ಚಳಿಗಾಲದಲ್ಲಿ ತೂಕ ನಷ್ಟಕ್ಕೆ ಅತ್ಯುತ್ತಮ ಪರಿಹಾರ ವಾಕಿಂಗ್, ಸುಲಭವಾಗಿ ಕರಗುತ್ತೆ ಹೊಟ್ಟೆ..!
ಸರ್ವತೋಮುಖ ಆರೋಗ್ಯದ ದೃಷ್ಟಿಯಿಂದ ವಾಕಿಂಗ್ ಮಾಡುವುದು ಒಳ್ಳೆಯದು. ಪ್ರತಿನಿತ್ಯ ವಾಕಿಂಗ್ ಮಾಡುವವರೂ ಸಹ ಚಳಿಗಾಲದಲ್ಲಿ ಚಳಿ, ಶೀತದ ಕಾರಣಕ್ಕೆ ವಾಕಿಂಗ್ ಮಾಡುವುದನ್ನು ತಪ್ಪಿಸುತ್ತಾರೆ. ಆದರೆ, ಚಳಿಗಾಲದಲ್ಲಿ ವಾಕಿಂಗ್ ಮಾಡುವುದರಿಂದ ಸುಲಭವಾಗಿ ತೂಕ ಇಳಿಕೆ ಮಾಡಬಹುದು.
ಹೌದು, ಚಳಿಗಾಲದಲ್ಲಿ ವಾಕಿಂಗ್ ಮಾಡುವುದರಿಂದ ಗಮನಾರ್ಹ ತೂಕ ನಷ್ಟ ಸಾಧ್ಯವಾಗುತ್ತದೆ. ಅದು ಹೇಗೆ ಎಂದು ತಿಳಿಯಲು ಮುಂದೆ ಓದಿ...
ವಾಕಿಂಗ್ ಒಂದು ರೀತಿಯ ಏರೋಬಿಕ್ ವ್ಯಾಯಾಮವಾಗಿಡು ಇದು ದೇಹದಲ್ಲಿ ಶೇಖರಗೊಂಡಿರುವ ಕೊಬ್ಬನ್ನು ಸುಡಲು ಪ್ರಯೋಜನಕಾರಿ ಆಗಿದೆ.
ದೀರ್ಘಾವಧಿಯ ವಾಕಿಂಗ್ ಕ್ವಾಡ್ರೈಸ್ ಸ್ನಾಯುಗಳನ್ನು ಸಕ್ರಿಯಗೊಳಿಸುತ್ತದೆ. ಇದು ದೇಹದಲ್ಲಿ ಹೆಚ್ಚಿನ ಕ್ಯಾಲೋರಿ ಬರ್ನ್ ಆಗಲು ಸಹಕಾರಿ ಆಗಿದೆ.
ಕೆಲವರಿಗೆ ಫಾಸ್ಟ್ ಅಥವಾ ಬ್ರಿಕ್ಸ್ ವಾಕ್ ಸಾಧ್ಯವಾಗುವುದಿಲ್ಲ. ನಿಧಾನವಾಗಿ ನಡೆದರೆ ಅಥವಾ ಕಡಿಮೆ ಅಳತೆಯ ದೂರ ನಡೆದರೆ ತೂಕ ನಷ್ಟವಾಗುವುದಿಲ್ಲ ಎಂದುಕೊಳ್ಳುತ್ತಾರೆ. ಆದರೆ ಇದು ತಪ್ಪು ಕಲ್ಪನೆ, ಏನೂ ಮಾಡದೆ ಇರುವುದಕ್ಕಿಂತ ನಿಧಾನಗತಿಯ ವಾಕಿಂಗ್ ಮಾಡಿಯೂ ಕೂಡ ತೂಕ ಕಡಿಮೆ ಮಾಡಬಹುದು.
ಋತು ಯಾವುದೇ ಇರಲಿ ಹೊರಾಂಗಣದಲ್ಲಿ ಸಾಧ್ಯವಾಗದಿದ್ದರೆ ಕನಿಷ್ಟಪಕ್ಷ ಒಳಾಂಗಣದಲ್ಲಿ ವಾಕಿಂಗ್ ಮಾಡಿದರೂ ಕೂಡ ತೂಕ ನಷ್ಟದ ಜೊತೆಗೆ ಸ್ಥಿರವಾದ ಆರೋಗ್ಯ ಕಾಪಾಡಿಕೊಳ್ಳಬಹುದು.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.