Virat Kohli: ಅನುಷ್ಕಾಗೂ ಮುನ್ನ ಈ ನಟಿಯನ್ನೇ ಮದುವೆಯಾಗಲು ಬಯಸಿದ್ದರಂತೆ ವಿರಾಟ್! ಯಾರು ಗೊತ್ತಾ ಆ ಬ್ಯೂಟಿ?

Sat, 16 Mar 2024-11:33 am,

ಅನುಷ್ಕಾ ಜೊತೆ ವಿವಾಹವಾಗುವ ಮುನ್ನ ಸೂಪರ್ ಸ್ಟಾರ್ ಬ್ಯಾಟ್ಸ್’ಮನ್ ವಿರಾಟ್ ಕೊಹ್ಲಿ ಕೆಲ ನಟಿಯರ ಜೊತೆ ಒಂದಷ್ಟು ಕಾಲ ಡೇಟಿಂಗ್ ಮಾಡಿದ್ದರು ಎನ್ನಲಾಗುತ್ತದೆ.

ಆದರೆ ಅದರಲ್ಲಿ ಕೆಲವೊಂದಿಷ್ಟು ನಟಿಯರು ಈ ಸುದ್ದಿಯನ್ನು ತಳ್ಳಿಹಾಕಿದ್ದರೆ, ಓರ್ವ ನಟಿ ಮಾತ್ರ ನಾವಿಬ್ಬರು 2 ವರ್ಷಗಳ ಕಾಲ ಡೇಟಿಂಗ್ ಮಾಡಿದ್ದೆವು ಎಂದು ಸ್ವತಃ ಒಪ್ಪಿಕೊಂಡಿದ್ದರು.

ಆ ನಟಿ ಬೇರಾರು ಅಲ್ಲ, ಬ್ರೆಜಿಲಿಯನ್ ಬ್ಯೂಟಿ ಇಜಾಬೆಲ್ ಲೈಟ್. ಕೆಲ ಜಾಹೀರಾತುಗಳು ಮತ್ತು ಬಾಲಿವುಡ್ ಚಲನಚಿತ್ರಗಳಲ್ಲಿ ಇಜಾಬೆಲ್ ನಟಿಸಿದ್ದಾರೆ.

ಈ ಸಂಬಂಧದ ಬಗ್ಗೆ ಒಂದೊಮ್ಮೆ ಮಾತನಾಡಿದ್ದ ಅವರು, “ನಾನು ಭಾರತಕ್ಕೆ ಬಂದಾಗ ನನ್ನ ಮೊದಲ ಭಾರತೀಯ ಸ್ನೇಹಿತರಲ್ಲಿ ವಿರಾಟ್ ಒಬ್ಬರು. ನಾವು ಸ್ವಲ್ಪ ಸಮಯದವರೆಗೆ ಡೇಟಿಂಗ್ ಮಾಡುತ್ತಿದ್ದೆವು. ನಾವು ಸುಮಾರು ಎರಡು ವರ್ಷಗಳ ಕಾಲ ಒಟ್ಟಿಗೆ ಇದ್ದೆವು. ಆದರೆ ನಾವು ಅದನ್ನು ಸಾರ್ವಜನಿಕಗೊಳಿಸಲು ಬಯಸುವುದಿಲ್ಲ. ಹೌದು, ವಿರಾಟ್ ಮತ್ತು ನಾನು ಸಂಬಂಧ ಹೊಂದಿದ್ದೆವು" ಎಂದು ಬ್ರೆಜಿಲ್ ಸುಂದರಿ ಹೇಳಿದ್ದರು.

ಆದರೆ ಈ ಸಂಬಂಧ ಹೆಚ್ಚು ಕಾಲ ಉಳಿಯಲಿಲ್ಲ. ಕೆಲಸದ ಒತ್ತಡ ಮತ್ತು ಭಿನ್ನಾಭಿಪ್ರಾಯಗಳಿಂದಾಗಿ ಈ ಜೋಡಿ ದೂರವಾಗಲು ನಿರ್ಧರಿಸಿತು ಎನ್ನಲಾಗುತ್ತಿದೆ.

ಅಂದಹಾಗೆ ಸದ್ಯ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರನ್ನು ಪ್ರೀತಿಸಿ ಮದುವೆಯಾಗಿರುವ ಕೊಹ್ಲಿ, ಅಮೂಲ್ಯ ಸಂಬಂಧವನ್ನು ಹೊಂದಿದ್ದಾರೆ. ಈ ಜೋಡಿಗೆ ಇಬ್ಬರು ಮುದ್ದಾದ ಇಬ್ಬರು ಮಕ್ಕಳಿದ್ದಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link