Vivo 3 Pro 5G ಮಾರಾಟ ಆರಂಭ !ಮೊದಲ ದಿನದಿಂದಲೇ ಭರ್ಜರಿ ಡಿಸ್ಕೌಂಟ್!ಇಷ್ಟು ಅಗ್ಗದ ಬೆಲೆಯಲ್ಲಿ ಇಂಥಹ ಫೋನ್ ಬೇರೆಲ್ಲೂ ಸಾಧ್ಯವಿಲ್ಲ !
Vivo T3 Pro ಮೊದಲ ಸೇಲ್ ಫ್ಲಿಪ್‌ಕಾರ್ಟ್‌ನಲ್ಲಿ ಮಧ್ಯಾಹ್ನ 12 ರಿಂದ ಆರಂಭವಾಗಲಿದೆ. ಮೊದಲ ದಿನದಿಂದಲೇ ಈ ಫೋನಿನ ಮೇಲೆ ಭಾರೀ ಡಿಸ್ಕೌಂಟ್ ಘೋಷಿಸಲಾಗಿದೆ.
ಹಲವು ವೈಶಿಷ್ಟ್ಯಗಳೊಂದಿಗೆ ಈ ಫೋನ್ ಮಾರುಕಟ್ಟೆಗೆ ಬಿಡುಗಡೆಯಾಗಿದೆ. ಈ ಮೊಬೈಲ್ ಫೋನ್ ಮೊಬೈಲ್ ಫೋನ್ ಕರ್ವ್ಡ್ AMOLED ಡಿಸ್ಪ್ಲೇಯನ್ನು ಹೊಂದಿದೆ. ಹ್ಯಾಂಡ್ಸೆಟ್ Snapdragon 7 Gen3 ಪ್ರೊಸೆಸರ್ ಮತ್ತು 50MP ಕ್ಯಾಮೆರಾವನ್ನು ಹೊಂದಿದೆ.
ವೇಗದ ಕೆಲಸಕ್ಕಾಗಿ, Vivo T3 Pro 5500mAh ಬ್ಯಾಟರಿಯನ್ನು 80W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.ಈ ಫೋನ್ ಬ್ಯಾಟರಿ ಸೇವರ್, ಓವರ್ ನೈಟ್ ಚಾರ್ಜಿಂಗ್ ಪ್ರೊಟೆಕ್ಷನ್, ಡ್ಯುಯಲ್ ಸಿಮ್ ಸ್ಲಾಟ್, ವೈ-ಫೈ, ಜಿಪಿಎಸ್, ಬ್ಲೂಟೂತ್ ಮತ್ತು ಯುಎಸ್‌ಬಿ ಟೈಪ್-ಸಿ ಪೋರ್ಟ್‌ನಂತಹ ವೈಶಿಷ್ಟ್ಯಗಳನ್ನು ಹೊಂದಿದೆ.
ಹೊಸ T-ಸರಣಿ ಸ್ಮಾರ್ಟ್ಫೋನ್ Vivo T3 Pro 5G 8GB + 128GB ಹೀಗೆ ಎರಡು ಸ್ಟೋರೇಜ್ ಆಯ್ಕೆಗಳಲ್ಲಿ ಲಭ್ಯವಿರಲಿದೆ.ಅವುಗಳ ಬೆಲೆ 21,999 ಮತ್ತು 23,999 ರೂ.ಆದರೆ ಈ ಫೋನಿನ ಮೇಲೆ 3,000 ರೂಗಳ ಬ್ಯಾಂಕ್ ರಿಯಾಯಿತಿ ಕೂಡಾ ನೀಡಲಾಗಿದೆ.ಅಲ್ಲದೆ ಲೋ ಕಾಸ್ಟ್ EMI ಕೂಡಾ ಇರಲಿದೆ.
ಈ ಫೋನಿನಲ್ಲಿ ಡೇಟಾವನ್ನು ಸುರಕ್ಷಿತವಾಗಿರಿಸಲು ಫಿಂಗರ್‌ಪ್ರಿಂಟ್ ಸೆನ್ಸಾರ್ ಮತ್ತು ಫೇಸ್ ಅನ್‌ಲಾಕ್ ಫೀಚರ್ ನೀಡಲಾಗಿದೆ.
ಈ Vivo ಸ್ಮಾರ್ಟ್‌ಫೋನ್ 50MP ಸೋನಿ IMX882 ಲೆನ್ಸ್ ಅನ್ನು ಮುಖ್ಯ ಸೆನ್ಸಾರ್ ಆಗಿ ಹೊಂದಿದೆ.ಇದರೊಂದಿಗೆ, 8MP ವೈಡ್ ಆಂಗಲ್ ಲೆನ್ಸ್ ಕೂಡಾ ಇದೆ. ಸೆಲ್ಫಿಗಾಗಿ ಮುಂಭಾಗದಲ್ಲಿ 16MP ಕ್ಯಾಮೆರಾವನ್ನು ನೀಡಲಾಗಿದೆ.ಇದು ಎಲ್ಇಡಿ ಫ್ಲ್ಯಾಷ್ ಲೈಟ್ ಅನ್ನು ಹೊಂದಿದೆ.