Vivo V9 ಮೊಬೈಲ್ ವಿಶೇಷತೆ ಏನು ಗೊತ್ತಾ?

Fri, 23 Mar 2018-6:29 pm,

ಭಾರತದಲ್ಲಿ ವಿವೋ V9 ಮಾರ್ಚ್ 23, 2018ರಂದು ಬಿಡುಗಡೆಯಾಗಿದೆ. ನೂತನ V9ನಲ್ಲಿ 6.3-ಇಂಚಿನ ಫುಲ್ ಎಚ್ಡಿ+ ಇನ್-ಸೆಲ್ ಐಪಿಎಸ್ ಪುಲ್ ವ್ಯೂ ಡಿಸ್ಪ್ಲೇ ಪ್ಯಾನಲ್ ಇದೆ.

 

ಕ್ಯಾಮೆರಾ : ಈ ಸ್ಮಾರ್ಟ್ಫೋನ್ 16-ಮೆಗಾಪಿಕ್ಸೆಲ್ ಮತ್ತು 5 ಮೆಗಾಪಿಕ್ಸೆಲ್ ಇಮೇಜ್ ಸೆನ್ಸಾರ್ ಜೊತೆ ಡ್ಯುಯಲ್ ರೇರ್ ಕ್ಯಾಮೆರಾ ಹೊಂದಿದ್ದು, ಸ್ಮಾರ್ಟ್ಫೋನ್ನ ಮುಂಭಾಗದಲ್ಲಿ, 24 ಮೆಗಾಪಿಕ್ಸೆಲ್ ಸೆಲ್ಫೀ ಕ್ಯಾಮೆರಾ ಹೊಂದಿದೆ. ಇದು ಪೋರ್ಟ್ರೇಟ್ ಮೋಡ್ ಸಪೋರ್ಟ್ ಮಾಡಲಿರುವ ಈ ಫೋನ್ನಲ್ಲಿ ಎಅರ್ ಸ್ಟಿಕರ್, ಫೇಸ್ ಬ್ಯೂಟಿ ಮತ್ತು ಸೆಲ್ಫಿ ವಿಶೇಷತೆಗಳಿವೆ. 

ಬ್ಯಾಟರಿ ಮತ್ತು ಸಾಫ್ಟ್ವೇರ್ : ಈ ಸ್ಮಾರ್ಟ್ಫೋನ್ ಒಕ್ಟಾ-ಕೋರ್ ಕ್ವಾಲ್ಕಮ್ ಸ್ನ್ಯಾಪ್ಡ್ರಾಗನ್ 660 SoC ಹೊಂದಿದ್ದು, ಇದರಲ್ಲಿ ಆಂಡ್ರಾಯ್ಡ್ ಓರಿಯೋ ನ ಮೂಲ ಆವೃತ್ತಿ ಇರಲಿದೆ. ಇದು 3260mAh ಬ್ಯಾಟರಿ ಸಾಮರ್ಥ್ಯ ಹೊಂದಿದೆ. 

ಮೆಮೊರಿ ಮತ್ತು ಶೇಖರಣಾ ಸಾಮರ್ಥ್ಯ : ವಿವೋ V9 ಸ್ಮಾರ್ಟ್ ಪೋನ್ 64GB ಇಂಟರ್ನಲ್ ಮೆಮೊರಿ ಮತ್ತು 4GB RAM ಶೇಖರಣಾ ಸಾಮರ್ಥ್ಯ ಹೊಂದಿದ್ದು, 256GB ವರೆಗೆ ಮೈಕ್ರೊ SD ಕಾರ್ಡ್ ಮೂಲಕ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ ಹೊಂದಿದೆ. 

ಬೆಲೆ : ವಿವೊ ವಿ 9 ಸ್ಮಾರ್ಟ್ ಫೋನ್ ಬೆಲೆ 25,000 ರೂ.ಗಳು.

ವಿವೋ V9 ಐಒಎಸ್ ಲೈಟ್ ಎಫೆಕ್ಟ್ಗಳನ್ನೂ ಸಪೋರ್ಟ್ ಮಾಡಲಿದ್ದು, ನ್ಯಾಚುರಲ್ ಲೈಟ್, ಸ್ಟುಡಿಯೋ ಲೈಟ್, ಸ್ಟೀರಿಯೋ ಲೈಟ್ ಮತ್ತು ಮೊನೊಕ್ರೋಮ್ ಎಫೆಕ್ಟ್ ಹೊಂದಿದೆ. ಅಲ್ಲದೆ, ಫಿಂಗರ್ ಪ್ರಿಂಟ್ ಸೆನ್ಸಾರ್, 8.1 ಓರಿಯೋ ಆಪರೇಟಿಂಗ್ ಸಿಸ್ಟಂ ಹೊಂದಿದೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link