Weight Loss : ರನ್ನಿಂಗ್ ಅಥವಾ ವಾಕಿಂಗ್, ತೂಕ ಇಳಿಸಿಕೊಳ್ಳಲು ಯಾವುದು ಉತ್ತಮ? ಇಲ್ಲಿದೆ ನೋಡಿ

Mon, 09 Jan 2023-6:01 pm,

ವಯಸ್ಸಾದವರು ಈ ವಿಧಾನ ಅನುಸರಿಸಿ : ನೀವು ಅಧಿಕ ತೂಕ ಮತ್ತು ವಯಸ್ಸಿನವರಾಗಿದ್ದರೆ ಓಡುವ ಬದಲು ನಡೆಯುವುದು ಉತ್ತಮ. ವಯಸ್ಸಾದ ಜನರು ಓಟದ ಕಾರಣ ಸ್ನಾಯು ಮತ್ತು ಕೀಲು ನೋವಿನ ಸಮಸ್ಯೆಗಳನ್ನು ಹೊಂದಿರಬಹುದು.

ನೀವು ಎಷ್ಟು ಕಾಲ ವಾಕಿಂಗ್ ಮಾಡಬೇಕು? : ರನ್ನಿಂಗ್ ಮಾಡುವುದು ತೊಂದರೆಯಾದರೆ, ವಾಕಿಂಗ್ ಮೂಲಕವೂ ತೂಕವನ್ನು ಸುಲಭವಾಗಿ ಕಡಿಮೆ ಮಾಡಿಕೊಳ್ಳಬಹುದು. ತೂಕ ಇಳಿಸಿಕೊಳ್ಳಲು ದಿನಕ್ಕೆ 30 ನಿಮಿಷ ವಾಕಿಂಗ್ ಮಾಡಿದರೆ ಸಾಕು. ಆರಂಭದಲ್ಲಿ, ನೀವು ಸ್ವಲ್ಪ ಸಮಯದವರೆಗೆ ನಡಿಯುವುದು ಉತ್ತಮ.

ತೂಕವನ್ನು ಕಳೆದುಕೊಳ್ಳಲು ಈ ಮಾರ್ಗವು ಉತ್ತಮ : ತೂಕವನ್ನು ಕಳೆದುಕೊಳ್ಳಲು, ನೀವು ವೇಗವಾಗಿ ರನ್ನಿಂಗ್ ಮಾಡುವುದು, ವೇಗವಾಗಿ ನೀವು ಕ್ಯಾಲೊರಿಗಳನ್ನು ಬರ್ನ್ ಮಾಡುತ್ತದೆ ಎಂದು ಅಂದುಕೊಂಡರೆ ಅದು ತಪ್ಪು, ವಾಕಿಂಗ್ ಕ್ಯಾಲೊರಿಗಳನ್ನು ಬರ್ನ್ ಮಾಡಲು ಸಮಯ ತೆಗೆದುಕೊಳ್ಳುತ್ತದೆ. ಹೀಗಾಗಿ, ನೀವು ತೂಕ ಇಳಿಸಿಕೊಳ್ಳಲು ಬಯಸಿದರೆ, ರನ್ನಿಂಗ್ ಹೆಚ್ಚು ಪ್ರಯೋಜನಕಾರಿಯಾಗಿದೆ.

ಈ ರೀತಿ ಪ್ರಾರಂಭಿಸಿ : ತೂಕವನ್ನು ಕಡಿಮೆ ಮಾಡುವ ಎರಡೂ ವಿಧಾನಗಳು ಪರಿಣಾಮಕಾರಿ. ನೀವು ಪ್ರಾರಂಭಿಸುತ್ತಿದ್ದರೆ, ಮೊದಲ ಕೆಲವು ದಿನಗಳವರೆಗೆ ವಾಕಿಂಗ್ ಮಾಡಿ, ನಂತರ ರನ್ನಿಂಗ್ ಮಾಡಿ.

ತೂಕವನ್ನು ಹೇಗೆ ಕಳೆದುಕೊಳ್ಳುವುದು? : ರನ್ನಿಂಗ್ ಮತ್ತು ವಾಕಿಂಗ್ ದೇಹದಲ್ಲಿನ ಕ್ಯಾಲೊರಿಗಳನ್ನು ಕರಗುವಂತೆ ಮಾಡುತ್ತವೆ. ಹೆಚ್ಚು ದೈಹಿಕ ಚಟುವಟಿಕೆ, ದೇಹಕ್ಕೆ ಹೆಚ್ಚು ಶಕ್ತಿಯ ಅಗತ್ಯವಿರುತ್ತದೆ. ಈ ರೀತಿಯಾಗಿ ಕ್ಯಾಲೋರಿಗಳು ಮತ್ತು ಕೊಬ್ಬು ಕಣ್ಮರೆಯಾಗುತ್ತದೆ ಮತ್ತು ತೂಕ ಕಡಿಮೆಯಾಗುತ್ತದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link