Vomiting While Travelling: ಪ್ರಯಾಣದ ವೇಳೆ ಆಗುವ ವಾಂತಿಯನ್ನು ನಿಯಂತ್ರಿಸಲು ನಿಮ್ಮ ಬಳಿಯಿರಲಿ ಈ ಮೂರು ವಸ್ತುಗಳು
ನಿಮಗೆ ತುಂಬಾ ವಾಕರಿಕೆ ಅನುಭವವಾಗುತ್ತಿದ್ದರೆ, ತಕ್ಷಣ ಬಾಳೆಹಣ್ಣು ತಿನ್ನಿರಿ. ಬಾಳೆ ಹಣ್ಣನ್ನು ಬ್ಯಾಗ್ ನಲ್ಲಿ ತೆಗೆದುಕೊಂಡು ಹೋಗುವುದು ತುಂಬಾ ಸುಲಭ. ಬಾಳೆಹಣ್ಣು ಪ್ರಯಾಣದ ವೇಳೆ ಎದುರಾಗುವ ವಾಂತಿ ಸಮಸ್ಯೆಗೆ ಪರಿಹಾರ ನೀಡುತ್ತದೆ.
ನಿಂಬೆಯನ್ನು ಆರೋಗ್ಯದ ನಿಧಿ ಎಂದು ಕರೆಯಲಾಗುತ್ತದೆ. ಅದರ ರಸವು ಹೊಟ್ಟೆ ಸಮಸ್ಯೆಗಳನ್ನು ತೆಗೆದುಹಾಕುವ ಸಾಮರ್ಥ್ಯವನ್ನು ಹೊಂದಿದೆ. ನಿಮಗೆ ಚಡಪಡಿಕೆ ಅನಿಸಿದಾಗಲೆಲ್ಲ ನಿಂಬೆ ರಸವನ್ನು ಉಪ್ಪು ಮತ್ತು ನೀರಿನಲ್ಲಿ ಬೆರೆಸಿ ಕುಡಿಯಿರಿ. ಅದು ತ್ವರಿತ ಪರಿಹಾರವನ್ನು ನೀಡುತ್ತದೆ.
ಪ್ರಯಾಣದ ಸಮಯದಲ್ಲಿ ಶುಂಠಿಯನ್ನು ನಿಮ್ಮೊಂದಿಗೆ ಇಟ್ಟುಕೊಳ್ಳಿ. ಏಕೆಂದರೆ ಇದು ವಾಂತಿ ಮತ್ತು ವಾಕರಿಕೆ ಸಮಸ್ಯೆಯನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ. ನೀವು ಶುಂಠಿ ಕ್ಯಾಂಡಿ, ಶುಂಠಿ ಚಹಾವನ್ನು ಕೂಡಾ ನಿಮ್ಮ ಜೊತೆ ಕೊಂಡೊಯ್ಯ ಬಹುದು. ಶುಂಠಿ ಪುಡಿಯನ್ನು ಬಿಸಿನೀರಿನೊಂದಿಗೆ ಕುಡಿದರೆ ಹೊಟ್ಟೆಯ ಉರಿ ಕಡಿಮೆಯಾಗುತ್ತದೆ.
ವಿಶೇಷವಾಗಿ ಬೇಸಿಗೆಯಲ್ಲಿ, ಅನೇಕ ಜನರಿಗೆ ಪ್ರಯಾಣದಿಂದ ಸಮಸ್ಯೆ ಉಂಟಾಗುತ್ತದೆ. ಆ ಸಂದರ್ಭದಲ್ಲಿ ಜನರು ಪುದೀನ ಎಲೆಗಳು, ಪುದೀನ ಮಾತ್ರೆಗಳು ಅಥವಾ ಅದರ ಸಿರಪ್ ಅನ್ನು ತಮ್ಮೊಂದಿಗೆ ಇಟ್ಟುಕೊಳ್ಳಬೇಕು.
( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)