ಈ 3 ವಸ್ತುಗಳನ್ನು ಉಗುರುಬೆಚ್ಚಗಿನ ನೀರಿನಲ್ಲಿ ಬೆರೆಸಿ ದಿನಕ್ಕೆ 3 ಬಾರಿ ಕುಡಿದರೆ ಯೂರಿಕ್ ಆಸಿಡ್ ಕರಗಿ ಹೋಗುತ್ತದೆ.!
ಸಾಮಾನ್ಯವಾಗಿ ನಮ್ಮ ಮೂತ್ರಪಿಂಡಗಳು ಯೂರಿಕ್ ಆಸಿಡ್ ನ್ನು ಫಿಲ್ಟರ್ ಮಾಡಿ ದೇಹದಿಂದ ಹೊರಹಾಕುತ್ತವೆ. ಆದರೆ ಹೆಚ್ಚಿನ ಪ್ರಮಾಣದಲ್ಲಿ ಪ್ಯೂರಿನ್ ಭರಿತ ಆಹಾರ ಸೇವಿಸಿದರೆ ಯೂರಿಕ್ ಆಸಿಡ್ ನ್ನು ಕಿಡ್ನಿ ಫಿಲ್ಟರ್ ಮಾಡಲು ಸಾಧ್ಯವಿಲ್ಲ.
ಅಂತಹ ಪರಿಸ್ಥಿತಿಯಲ್ಲಿ ಯೂರಿಕ್ ಆಸಿಡ್ ದೇಹದಲ್ಲಿ ಸಂಗ್ರಹಗೊಳ್ಳಲು ಪ್ರಾರಂಭಿಸುತ್ತದೆ. ಇದು ಅನೇಕ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಯೂರಿಕ್ ಆಸಿಡ್ ಕೀಲುಗಳ ನಡುವೆ ಸ್ಫಟಿಕಗಳ ರೂಪದಲ್ಲಿ ಸಂಗ್ರಹಗೊಳ್ಳಲು ಪ್ರಾರಂಭಿಸುತ್ತದೆ.
ಈ ಸ್ಥಿತಿಯಲ್ಲಿ ಮೂಳೆಗಳ ನಡುವಿನ ಅಂತರವು ಹೆಚ್ಚಾಗುತ್ತದೆ. ಮೂಳೆಗಳು ದುರ್ಬಲಗೊಳ್ಳಲು ಪ್ರಾರಂಭಿಸುತ್ತವೆ. ತೀವ್ರವಾದ ನೋವು, ಸೆಳೆತ, ಬಿಗಿತ, ಊತ ಮುಂತಾದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಕೆಲವು ನೈಸರ್ಗಿಕ ವಿಧಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ಯೂರಿಕ್ ಆಸಿಡ್ ಸಮಸ್ಯೆಗೆ ಪರಿಹಾರವನ್ನು ಪಡೆಯಬಹುದು.
ಅರ್ಧ ನಿಂಬೆ ರಸ, ಅರ್ಧ ಚಮಚ ಅರಿಶಿನ ಪುಡಿ ಮತ್ತು ಒಂದು ಚಮಚ ಆಪಲ್ ಸೈಡರ್ ವಿನೆಗರ್ ಅನ್ನು ಉಗುರು ಬೆಚ್ಚಗಿನ ನೀರಿನಲ್ಲಿ ಬೆರೆಸಿ ಮತ್ತು ಪ್ರತಿದಿನ ಸೇವಿಸುವುದರಿಂದ ಯೂರಿಕ್ ಆಸಿಡ್ ಸಮಸ್ಯೆಯಿಂದ ಶೀಘ್ರ ಪರಿಹಾರವನ್ನು ಪಡೆಯಬಹುದು. ದಿನಕ್ಕೆ 3 ಬಾರಿ ಇದನ್ನು ಸೇವಿಸಬಹುದು.
ಬಿಸಿನೀರು ಜೀರ್ಣಕ್ರಿಯೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ಇದರಿಂದಾಗಿ ದೇಹದಲ್ಲಿ ಪ್ಯೂರಿನ್ ಜೀರ್ಣಕ್ರಿಯೆಯ ವೇಗವಾಗುತ್ತದೆ. ಇದು ಮೂಳೆಗಳ ನಡುವೆ ಸಂಗ್ರಹವಾಗುವುದಿಲ್ಲ.ಯೂರಿಕ್ ಆಸಿಡ್ ಕಡಿಮೆಯಾಗುತ್ತದೆ
ನಿಂಬೆ, ಆಪಲ್ ಸೈಡರ್ ವಿನೆಗರ್ ಮತ್ತು ಅರಿಶಿನವನ್ನು ಬೆರೆಸಿದ ಬಿಸಿನೀರನ್ನು ಕುಡಿಯುವುದು ಯೂರಿಕ್ ಆಸಿಡ್ ಸಮಸ್ಯೆಯಿಂದ ಬಳಲುವವರಿಗೆ ಪ್ರಯೋಜನಕಾರಿಯಾಗಿದೆ.