Virat Kohli : ಕಿಂಗ್ ಕೊಹ್ಲಿ 18 ನಂಬರ್ ಜೆರ್ಸಿ ತೊಡುವುದು ಬಿಟ್ಟು ಹೋದ ಈ ವ್ಯಕ್ತಿಯ ನೆನಪಿಗಾಗಿ..!!
)
ಭಾರತ ತಂಡದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ವಿಶ್ವದ ಅಗ್ರ ಕ್ರಿಕೆಟಿಗರಲ್ಲಿ ಒಬ್ಬರು. 2008 ರಲ್ಲಿ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ ವಿರಾಟ್, ಬ್ಯಾಟ್ ಮೂಲಕ ರನ್‌ಗಳ ಮಳೆ ಸುರಿಸುತ್ತಾರೆ.
)
ವಿರಾಟ್ ಕೊಹ್ಲಿ ಜರ್ಸಿ ಸಂಖ್ಯೆ 18 ಅನ್ನು ಧರಿಸುತ್ತಾರೆ. ಅವರ ನಾಯಕತ್ವದಲ್ಲಿ ಭಾರತ ಅಂಡರ್-19 ವಿಶ್ವಕಪ್ ಗೆದ್ದುಕೊಂಡಿತು. ಆಗ ಕೂಡ ಕೊಹ್ಲಿ ಜೆರ್ಸಿಯಲ್ಲಿದ್ದ ಸಂಖ್ಯೆ ಕೇವಲ 18 ಆಗಿತ್ತು.
)
ಆಟಗಾರರು ತಮ್ಮ ನೆಚ್ಚಿನ ಸಂಖ್ಯೆ ಅಥವಾ ಜನ್ಮ ದಿನಾಂಕವನ್ನು ಜರ್ಸಿಯಲ್ಲಿ ಬರೆಸುತ್ತಾರೆ. ಆದರೆ ವಿರಾಟ್ ಕೊಹ್ಲಿ ವಿಷಯದಲ್ಲಿ ಹಾಗಲ್ಲ. ಹಾಗಾದರೆ ವಿರಾಟ್ ಕೊಹ್ಲಿ ಅವರ ಜೆರ್ಸಿ ಸಂಖ್ಯೆ 18 ಏಕೆ?
ವಿರಾಟ್ ಕೊಹ್ಲಿ ಅವರ ತಂದೆ 2006 ರಲ್ಲಿ ನಿಧನರಾದರು. ಅವರ ಮರಣದ ದಿನಾಂಕ ಡಿಸೆಂಬರ್ 18. ಈ ಕಾರಣಕ್ಕಾಗಿ ವಿರಾಟ್ ಕೊಹ್ಲಿ ತಮ್ಮ ಜೆರ್ಸಿ ನಂಬರ್ 18 ಅನ್ನು ಉಳಿಸಿಕೊಂಡಿದ್ದಾರೆ.
ತಂದೆ ಪ್ರೇಮ್ ಕೊಹ್ಲಿ ನಿಧನರಾದ ದಿನ ವಿರಾಟ್ ರಣಜಿ ಪಂದ್ಯ ಆಡುತ್ತಿದ್ದರು. ವಿರಾಟ್ ಒಂದು ದಿನ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆಡಬೇಕೆಂದು ಪ್ರೇಮ್ ಕೊಹ್ಲಿ ಬಯಸಿದ್ದರು.
ವಿರಾಟ್ 2008 ರಲ್ಲಿ ಭಾರತ ತಂಡಕ್ಕೆ ಪಾದಾರ್ಪಣೆ ಮಾಡಿದರು. ತಂದೆಯ ಆಸೆ ಈಡೇರಿಸಿದರು. ತಮ್ಮ ತಂದೆಯ ನೆನಪಿಗಾಗಿ ಜೆರ್ಸಿ ಸಂಖ್ಯೆ 18 ಅನ್ನು ಧರಿಸುತ್ತಾರೆ.