ರಾಹುಲ್ ದ್ರಾವಿಡ್ ಬಳಿಕ ಭಾರತದ ಹೆಡ್ ಕೋಚ್ ವಿವಿಎಸ್ ಲಕ್ಷಣ್ ಅಲ್ಲ! ಜಗತ್ತಿನ ಈ ಶ್ರೇಷ್ಠ ಮಾಜಿ ನಾಯಕ
ಕೆಲವು ಮೂಲಗಳ ಮಾಹಿತಿ ಪ್ರಕಾರ ವಿವಿಎಸ್ ಲಕ್ಷ್ಮಣ್ ಅವರು ಟೀಂ ಇಂಡಿಯಾದ ಮುಂದಿನ ಕೋಚ್ ಆಗಲಿದ್ದಾರೆ. ಆದರೆ ಇನ್ನೂ ಕೆಲವು ವರದಿಗಳ ಹೇಳುವ ಪ್ರಕಾರ ವಿರೇಂದ್ರ ಸೆಹ್ವಾಗ್ ಅಥವಾ ಮಹೇಂದ್ರ ಸಿಂಗ್ ಧೋನಿ ಈ ಸ್ಥಾನಕ್ಕೆ ಆಯ್ಕೆಯಾಗಲಿದ್ದಾರೆ.
ದ್ರಾವಿಡ್ ಅವರ ಮಾಜಿ ಸಹ ಆಟಗಾರ ಮತ್ತು ಎನ್’ಸಿಎ ಕ್ರಿಕೆಟ್ ನಿರ್ದೇಶಕ ವಿವಿಎಸ್ ಲಕ್ಷ್ಮಣ್ ಅವರನ್ನು ಮುಂದಿನ ಹುದ್ದೆಗೆ ಹಂಗಾಮಿ ತರಬೇತುದಾರರನ್ನಾಗಿ ಮಾಡಲಾಗಿದೆ.
ಆದರೆ ಇವೆಲ್ಲದರ ಹೊರತಾಗಿ ಎಂಎಸ್ ಧೋನಿ ಭಾರತದ ಮುಖ್ಯ ಕೋಚ್ ಆಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಟೀಂ ಇಂಡಿಯಾದ ಮಾಜಿ ನಾಯಕ, ಭಾರತಕ್ಕೆ ಮೂರು ವಿಭಾಗಗಳಲ್ಲೂ ಚಾಂಪಿಯನ್ ಟ್ರೋಫಿ ತಂದುಕೊಟ್ಟಿದ್ದ ಏಕೈಕ ನಾಯಕ ಈ ಸ್ಥಾನಕ್ಕೆ ಸೂಕ್ತ ಎಂದು ಅನೇಕರು ಹೇಳುತ್ತಿದ್ದಾರೆ.
ಇವರಲ್ಲದೆ, ವೀರೇಂದ್ರ ಸೆಹ್ವಾಗ್ ಅವರು ಕೂಡ ಮುಂದಿನ ಕೋಚ್ ಆಗುವ ಎಲ್ಲಾ ಸಾಧ್ಯತೆ ಇದೆ. ಧೋನಿಯಂತಲ್ಲದಿದ್ದರೂ, ಭಾರತದ ಮಾಜಿ ಓಪನರ್ ಐಪಿಎಲ್’ನಲ್ಲಿ ಪಂಜಾಬ್ ಕಿಂಗ್ಸ್ ತಂಡಕ್ಕೆ ಮಾಜಿ ಮುಖ್ಯ ತರಬೇತುದಾರರಾಗಿ ತರಬೇತಿ ನೀಡಿದ ಅನುಭವವನ್ನು ಹೊಂದಿದ್ದಾರೆ.
12 ವರ್ಷಗಳ ಹಿಂದೆ ಅಂದರೆ ಟೀಂ ಇಂಡಿಯಾ 2011ರಲ್ಲಿ ವಿಶ್ವಕಪ್ ಗೆದ್ದಾಗ ಗ್ಯಾರಿ ಕರ್ಸ್ಟನ್ ತಂಡದ ಕೋಚ್ ಆಗಿದ್ದರು. ಇದೀಗ ಮತ್ತೆ ಆಸಕ್ತಿ ತೋರಿದಲ್ಲಿ ದ್ರಾವಿಡ್ ಬಳಿಕ ಮುಖ್ಯ ಕೋಚ್ ಸ್ಥಾನಕ್ಕೆ ಇವರೂ ಕೂಡ ನೇಮಕಗೊಳ್ಳುವ ಸಾಧ್ಯತೆ ಹೆಚ್ಚಾಗಿದೆ.