Tech Tips: ಲ್ಯಾಪ್ ಟಾಪ್ ಪದೇ ಪದೇ ಹ್ಯಾಂಗ್ ಆಗುತ್ತದೆಯೇ? ಈ ಸಲಹೆಗಳನ್ನು ಟ್ರೈ ಮಾಡಿ ನೋಡಿ

Mon, 29 May 2023-8:35 pm,

ಲ್ಯಾಪ್‌ಟಾಪ್ ಅಪ್ಡೇಟ್ ನತ್ತ ಗಮನ ಹರಿಸಿ: ನಿಮ್ಮ ಲ್ಯಾಪ್‌ಟಾಪ್ ಆಪರೇಟಿಂಗ್ ಸಿಸ್ಟಮ್ ಆಗಾಗ್ಗೆ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ, ಮೊದಲು ನಿಮ್ಮ ಲ್ಯಾಪ್‌ಟಾಪ್ ಅನ್ನು ನವೀಕರಿಸಿ. ಇದಕ್ಕಾಗಿ ಸೆಟ್ಟಿಂಗ್‌ ವಿಭಾಗಕ್ಕೆ  ಹೋಗಿ ಮತ್ತು ನವೀಕರಣಗಳಿಗಾಗಿ ಪರಿಶೀಲಿಸಿ ಮತ್ತು ಇತ್ತೀಚಿನ ನವೀಕರಣಗಳನ್ನು ಪಡೆಯಿರಿ. ಇದು ಲ್ಯಾಪ್‌ಟಾಪ್ ಅನ್ನು ಹ್ಯಾಂಗ್ ಮಾಡುವುದಿಲ್ಲ ಮತ್ತು ನೀವು ಈ ಸಮಸ್ಯೆಯನ್ನು ತಪ್ಪಿಸಬಹುದು.  

ರೀಸ್ಟಾರ್ಟ್ ಆಯ್ಕೆಯನ್ನು ಬಳಸಿ: ಅನೇಕ ಬಳಕೆದಾರರು ತಮ್ಮ ಲ್ಯಾಪ್‌ಟಾಪ್ ಅನ್ನು ಹಲವಾರು ದಿನಗಳವರೆಗೆ ರೀಸ್ಟಾರ್ಟ್ ಮಾಡುವುದೇ ಇಲ್ಲ. ಅನೇಕ ಬಾರಿ ಲ್ಯಾಪ್‌ಟಾಪ್ ಸ್ವಯಂಚಾಲಿತವಾಗಿ ಸ್ಲೀಪ್ ಮೋಡ್‌ಗೆ ಜಾರುತ್ತದೆ, ಆದರೆ ನೀವು ಕ್ಲೋಸ್ ಮಾಡದೆ ಕಾರ್ಯಗಳು . ದೀರ್ಘಕಾಲದವರೆಗೆ  ಹಿನ್ನೆಲೆಯಲ್ಲಿ ರನ್ ಆಗುತ್ತಲೇ ಇರುತ್ತವೆ. ಈ ಕಾರಣದಿಂದಾಗಿ, ಲ್ಯಾಪ್ಟಾಪ್ ಸ್ಲೋ ಆಗುತ್ತದೆ ಹಾಗೂ ಹ್ಯಾಂಗ್ ಆಗಲು ಪ್ರಾರಂಭಿಸುತ್ತದೆ.  

ಆಂಟಿ-ವೈರಸ್ ಅನ್ನು ಬಳಸುವುದನ್ನು ಖಚಿತಪಡಿಸಿಕೊಳ್ಳಿ: ನಿಮ್ಮ ಲ್ಯಾಪ್‌ಟಾಪ್ ಅನ್ನು ಅಪ್ಡೇಟ್ ಮಾಡಿದ ನಂತರವೂ ಕೂಡ ಅದು ನಿಧಾನವಾಗಿ ಕಾರ್ಯನಿರ್ವಹಿಸುತ್ತಿದ್ದರೆ ಮತ್ತು ಹ್ಯಾಂಗ್ ಆಗುತ್ತಿದ್ದರೆ, ನಿಮ್ಮ ಲ್ಯಾಪ್‌ಟಾಪ್‌ನಲ್ಲಿ ವೈರಸ್ ಇರುವುದರಿಂದ ಈ ರೀತಿ ಆಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ನೀವು ಆಂಟಿ-ವೈರಸ್ ಅನ್ನು ಡೌನ್‌ಲೋಡ್ ಮಾಡುವುದು ಮತ್ತು ನಿಮ್ಮ ಲ್ಯಾಪ್‌ಟಾಪ್ ಅನ್ನು ವೈರಸ್‌ಗಳಿಗಾಗಿ ಸ್ಕ್ಯಾನ್ ಮಾಡುವುದು ತುಂಬಾ ಮುಖ್ಯ. ಈ ಮೂಲಕ ನಿಮ್ಮ ಲ್ಯಾಪ್ ಟಾಪ್ ಹ್ಯಾಂಗ್ ಆಗುವ ಸಮಸ್ಯೆಯೂ ನಿವಾರಣೆಯಾಗಲಿದ್ದು, ನೀವು ಡೇಟಾ ಕಳ್ಳತನದಿಂದಲೂ ಕೂಡ ಪಾರಾಗಬಹುದು.  

ಅನಗತ್ಯ ಅಪ್ಲಿಕೇಶನ್‌ಗಳನ್ನು ಡಿಲೀಟ್ ಮಾಡಿ: ನಿಮ್ಮ ಲ್ಯಾಪ್‌ಟಾಪ್‌ನಲ್ಲಿ ನೀವು ಬಳಸದಂತಹ ಅನೇಕ ಅಪ್ಲಿಕೇಶನ್‌ಗಳು ಇರಬಹುದು. ಲ್ಯಾಪ್‌ಟಾಪ್‌ನ 'ಕಂಟ್ರೋಲ್ ಪ್ಯಾನಲ್'ಗೆ  ಹೋಗುವ ಮೂಲಕ, ನಿಮಗೆ ಅಗತ್ಯವಿಲ್ಲದ ಅಪ್ಲಿಕೇಶನ್‌ಗಳನ್ನು ನೀವು ಆಯ್ಕೆ ಮಾಡಬಹುದು ಮತ್ತು ನಂತರ ನೀವು ಅವುಗಳನ್ನು ಅನ್ಇನ್ಸ್ಟಾಲ್ ಮಾಡಬಹುದು.   

RAM ಅನ್ನು ಅಪ್‌ಗ್ರೇಡ್ ಮಾಡಿ: RAM ಅನ್ನು ಹೆಚ್ಚಿಸುವ ಮೂಲಕ, ಲ್ಯಾಪ್‌ಟಾಪ್‌ನ ವೇಗವು ಗಮನಾರ್ಹವಾಗಿ ಹೆಚ್ಚಾಗುತ್ತದೆ. 50 ಸಾವಿರಕ್ಕಿಂತ ಕಡಿಮೆ ಬಜೆಟ್‌ನ ಹೆಚ್ಚಿನ ಲ್ಯಾಪ್‌ಟಾಪ್‌ಗಳು 4GB RAM ನೊಂದಿಗೆ ಮಾತ್ರ ಬರುತ್ತವೆ. ನೀವು ಮಲ್ಟಿ ಟಾಸ್ಕಿಂಗ್  ಮಾಡಲು ಬಯಸಿದರೆ, 4GB RAM ಸಾಕಾಗುವುದಿಲ್ಲ. ಆದ್ದರಿಂದ ನೀವು RAM ಅನ್ನು ಅಪ್‌ಗ್ರೇಡ್ ಮಾಡುವುದು ತುಂಬಾ ಮುಖ್ಯ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link