Walking In Winter: ಈ 8 ಅದ್ಭುತ ಪ್ರಯೋಜನಗಳಿಗಾಗಿ ಚಳಿಗಾಲದಲ್ಲಿ ನಿತ್ಯ ವಾಕಿಂಗ್ ಮಾಡಿ
ವಾಕಿಂಗ್ ಆರೋಗ್ಯಕ್ಕೆ ಒಳ್ಳೆಯದು. ಸಾಮಾನ್ಯವಾಗಿ ನಮ್ಮಲ್ಲಿ ಬಹುತೇಕ ಜನರು ಚಳಿಗಾಲದಲ್ಲಿ ವಾಕಿಂಗ್ ಮಾಡುವುದನ್ನು ತಪ್ಪಿಸುತ್ತಾರೆ. ನೀವೂ ಅಂತಹವರಲ್ಲಿ ಒಬ್ಬರಾಗಿದ್ದರೆ, ಖಂಡಿತವಾಗಿಯೂ ಈ ತಪ್ಪನ್ನು ಮಾಡಬೇಡಿ. ಅಷ್ಟಕ್ಕೂ ಚಳಿಗಾಲದಲ್ಲಿ ವಾಕ್ ಮಾಡುವುದರಿಂದ ಆರೋಗ್ಯಕ್ಕೆ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ?
ಚಳಿಗಾಲದಲ್ಲಿ ಪ್ರತಿದಿನ ಬೆಳಿಗ್ಗೆ ವಾಕಿಂಗ್ ಮಾಡುವುದರಿಂದ ದೇಹದಿಂದ ಎಂಡಾರ್ಫಿನ್ ಹಾರ್ಮೋನ್ ನಂತಹ ಉತ್ತಮ ಹಾರ್ಮೋನುಗಳು ಬಿಡುಗಡೆಯಾಗುತ್ತವೆ. ಇದರಿಂದ ಮಾನಸಿಕ ಆರೋಗ್ಯ ಉತ್ತಮವಾಗಿರುತ್ತದೆ.
ಚಳಿಗಾಲದಲ್ಲಿ ನಿತ್ಯ ವಾಕ್ ಮಾಡುವುದರಿಂದ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಬಲಗೊಳ್ಳುತ್ತದೆ.
ಚಳಿಗಾಲದಲ್ಲಿ ನಿಯಮಿತ ವಾಕಿಂಗ್ ನಮ್ಮ ದೇಹದಲ್ಲಿ ಕ್ಯಾಲೋರಿಗಳನ್ನು ಬರ್ನ್ ಮಾಡಲು ಸಹಕಾರಿಯಾಗಿದ್ದು, ಇದು ನಮ್ಮ ಚಯಾಪಚಯವನ್ನು ಕೂಡ ಹೆಚ್ಚಿಸುತ್ತದೆ. ಇದರಿಂದ ತೂಕ ನಿಯಂತ್ರಣ ಸುಲಭವಾಗುತ್ತದೆ.
ಚಳಿಗಾಲದಲ್ಲಿ ವಾಕಿಂಗ್ ಮಾಡುವುದರಿಂದ ಶೀತ ವಾತಾವರಣದಲ್ಲಿ ಚುರುಕಾಗಿರುವುದರಿಂದ ಶ್ವಾಸಕೋಶದ ಸಾಮರ್ಥ್ಯ ಸುಧಾರಿಸುತ್ತದೆ. ಜೊತೆಗೆ ಉಸಿರಾಟದ ಸ್ನಾಯುಗಳನ್ನು ಬಳಪಡಿಸುತ್ತದೆ.
ಚಳಿಗಾಲದಲ್ಲಿ ನಿಯಮಿತ ನಡಿಗೆಯಿಂದ ದೇಹದಲ್ಲಿ ರಕ್ತ ಪರಿಚಲನೆಯು ಹೆಚ್ಚಾಗುತ್ತದೆ. ಇದು ಅಗತ್ಯವಾದ ಪೋಷಕಾಂಶಗಳು ಸಮಯಕ್ಕೆ ನಮ್ಮ ದೇಹದ ಮೂಳೆಗಳನ್ನು ತಲುಪುವುದನ್ನು ಖಚಿತಪಡಿಸುತ್ತದೆ. ಇದರಿಂದಾಗಿ, ಮೂಳೆಗಳು ಬಲಗೊಳ್ಳುತ್ತವೆ.
ಚಳಿಗಾಲದಲ್ಲಿ ವಾಕ್ ಮಾಡುವುದರಿಂದ, ವ್ಯಾಯಾಮ ಮಾಡುವುದರಿಂದ ಕೀಳುಗಳು ಉತ್ತಮ ವ್ಯಾಯಾಮವನ್ನು ಪಡೆಯುತ್ತದೆ. ಇದರಿಂದಾಗಿ, ಕೀಲುಗಳು ಲೂಬ್ರಿಕೇಟ್ ಆಗುತ್ತವೆ.ಜೊತೆಗೆ ಸಂಧಿವಾತದಂತಹ ಸಮಸ್ಯೆಗಳಿಗೆ ಸುಲಭ ಪರಿಹಾರ ಪಡೆಯಬಹುದು.
ಚಳಿಗಾಲದಲ್ಲಿ ನಿಯಮಿತ ವಾಕ್ ನಮ್ಮ ದೇಹದಲ್ಲಿ ರಕ್ತದ ಹರಿವನ್ನು ಹೆಚ್ಚಿಸುತ್ತದೆ, ಇದು ನಮ್ಮ ಮೆದುಳಿಗೆ ಸರಿಯಾದ ಪ್ರಮಾಣದ ಆಮ್ಲಜನಕವನ್ನು ಒದಗಿಸುತ್ತದೆ. ಇದರಿಂದಾಗಿ ಮನಸ್ಸು, ಮೆದುಳು ಚುರುಕಾಗುತ್ತದೆ.
ಚಳಿಗಾಲದಲ್ಲಿ ವಾಕ್ ಹಾಗೂ ವ್ಯಾಯಾಮ ಮಾಡುವುದರಿಂದ ನಿದ್ರೆಯ ಮಾದರಿ ಸುಧಾರಿಸುತ್ತದೆ. ನಿತ್ಯ ಕನಿಷ್ಠ 7-8 ಗಂಟೆಗಳ ಕಾಲ ಸಂಪೂರ್ಣ ನಿದ್ರೆ ಪಡೆಯುವುದರಿಂದ ಆರೋಗ್ಯವೂ ಸುಧಾರಿಸುತ್ತದೆ.
ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.