Astro Tips: ಲವಂಗದ ಈ ಉಪಾಯಗಳು ನಿಮ್ಮ ಭಾಗ್ಯ ಬದಲಾಯಿಸಿ, ಅಪಾರ ಧನವೃಷ್ಠಿಯನ್ನು ತರುತ್ತವೆ!

Wed, 08 Feb 2023-10:38 pm,

1. ನೀವು ರಾಹು-ಕೇತು ದೋಷದಿಂದ ಪರಿಹಾರ: ಜಾತಕದಲ್ಲಿ ರಾಹು ಮತ್ತು ಕೇತು ಗ್ರಹಗಳು ಅಶುಭ ಸ್ಥಾನದಲ್ಲಿದ್ದರೆ, ಇದರಿಂದ ಹಣ ನಷ್ಟ, ಪ್ರಗತಿಯಲ್ಲಿ ಅಡೆತಡೆಗಳು, ರೋಗಗಳು, ಜೀವನದಲ್ಲಿ ಒತ್ತಡವನ್ನು ಎದುರಿಸಬೇಕಾಗುತ್ತದೆ. ಅವುಗಳನ್ನು ತಪ್ಪಿಸಲು, ಪ್ರತಿ ಶನಿವಾರ ಲವಂಗವನ್ನು ದಾನ ಮಾಡಿ ಅಥವಾ ಶಿವಲಿಂಗದ ಮೇಲೆ ಲವಂಗವನ್ನು ಅರ್ಪಿಸಿ. ಇದು ಎಲ್ಲಾ ತೊಂದರೆಗಳನ್ನು ನಿವಾರಿಸುತ್ತದೆ.  

2. ಕೆಲಸದಲ್ಲಿ ಕಾರ್ಯಸಿದ್ಧಿ ಪ್ರಾಪ್ತಿ: ಕೆಲಸದಲ್ಲಿ ಪದೇ ಪದೇ ವೈಫಲ್ಯಗಳು ಕಂಡುಬಂದರೆ ಅಥವಾ ಕೆಲಸ ಮಾಡಲು ಅಡೆತಡೆಗಳು ಕಂಡುಬಂದರೆ, ಪ್ರಮುಖ ಕೆಲಸಕ್ಕೆ ಮನೆಯಿಂದ ಹೊರಡುವಾಗ ಲವಂಗವನ್ನು ನಿಮ್ಮ ಬಾಯಿಯಲ್ಲಿ ಇಟ್ಟುಕೊಳ್ಳಿ. ಇದರ ನಂತರ, ಗಮ್ಯಸ್ಥಾನವನ್ನು ತಲುಪಿದ ನಂತರ, ಯಶಸ್ಸಿಗಾಗಿ ಧನದ ಅಧಿದೇವತೆಯನ್ನು ಪ್ರಾರ್ಥಿಸಿ. ನೀವು ಖಂಡಿತವಾಗಿಯೂ ಯಶಸ್ಸನ್ನು ಪಡೆಯುವಿರಿ.  

3. ಅಡೆತಡೆ ನಿವಾರಣೆಗೆ ಪರಿಹಾರ: ಎಲ್ಲಾ ಪ್ರಯತ್ನಗಳ ನಂತರವೂ ನಿಮ್ಮ ಕೆಲಸದಲ್ಲಿ ಯಶಸ್ಸು ಸಿಗದಿದ್ದರೆ, ಮಂಗಳವಾರ ಹನುಮನ ದೇವಸ್ಥಾನಕ್ಕೆ ತೆರಳಿ ಮಲ್ಲಿಗೆ ಎಣ್ಣೆಯ ದೀಪವನ್ನು ಉರಿಸಿ. ಎಣ್ಣೆಯಲ್ಲಿ ಸ್ವಲ್ಪ ಲವಂಗ ಹಾಕಿ. ನಂತರ ಹನುಮಾನ್ ಚಾಲೀಸಾವನ್ನು ಪಠಿಸಿ ಮತ್ತು ಹನುಮನಿಗೆ ಆರತಿಯನ್ನು ಬೆಳಗಿ. 21 ಮಂಗಳವಾರದವರೆಗೆ ಈ ಪರಿಹಾರವನ್ನು ಮಾಡಿ. ನಿಮ್ಮ ಎಲ್ಲಾ ತೊಂದರೆಗಳು ಮತ್ತು ಅಡೆತಡೆಗಳು ದೂರವಾಗುತ್ತವೆ.

4. ಧನ ಪ್ರಾಪ್ತಿಯ ಉಪಾಯ: ನಿರಂತರ ಹಣದ ನಷ್ಟ ಅಥವಾ ಹಣ ನಿಮ್ಮ ಬಳಿ ನಿಲ್ಲುತ್ತಿಲ್ಲ ಎಂದಾದರೆ, ಶುಕ್ರವಾರದಂದು ತಾಯಿ ಲಕ್ಷ್ಮಿಯನ್ನು ಪೂಜಿಸಿ. ಈ ಸಮಯದಲ್ಲಿ, ಲಕ್ಷ್ಮಿ ಮಾತೆಗೆ 5 ಲವಂಗ ಮತ್ತು 5 ಕವಡೆಗಳನ್ನೂ ಅರ್ಪಿಸಿ. ಮರುದಿನ, ಈ ಲವಂಗ ಮತ್ತು ಕವಡೆಗಳನ್ನು ಕೆಂಪು ಬಟ್ಟೆಯಲ್ಲಿ ಕಟ್ಟಿಕೊಳ್ಳಿ ಮತ್ತು ಸಂಪತ್ತನ್ನು ಇರಿಸುವ ಸ್ಥಳ ಅಥವಾ ತಿಜೋರಿಯಲ್ಲಿರಿಸಿ. ಶೀಘ್ರದಲ್ಲೇ, ಲಕ್ಷ್ಮಿ ದೇವಿಯ ಆಶೀರ್ವಾದ ನಿಮಗೆ ಪ್ರಾಪ್ತಿಯಾಗುತ್ತದೆ.  

5. ಶತ್ರುಗಳ ಮೇಲೆ ಜಯ ಸಾಧಿಸಲು ಪರಿಹಾರ: ಪದೇ ಪದೇ ನಿಮಗೆ ಶತ್ರುಗಳು ತೊಂದರೆ ನೀಡುತ್ತಿದ್ದರೆ, ಪ್ರತಿ ಮಂಗಳವಾರ ಮತ್ತು ಶನಿವಾರದಂದು ಬಜರಂಗ ಬಾಣ ಪಠಿಸಿ. ಹನುಮನಿಗೆ ಲಡ್ಡುಗಳನ್ನು ಅರ್ಪಿಸಿ, ನಂತರ ಅವರ ಮುಂದೆ ಕರ್ಪೂರದ ಜೊತೆಗೆ  5 ಲವಂಗವನ್ನು ಉರಿಸಿ. ನಿಮಗೆ ಶತ್ರುಗಳು ಇಲ್ಲದಂತಾಗುತ್ತಾರೆ. (ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)  

ZEENEWS TRENDING STORIES

By continuing to use the site, you agree to the use of cookies. You can find out more by Tapping this link