Voter ID & Aadhaar linking: ಆನ್‌ಲೈನ್‌ನಲ್ಲಿ ವೋಟರ್ ಐಡಿ ಜೊತೆಗೆ ಆಧಾರ್ ಕಾರ್ಡ್ ಲಿಂಕ್ ಹೀಗೆ ಮಾಡಿ
ಆಧಾರ್ ವಿವರಗಳನ್ನು ಹಂಚಿಕೊಳ್ಳುವುದು ಸ್ವಯಂಪ್ರೇರಿತವಾಗಿರುತ್ತದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ ಮತ್ತು ಮತದಾರರು ತಮ್ಮ ಮತದಾರರ ಗುರುತಿನ ಚೀಟಿಗೆ ಆಧಾರ್ ಲಿಂಕ್ ಮಾಡದಿರಲು ಸಾಕಷ್ಟು ಕಾರಣ ನೀಡಬೇಕು. ಮತದಾರರ ಗುರುತಿನ ಚೀಟಿಗೆ ವಿಶಿಷ್ಟ ಗುರುತಿನ ಸಂಖ್ಯೆಯನ್ನು ಲಿಂಕ್ ಮಾಡುವುದು ಐಚ್ಛಿಕವಾಗಿರುತ್ತದೆ ಮತ್ತು ಮತದಾರರು ಅದನ್ನು ಲಿಂಕ್ ಮಾಡದಿರಲು ಸಾಕಷ್ಟು ಕಾರಣವನ್ನು ಹೊಂದಿರಬೇಕು ಎಂದು ಮಾಜಿ ಮುಖ್ಯ ಚುನಾವಣಾ ಆಯುಕ್ತ ಸುಶೀಲ್ ಚಂದ್ರ ಹೇಳಿದ್ದಾರೆ.
ಮತದಾರರ ಗುರುತಿನ ಚೀಟಿಯೊಂದಿಗೆ ತಮ್ಮ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡಲು ಇಚ್ಛಿಸುವ ಜನರು ಹೊಸ ಫಾರ್ಮ್ 6B ಅನ್ನು ಭರ್ತಿ ಮಾಡುವ ಮೂಲಕ ಮಾಡಬಹುದು. ಮತದಾರರ ಆಧಾರ್ ಸಂಖ್ಯೆಯನ್ನು ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ಸಲ್ಲಿಸಬಹುದು.
ಚುನಾವಣಾ ದಾಖಲೆಯಲ್ಲಿ ಹೆಸರು ಕಂಡುಬರುವ ಪ್ರತಿಯೊಬ್ಬ ವ್ಯಕ್ತಿಯು ತನ್ನ ಆಧಾರ್ ಸಂಖ್ಯೆಯೊಂದಿಗೆ ಚುನಾವಣಾ ನೋಂದಣಿ ಅಧಿಕಾರಿಗೆ ನಮೂನೆ 6Bಯನ್ನು ಸಲ್ಲಿಸಬಹುದು.
ಚುನಾವಣಾ ಆಯೋಗದ ಅಧಿಕೃತ ವೆಬ್‌ಸೈಟ್ voterportal.eci.gov.in ಗೆ ಭೇಟಿ ನೀಡಿ
ನಿಮ್ಮ ಮೊಬೈಲ್ ಸಂಖ್ಯೆ, ಇಮೇಲ್ ಐಡಿ, ವೋಟರ್ ಐಡಿ ಸಂಖ್ಯೆಯನ್ನು ಬಳಸಿ ಪೋರ್ಟಲ್‌ಗೆ ಲಾಗಿನ್ ಮಾಡಿ
ನಿಮ್ಮ ರಾಜ್ಯ, ಜಿಲ್ಲೆ ಮತ್ತು ಇತರ ವೈಯಕ್ತಿಕ ವಿವರಗಳನ್ನು ನಮೂದಿಸಿ - ಹೆಸರು, ಹುಟ್ಟಿದ ದಿನಾಂಕ ಮತ್ತು ತಂದೆಯ ಹೆಸರು
Search Button ಕ್ಲಿಕ್ ಮಾಡಿ
ನಿಮ್ಮ ವಿವರಗಳು ಸರ್ಕಾರದ ಡೇಟಾಬೇಸ್‌ಗೆ ಹೊಂದಿಕೆಯಾಗಿ ನಂತರ ಸ್ಕ್ರೀನ್ ಮೇಲೆ ಕಾಣಿಸಿಕೊಳ್ಳುತ್ತದೆ
ಸ್ಕ್ರೀನ್‍ನ ಎಡಭಾಗದಲ್ಲಿರುವ ‘Feed Aadhaar No’ ಆಯ್ಕೆಯನ್ನು ಕ್ಲಿಕ್ ಮಾಡಿ
ಒಂದು Pop-up Page ಕಾಣಿಸುತ್ತದೆ
ಈಗ ಆಧಾರ್ ಕಾರ್ಡ್, ಆಧಾರ್ ಸಂಖ್ಯೆ, ಮತದಾರರ ಗುರುತಿನ ಸಂಖ್ಯೆ, ನೋಂದಾಯಿತ ಮೊಬೈಲ್ ಸಂಖ್ಯೆ ಅಥವಾ ನೋಂದಾಯಿತ ಇಮೇಲ್ ವಿಳಾಸದಲ್ಲಿ ಹೆಸರು ಭರ್ತಿ ಮಾಡಿ.
ನಿಮ್ಮ ವಿವರಗಳನ್ನು ಪರಿಶೀಲಿಸಿ ಮತ್ತು 'Submit' ಕ್ಲಿಕ್ ಮಾಡಿ.
ಈಗ ನಿಮಗೆ ಅಪ್ಲಿಕೇಶನ್ ಅನ್ನು ಯಶಸ್ವಿಯಾಗಿ ನೋಂದಾಯಿಸಲಾಗಿದೆ ಎಂಬ ಸಂದೇಶವು ಕಾಣಿಸಿಕೊಳ್ಳುತ್ತದೆ.