Vitamins For Women: ಈ ಜೀವಸತ್ವಗಳು ಮಹಿಳೆಯರ ನಿಜವಾದ ಸ್ನೇಹಿತರು, ಹಲವು ರೋಗಗಳಿಂದ ಮುಕ್ತಿ

Sun, 12 Mar 2023-7:13 am,

ಮಹಿಳೆಯರು 40ರಿಂದ 45ರ ವಯಸ್ಸನ್ನು ತಲುಪಿದಾಗ, ಅವರ ಋತುಬಂಧ(ಮುಟ್ಟಾಗುವಿಕೆ ನಿಲ್ಲುತ್ತದೆ) ಪ್ರಾರಂಭವಾಗುತ್ತದೆ. ಇದರಿಂದಾಗಿ ಅವರ ದೇಹದಲ್ಲಿ ಅನೇಕ ಬದಲಾವಣೆಗಳು ಕಂಡುಬರುತ್ತವೆ. ವಿಟಮಿನ್ ಎ ಸಹಾಯದಿಂದ ಆ ಪರಿಸ್ಥಿತಿಯಲ್ಲಿ ಸಮಸ್ಯೆ ನಿವಾರಿಸಬಹುದು. ಇದಕ್ಕಾಗಿ ಕ್ಯಾರೆಟ್, ಪಾಲಕ್, ಕುಂಬಳಕಾಯಿ ಬೀಜಗಳು ಮತ್ತು ಪಪ್ಪಾಯಿಯನ್ನು ಸೇವಿಸಬೇಕು.

ವಿಟಮಿನ್ ಬಿ 9 ಅಂದರೆ ಫೋಲಿಕ್ ಆಮ್ಲವು ಗರ್ಭಿಣಿ ಮಹಿಳೆಯರಿಗೆ ಬಹಳ ಮುಖ್ಯವಾದ ಪೋಷಕಾಂಶವಾಗಿದೆ. ಅವರ ದೇಹದಲ್ಲಿ ಈ ಪೋಷಕಾಂಶದ ಕೊರತೆಯಿದ್ದರೆ ಮಕ್ಕಳಲ್ಲಿ ಜನ್ಮ ದೋಷಗಳ ಸಮಸ್ಯೆ ಉಂಟಾಗಬಹುದು. ಇದಕ್ಕಾಗಿ ದೈನಂದಿನ ಆಹಾರದಲ್ಲಿ ಯೀಸ್ಟ್, ಬೀನ್ಸ್ ಮತ್ತು ಧಾನ್ಯಗಳನ್ನು ಸೇವಿಸಬೇಕು.  

ವಿಟಮಿನ್ ಡಿ ಮೂಲಕ ನಮ್ಮ ಮೂಳೆಗಳು ಬಲಗೊಳ್ಳುತ್ತವೆ, ವಯಸ್ಸಾದಂತೆ ಮಹಿಳೆಯರ ಮೂಳೆಗಳು ದುರ್ಬಲಗೊಳ್ಳಲು ಪ್ರಾರಂಭಿಸುತ್ತವೆ. ಆದ್ದರಿಂದ ಕ್ಯಾಲ್ಸಿಯಂ ಜೊತೆಗೆ ವಿಟಮಿನ್ ಡಿ ಸೇವನೆಯು ಸಹ ಬಹಳ ಮುಖ್ಯವಾಗಿದೆ. ಇದಕ್ಕಾಗಿ ದಿನವಿಡೀ 15 ರಿಂದ 30 ನಿಮಿಷಗಳ ಕಾಲ ಬಿಸಿಲಿನಲ್ಲಿ ಕಳೆಯಬೇಕು. ಹಾಲು, ಚೀಸ್, ಅಣಬೆಗಳು, ಕೊಬ್ಬಿನ ಮೀನು ಮತ್ತು ಮೊಟ್ಟೆಗಳನ್ನು ಸೇವಿಸಬೇಕು.

ವಿಟಮಿನ್ ಇ ಮಹಿಳೆಯರಿಗೆ ಬಹಳ ಮುಖ್ಯವಾಗಿದೆ. ಏಕೆಂದರೆ ಇದರ ಮೂಲಕ ಚರ್ಮ, ಕೂದಲು ಮತ್ತು ಉಗುರುಗಳು ಸುಂದರವಾಗುತ್ತವೆ. ಇದರೊಂದಿಗೆ ಕಲೆಗಳು ಮತ್ತು ಸುಕ್ಕುಗಳು ಸಹ ಕಣ್ಮರೆಯಾಗುತ್ತವೆ. ಇದಕ್ಕಾಗಿ ಕಡಲೆಹಿಟ್ಟು, ಬಾದಾಮಿ, ಪಾಲಕ್ ಮುಂತಾದ ಆಹಾರ ಪದಾರ್ಥಗಳನ್ನು ಸೇವಿಸಬಹುದು.

ಮಹಿಳೆಯರ ದೇಹದಲ್ಲಿ ಸಾಕಷ್ಟು ಪ್ರಮಾಣದ ವಿಟಮಿನ್ ಕೆ ಇದ್ದರೆ, ಪಿರಿಯಡ್ಸ್ ಮತ್ತು ಹೆರಿಗೆಯ ಸಮಯದಲ್ಲಿ ರಕ್ತಸ್ರಾವದ ಸಮಸ್ಯೆ ಕಡಿಮೆಯಾಗುತ್ತದೆ. ಇದಕ್ಕಾಗಿ ಹಸಿರು ತರಕಾರಿಗಳು ಮತ್ತು ಸೋಯಾಬೀನ್ ಎಣ್ಣೆಯನ್ನು ದೈನಂದಿನ ಆಹಾರದಲ್ಲಿ ಸೇರಿಸಿಕೊಳ್ಳಬಹುದು.

(ಗಮನಿಸಿರಿ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿ ಆಧರಿಸಿದೆ. ಇದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆ ತೆಗೆದುಕೊಳ್ಳಬೇಕು. ZEE NEWS ಇದನ್ನು ದೃಢಪಡಿಸುವುದಿಲ್ಲ.)

ZEENEWS TRENDING STORIES

By continuing to use the site, you agree to the use of cookies. You can find out more by Tapping this link