಂಗ್ ಮಾಡುವವರ ಜೊತೆ ಮಾತನಾಡುವಾಗಲೂ ವಿರಾಟ್‌ ನಕಲಿ ಹೆಸರನ್ನೇ ಹೇಳಿದ್ದರು. ಆಗ ವಿರಾಟ್ ತಮ್ಮ ಹೆಸರನ್ನು ರಾಹುಲ್ ಎಂದು ಎಲ್ಲರಿಗೂ ಹೇಳಿದ್ದರು ಎಂದು ಅನುಷ್ಕಾ ಶರ್ಮಾ ಹೇಳಿದ್ದರು. 

2017ರಲ್ಲಿ ವಿರಾಟ್ ಮತ್ತು ಅನುಷ್ಕಾ ಮದುವೆಯಾದರು. ವಿರುಷ್ಕಾ ಇಟಲಿಯ ಹಳ್ಳಿಯೊಂದರಲ್ಲಿ ಮದುವೆಯಾದರು. ವಿವಾಹ ಸಮಾರಂಭದಲ್ಲಿ ಕೇವಲ 42 ಜನರು ಮಾತ್ರ ಭಾಗಿಯಾಗಿದ್ದರು. ಈಗ ಈ ಜೋಡಿಗೆ ವಾಮಿಕಾ ಮತ್ತು ಅಕಾಯ್‌ ಎಂಬ ಇಬ್ಬರು ಮಕ್ಕಳಿದ್ದಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link