ಕೊನೆಗೂ ರಿವೀಲ್ ಆಯ್ತು ನಟಿ ಅನುಷ್ಕಾ ಶರ್ಮಾ ಬ್ಯೂಟಿ ಸೀಕ್ರೆಟ್! 36ರ ಹರೆಯದಲ್ಲೂ ತ್ವಚೆ ಫಳಫಳ ಅಂತಾ ಹೊಳೆಯಲು ಕಾರಣ ಈ ಎಣ್ಣೆ ಮಸಾಜ್
ಬಾಲಿವುಡ್ʼನ ಹೆಸರಾಂತ ನಟಿ ಅನುಷ್ಕಾ ಶರ್ಮಾ ವಯಸ್ಸು 36. ಆದರೆ ಇಂದಿಗೂ ಸೌಂದರ್ಯ ಕುಗ್ಗಿಲ್ಲ, ಫಿಟ್ನೆಸ್ ಕಡಿಮೆಯಾಗಿಲ್ಲ. ಬಳುಕುವ ಬಳ್ಳಿಯಂತೆ ಫಿಟ್ ಆಗಿದ್ದಾರೆ.
ಅನುಷ್ಕಾ ಶರ್ಮಾ ಅವರು ಅನುಸರಿಸುವ ಆರೋಗ್ಯಕರ ಆಹಾರ ಪದ್ಧತಿಯೇ ಇವರ ಸೌಂದರ್ಯದ ಸೀಕ್ರೆಟ್. ಅಂದಹಾಗೆ ಈ ಬಗ್ಗೆ ಅವರೇ ಹೇಳಿಕೊಂಡಿದ್ದು ನಿಮ್ಮ ದಿನಚರಿಗೂ ಇದು ಉಪಯೋಗವಾಗಬಹುದು.
ಕಾರ್ಬೋಹೈಡ್ರೇಟ್, ಪ್ರೋಟೀನ್ ಸಮೃದ್ಧ ಹಣ್ಣುಗಳನ್ನಷ್ಟೇ ಸೇವಿಸುವ ಅನುಷ್ಕಾ ಶರ್ಮಾ, ಇದು ತಮ್ಮ ತ್ವಚೆಯ ನೈಸರ್ಗಿಕ ಹೊಳಪನ್ನು ಕಾಪಾಡಲು ಸಹಾಯ ಮಾಡುತ್ತದೆ ಎಂದು ಹೇಳುತ್ತಾರೆ.
ನೈಸರ್ಗಿಕ ಹೊಳಪಿಗಾಗಿ ಬಾಳೆಹಣ್ಣು, ಜೇನುತುಪ್ಪ ಮತ್ತು ಹಾಲಿನ ಫೇಸ್ ಪ್ಯಾಕ್ʼಗಳನ್ನು ತಯಾರಿಸಿ ಹಚ್ಚುತ್ತಾರಂತೆ. ಹಣ್ಣುಗಳು ವಿಟಮಿನ್ ಮತ್ತು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿವೆ. ಇದು ಚರ್ಮವನ್ನು ಮೃದುವಾಗಿ ಇರಿಸುವ ಮೂಲಕ ಆರೋಗ್ಯ ಕಾಪಾಡುತ್ತದೆ ಎನ್ನುತ್ತಾರೆ ನಟಿ.
ಇದಷ್ಟೇ ಅಲ್ಲದೆ, ಹೊಳೆಯುವ ಚರ್ಮಕ್ಕಾಗಿ ತೆಂಗಿನ ಎಣ್ಣೆಯನ್ನು ಬಳಸುತ್ತಾರಂತೆ. ಹೆಚ್ಚು ಮೇಕಪ್ ಮಾಡಿಕೊಳ್ಳುವುದು ಅನುಷ್ಕಾಗೆ ಹಿಡಿಸದ ಸಂಗತಿ. ನೈಸರ್ಗಿಕವಾಗಿಯೇ ಅಂದ ಹೆಚ್ಚಿಸಿಕೊಳ್ಳಲು ಈ ಎಲ್ಲಾ ಟಿಪ್ಸ್ ಫಾಲೋ ಮಾಡುತ್ತೇನೆ ಎನ್ನುತ್ತಾ ಅನುಷ್ಕಾ.