ಈ ಎಲೆಯ ರಸ ಕುಡಿಯಿರಿ.. ಕಣ್ಣಿನ ದೃಷ್ಟಿ ಮಂಕಾಗೋದೇ ಇಲ್ಲ! ವಯಸ್ಸು 60 ದಾಟಿದ್ರೂ ಕನ್ನಡಕವೂ ಬೇಕಿಲ್ಲ, ಪೊರೆಯೂ ಬರೋದಿಲ್ಲ!
Papaya Leaves benefits: ಪಪ್ಪಾಯಿ ಎಲೆಯ ರಸದಲ್ಲಿ ವಿಟಮಿನ್ ಎ, ಇ, ಸಿ, ಕೆ ಮತ್ತು ಬಿ ಸಮೃದ್ಧವಾಗಿದೆ. ಈ ಜ್ಯೂಸ್ ಕುಡಿಯುವುದರಿಂದ ಜ್ವರ ಬರುವುದಿಲ್ಲ. ಹಸಿವು ಕಡಿಮೆ ಇರುವವರಿಗೂ ಇದು ಒಳ್ಳೆಯದು. ಪಪ್ಪಾಯಿ ಎಲೆಯ ರಸವನ್ನು ಸೇವಿಸುವುದರಿಂದ ಹಸಿವು ಹೆಚ್ಚುತ್ತದೆ ಮತ್ತು ಆರೋಗ್ಯ ಸುಧಾರಿಸುತ್ತದೆ.
ಪಪ್ಪಾಯಿ ಎಲೆಯ ರಸವು ದೇಹದಲ್ಲಿ ಇನ್ಸುಲಿನ್ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ರಕ್ತದಲ್ಲಿನ ಸಕ್ಕರೆ ಪ್ರಮಾಣ ನಿಯಂತ್ರಣದಲ್ಲಿರುತ್ತದೆ. ಮಧುಮೇಹ ಇರುವವರಿಗೆ ಪಪ್ಪಾಯಿ ಎಲೆಯ ರಸ ಅದ್ಭುತ ಮನೆಮದ್ದು.
ಪಪ್ಪಾಯಿ ಎಲೆಯ ರಸದಲ್ಲಿ ವಿಟಮಿನ್ ಎ ಸಮೃದ್ಧವಾಗಿರುವ ಕಾರಣ ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು. ಪಪ್ಪಾಯಿ ಎಲೆಯ ರಸ ಕುಡಿಯುವುದರಿಂದ ಕಣ್ಣಿನ ಪೊರೆ ಬರುವುದಿಲ್ಲ. ದೃಷ್ಟಿ ಮಂಕಾಗುವುದಿಲ್ಲ.
ಮಲಬದ್ಧತೆ ಸಮಸ್ಯೆಯಿಂದ ಬಳಲುತ್ತಿರುವವರು ಪಪ್ಪಾಯಿ ಎಲೆಯ ರಸವನ್ನು ಸೇವಿಸುವುದರಿಂದ ಸಮಸ್ಯೆ ಕಡಿಮೆಯಾಗುತ್ತದೆ. ಪಪ್ಪಾಯಿ ಎಲೆಯ ರಸವನ್ನು ಸೇವಿಸುವುದರಿಂದ ಕೀಲು ನೋವು ಕಡಿಮೆಯಾಗುತ್ತದೆ.
ಪಪ್ಪಾಯಿ ಎಲೆಗಳು ಫೀನಾಲಿಕ್ ಸಂಯುಕ್ತಗಳು, ಪಾಪೈನ್ ಮತ್ತು ಅಲ್ಕಾನಾಯ್ಡ್ಸ್ ಎಂಬ ಪೋಷಕಾಂಶಗಳನ್ನು ಹೊಂದಿರುತ್ತವೆ. ಅವು ಉತ್ಕರ್ಷಣ ನಿರೋಧಕಗಳಾಗಿ ಕಾರ್ಯನಿರ್ವಹಿಸುತ್ತವೆ ಮತ್ತು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ.
ಪಪ್ಪಾಯಿ ಎಲೆಗಳ ರಸವನ್ನು ಸೇವಿಸುವುದರಿಂದ ಹೊಟ್ಟೆಯ ಗ್ಯಾಸ್, ಅಲ್ಸರ್ ಮತ್ತು ಹೊಟ್ಟೆ ನೋವು ನಿವಾರಣೆಯಾಗುತ್ತದೆ. ಪಪ್ಪಾಯಿ ಎಲೆಯ ರಸವು ಮಹಿಳೆಯರ ಋತುಚಕ್ರದ ಸಮಸ್ಯೆಗಳನ್ನು ಸರಿಪಡಿಸಲು ತುಂಬಾ ಉಪಯುಕ್ತವಾಗಿದೆ. ಇದು ದೇಹದಲ್ಲಿನ ಹಾರ್ಮೋನುಗಳನ್ನು ನಿಯಂತ್ರಿಸುತ್ತದೆ.
ಸೂಚನೆ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ.