ಅನುಷ್ಕಾ ಶರ್ಮಾ ಸೀಕ್ರೆಟ್ ಬಾಯ್ ಫ್ರೆಂಡ್ ʼಈʼ ಖ್ಯಾತ ನಟ! ವಿರಾಟ್ ಕೊಹ್ಲಿ ಪತ್ನಿಯ ಕುರಿತಾದ ಶಾಕಿಂಗ್ ಸತ್ಯ ರಿವೀಲ್!!
ಸ್ಟಾರ್ ಜೋಡಿ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಅವರನ್ನು ಹೆಚ್ಚಾಗಿ 'ವಿರುಷ್ಕಾ' ಎಂದು ಕರೆಯುತ್ತಾರೆ. ಅವರು ಭಾರತದ ಅತ್ಯಂತ ಜನಪ್ರಿಯ ಸೆಲೆಬ್ರಿಟಿ ಜೋಡಿಗಳಲ್ಲಿ ಒಬ್ಬರು. ಅವರು ಡಿಸೆಂಬರ್ 2017 ರಲ್ಲಿ ವಿವಾಹವಾದರು. ಅವರಿಗೆ ವಾಮಿಕಾ ಮತ್ತು ಅಕೈ ಎಂಬ ಇಬ್ಬರು ಮಕ್ಕಳಿದ್ದಾರೆ.
ವಿರಾಟ್ ಕೊಹ್ಲಿ ಜೊತೆ ಮದುವೆಯಾದ ನಂತರ ಅನುಷ್ಕಾ ಶರ್ಮಾ ಸಿನಿಮಾದಿಂದ ದೂರ ಉಳಿದಿದ್ದಾರೆ. ಸದ್ಯ ಮಕ್ಕಳ ಪೋಷಣೆಯತ್ತ ಗಮನ ಹರಿಸಿದ್ದಾರೆ. ಮತ್ತೊಂದೆಡೆ, ಈ ದಂಪತಿಗಳು ಪ್ರಸ್ತುತ ಲಂಡನ್‌ನಲ್ಲಿ ನೆಲೆಸಿದ್ದಾರೆ. ಆದರೆ ವಿರಾಟ್ ಗೂ ಮುನ್ನ ಅನುಷ್ಕಾ ಮನಸ್ಸನ್ನು ಮತ್ತೊಬ್ಬರು ಕದ್ದಿದ್ದಾರೆ. ಆದರೆ ತನ್ನ ಪ್ರೇಮ ವಿಚಾರವನ್ನು ಅನುಷ್ಕಾಗೆ ಹೇಳಲು ಸಾಧ್ಯವಾಗಿರಲಿಲ್ಲವಂತೆ..
ಫ್ಯಾಮಿಲಿ ಜೊತೆ ಬ್ಯುಸಿಯಾಗಿರುವ ಅನುಷ್ಕಾ ಶರ್ಮಾ ನಟಿಯಾಗಿಯೂ ಬ್ಯುಸಿಯಾಗಿದ್ದಾರೆ. ಸದ್ಯ chakda xpress ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ.. ಈ ಸಿನಿಮಾದಲ್ಲಿ ಕ್ರಿಕೆಟಿಗ ಜೂಲನ್ ಗೋಸ್ವಾಮಿ ಪಾತ್ರ ಮಾಡಲಿದ್ದಾರಂತೆ.
ಅನುಷ್ಕಾ ಶಾರುಖ್ ಖಾನ್ ಜೊತೆಗಿನ ರಬ್ ದೇ ಬನಾದಿ ಜೋಡಿಯ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದು ಎಲ್ಲರಿಗೂ ತಿಳಿದೇ ಇದೆ. ನಂತರ ಕರಣ್ ಜೋಹರ್ ನಿರ್ದೇಶನದ ಏ ದಿನ್ ಹೈ ಮುಷ್ಕಿಲ್ ಚಿತ್ರದಲ್ಲಿ ಅನುಷ್ಕಾ ಶರ್ಮಾ ಮತ್ತು ರಣಬೀರ್ ಕಪೂರ್ ನಟಿಸಿದ್ದರು.
ಆ ಸಮಯದಲ್ಲಿ ನಟನೊಬ್ಬ ಅನುಷ್ಕಾಳನ್ನು ಪ್ರೀತಿಸುತ್ತಿದ್ದರು. ಆದರೆ ಆ ಪ್ರೇಮವನ್ನು ಹೇಳಲು ನಟನಿಗೆ ಅವಕಾಶಗಳೇ ಸಿಗಲ್ಲಿಲ್ಲವಂತೆ.. ಹಾಗಾದ್ರೆ ಅಷ್ಟಕ್ಕೂ ಯಾರು ಆ ನಟ ಅಂತೀರಾ.. ಇಲ್ಲಿದೆ ಉತ್ತರ..
ಕಾಫಿ ವಿತ್ ಕರಣ್ ಎಪಿಸೋಡ್ ನಲ್ಲಿ ಕರಣ್ ಜೋಹರ್ ಅವರು ಅನುಷ್ಕಾ ಜೊತೆ ಪ್ರೀತಿಯಲ್ಲಿ ಬಿದ್ದವರು ಎಂದು ಬಹಿರಂಗಪಡಿಸಿದ್ದಾರೆ. ಅನುಷ್ಕಾಗೆ ಮೊದಲು ನಂಬಲಾಗಲಿಲ್ಲ.. ನಂತರ ಕರಣ್ ತಮ್ಮ ಹೆಸರನ್ನೇ ತಾವು ಹೇಳಿಕೊಂಡಿದ್ದಾರೆ.. ಸದ್ಯ ಈ ಕಾಮಿಡಿ ಕ್ಲಿಪ್ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.