ಈ ಇಬ್ಬರು ಇರದಿದ್ದರೆ ಇಂದು ʼವಿರಾಟ್‌ʼ ಇರುತ್ತಿರಲಿಲ್ಲ..! ಇವರ ಋಣದಲ್ಲಿ ಬದುಕಿದ್ದೇನೆ ಎಂದು ಬಹಿರಂಗವಾಗೇ ಹೇಳಿದ ಕೊಹ್ಲಿ! ಆ ʼದಿಗ್ಗಜರುʼ ಯಾರು ಗೊತ್ತಾ?

Tue, 01 Oct 2024-1:19 pm,

  ವಿರಾಟ್ ಕೊಹ್ಲಿ ವಿಶ್ವ ಕ್ರಿಕೆಟ್‌ನ ಮೂರು ಸ್ವರೂಪಗಳಲ್ಲಿ ಅತ್ಯುತ್ತಮ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರು ಎಂದು ಪರಿಗಣಿಸಲ್ಪಟ್ಟಿದ್ದಾರೆ. ಅಷ್ಟೇ ಅಲ್ಲದೆ, ಕಳೆದ ದಿನವಷ್ಟೇ 27 ಸಾವಿರ ರನ್‌ ಕಲೆ ಹಾಕಿ, ದಿಗ್ಗಜರ ಕ್ಲಬ್‌ಗೆ ಸೇರ್ಪಟೆಗೊಂಡಿದ್ದಾರೆ.

 

ಆದರೆ ಇಷ್ಟೆಲ್ಲಾ ದಾಖಲೆಗಳ ಸುರಿಮಳೆಗೈದಿರುವ ವಿರಾಟ್‌ ಕೊಹ್ಲಿ ನಡೆದುಬಂದ ಹಾದಿ ಮಾತ್ರ ಮುಳ್ಳಿನದ್ದೇ. ಒಂದಲ್ಲ ಒಂದು ಅಡೆತಡೆಗಳನ್ನು ಮೀರಿ ಬಂದ ವಿರಾಟ್‌ಗೆ ಇಂದು ʼಕಿಂಗ್‌ʼ ಎಂಬ ಪಟ್ಟವನ್ನು ಅಭಿಮಾನಿಗಳು ನೀಡಿದ್ದಾರೆ. ಆದರೆ ಇಂದು ರಾಜನಂತೆ ಮೆರೆಯುತ್ತಿರುವ ವಿರಾಟ್‌ಗೆ ಟೀಂ ಇಂಡಿಯಾದಲ್ಲಿ ಅವಕಾಶಗಳನ್ನು ನೀಡಿ ಮುನ್ನುಗ್ಗುವಂತೆ ಪ್ರೇರೇಪಿಸಿದ್ದು ಇಬ್ಬರು ದಿಗ್ಗಜರು.

 

ವೃತ್ತಿಜೀವನದ ಆರಂಭದಲ್ಲಿ ಅನೇಕ ಪಂದ್ಯಗಳಿಂದ ಅವರನ್ನು ಕೈಬಿಡಲಾಗಿತ್ತು. ಅವರ ODI ಚೊಚ್ಚಲ ಪಂದ್ಯವನ್ನಾಡಿದ ಮೂರು ವರ್ಷಗಳ ನಂತರ, ವಿರಾಟ್ ಕೊಹ್ಲಿ ಅಂತಿಮವಾಗಿ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದರು. 2011 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಪ್ರವೇಶ ಮಾಡಿದರು.

 

ವಿರಾಟ್ ತನ್ನ ಮೊದಲ ಟೆಸ್ಟ್ ಸರಣಿಯಲ್ಲಿ ಸ್ಮರಣೀಯ ರನ್ ಗಳಿಸಲಿಲ್ಲ, ಇದೇ ಕಾರಣಕ್ಕೆ ತಂಡದಿಂದ ಕೈಬಿಡಲಾಯಿತು. ಅವರು ಬದಲಿ ಆಟಗಾರನಾಗಿ ಇಂಗ್ಲೆಂಡ್ ಪ್ರವಾಸಕ್ಕೆ ಮರಳಿದರು. ವೆಸ್ಟ್ ಇಂಡೀಸ್ ವಿರುದ್ಧದ ಸ್ವದೇಶಿ ಸರಣಿಯಲ್ಲಿ ವಿರಾಟ್ ಪ್ಲೇಯಿಂಗ್ XI ನಲ್ಲಿ ಕಾಣಿಸಿಕೊಂಡರು.

 

ನಂತರದ ಆಸ್ಟ್ರೇಲಿಯಾ ಪ್ರವಾಸದ ಆರಂಭದಲ್ಲಿ ಮೊದಲ ಎರಡು ಪಂದ್ಯಗಳಲ್ಲಿ ಕೇವಲ 43 ರನ್ ಗಳಿಸಿದರು. ಆ ಸಂದರ್ಭದಲ್ಲಿ ಆಯ್ಕೆಗಾರರು ವಿರಾಟ್ ಅವರನ್ನು ಪ್ಲೇಯಿಂಗ್‌ XI ನಿಂದ ಕೈಬಿಟ್ಟು, ಪರ್ತ್‌ನಲ್ಲಿ ನಡೆಯಲಿದ್ದ ಮೂರನೇ ಟೆಸ್ಟ್ ಪಂದ್ಯಕ್ಕೆ ರೋಹಿತ್ ಶರ್ಮಾ ಅವರನ್ನು ತಂಡಕ್ಕೆ ಸೇರಿಸಲು ನಿರ್ಧರಿಸಿದ್ದರು. ಆದರೆ ನಾಯಕ, ಎಂ ಎಸ್ ಧೋನಿ ಮತ್ತು ಉಪನಾಯಕ ವೀರೇಂದ್ರ ಸೆಹ್ವಾಗ್ ವಿರಾಟ್‌ಗೆ ಬೆಂಬಲ ನೀಡಿದರು.

 

ಧೋನಿ ಮತ್ತು ಸೆಹ್ವಾಗ್ ಅವರ ನಿರ್ಧಾರದಿಂದಾಗಿ ರೋಹಿತ್ ಶರ್ಮಾಗೆ ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಪದಾರ್ಪಣೆಗೆ ಅವಕಾಶ ಸಿಗಲಿಲ್ಲ. ಅವರು ಅಂತಿಮವಾಗಿ ನವೆಂಬರ್ 2013 ರಲ್ಲಿ ತಮ್ಮ ಚೊಚ್ಚಲ ಪ್ರವೇಶ ಮಾಡಿದರು. "2012 ರಲ್ಲಿ ಪರ್ತ್‌ನಲ್ಲಿ ಕೊಹ್ಲಿ ಬದಲಿಗೆ ರೋಹಿತ್ ಶರ್ಮಾ ಅವರನ್ನು ಆಯ್ಕೆ ಮಾಡಲು ಆಯ್ಕೆಗಾರರು ಬಯಸಿದ್ದರು. ನಾನು ಉಪನಾಯಕನಾಗಿದ್ದೆ ಮತ್ತು ಧೋನಿ ತಂಡವನ್ನು ಮುನ್ನಡೆಸುತ್ತಿದ್ದರು. ನಾವಿಬ್ಬರು ಕೊಹ್ಲಿಯನ್ನು ಬೆಂಬಲಿಸಬೇಕೆಂದು ನಿರ್ಧರಿಸಿದ್ದೆವು... ಆ ಬಳಿಕ ಆಗಿದ್ದೆಲ್ಲಾ ಇತಿಹಾಸ"  ಎಂದು 2016 ರಲ್ಲಿ ಭಾರತ-ಇಂಗ್ಲೆಂಡ್ ಟೆಸ್ಟ್ ಸರಣಿಯಲ್ಲಿ ಕಾಮೆಂಟರಿ ಮಾಡುವಾಗ ಸೆಹ್ವಾಗ್ ಬಹಿರಂಗಪಡಿಸಿದ್ದರು.

 

ವಿರಾಟ್ ನಿರೀಕ್ಷೆಗೆ ತಕ್ಕಂತೆ ಆಡಿದರು. ಪರ್ತ್‌ನಂತಹ ಕಠಿಣ ಪಿಚ್‌ನಲ್ಲಿ 44 ಮತ್ತು 75 ರನ್ ಗಳಿಸಿದರು. ಅಡಿಲೇರ್‌ನಲ್ಲಿ ತಮ್ಮ ಚೊಚ್ಚಲ ಟೆಸ್ಟ್‌ಗೆ ಪದಾರ್ಪಣೆ ಮಾಡಿದರು. ಆ ಸರಣಿಯಲ್ಲಿ ಶತಕ ಸಿಡಿಸಿದ ಏಕೈಕ ಭಾರತೀಯ ಬ್ಯಾಟ್ಸ್‌ಮನ್ ವಿರಾಟ್. ಆದರೆ ಅಂದು ಭಾರತ ಎಲ್ಲಾ ನಾಲ್ಕು ಟೆಸ್ಟ್‌ಗಳಲ್ಲಿ ಸೋತಿತ್ತು.

 

ಅಂದಹಾಗೆ ವರ್ಷಗಳ ನಂತರ ಬಾಂಗ್ಲಾದೇಶ ವಿರುದ್ಧದ ಸರಣಿಯಲ್ಲಿ ಆಡುತ್ತಿರುವ ಕೊಹ್ಲಿ ವಿಶೇಷ ದಾಖಲೆಯನ್ನು ಬರೆದಿದ್ದಾರೆ. ಅಂದಹಾಗೆ ಈ ಹಿಂದೊಮ್ಮೆ ವಿರಾಟ್‌ ಅವರು ಸಂದರ್ಶನವೊಂದರಲ್ಲಿ, ತನ್ನ ವೃತ್ತಿಜೀವನದ ಆರಂಭದಲ್ಲಿ ಅವಕಾಶ ನೀಡಿದವರ ಬಗ್ಗೆ ಮಾತನಾಡಿದ್ದರು. ಅಷ್ಟೇ ಅಲ್ಲದೆ, ಕೊಹ್ಲಿ ನೋವು ಎಂದು ಯಾರಿಗಾದರೂ ಕರೆ ಮಾಡುವುದಾದರೆ ಅದು ಎಂಎಸ್‌ ಧೋನಿಗೆ ಮಾತ್ರ ಎಂಬುದನ್ನು ಕೂಡ ಬಹಿರಂಗಪಡಿಸಿದ್ದರು.

ZEENEWS TRENDING STORIES

By continuing to use the site, you agree to the use of cookies. You can find out more by Tapping this link