Watch Video: ಕ್ಯಾಮೆರಾ ಎದುರು ಒಂದೊಂದೇ ಡ್ರೆಸ್​ ತೆಗೆದ ನಟಿ ಉರ್ಫಿ ಜಾವೇದ್​! ಹೌಹಾರಿದ ನೆಟಿಜನ್ಸ್!!

Wed, 08 Jan 2025-7:22 pm,

ಕೆಲ ದಿನಗಳ ಹಿಂದಷ್ಟೇ ನನ್ನದು ಫ್ಲ್ಯಾಟ್​ ಚೆಸ್ಟ್​ ಎಂದು ಹೇಳುವ ಡಿಜಿಟಲ್​ ಬೋರ್ಡ್​ ಹಾಕಿಕೊಂಡು ಸುತ್ತಾಡಿದ್ದ ನಟಿ ಉರ್ಫಿ ಜಾವೇದ್‌, ಎದೆ ಮೇಲೆ ಉಡ ಬಿಟ್ಕೊಂಡು ಸದ್ದು ಮಾಡಿದ್ದರು. ಮೈಮೇಲೆ ಉಡ ಹರಿದಾಡುವಂತಹ ವಿಡಿಯೋವನ್ನ ನಟಿ ಶೇರ್‌ ಮಾಡಿದ್ದರು. 

ಇದೀಗ ಡ್ರೆಸ್​ ಮೇಲೆ ಡ್ರೆಸ್​ ಹಾಕಿಕೊಂಡು ಕ್ಯಾಮೆರಾ ಎದುರಿಗೆ ಒಂದೊಂದೇ ಬಟ್ಟೆಯನ್ನು ಕಳಚಿದ್ದಾರೆ. ಕೊನೆಯಲ್ಲಿ ಸುಂದರವಾಗಿರುವ ಕಪ್ಪು ಡ್ರೆಸ್​ ಮೇಲೆ ಕಾಣಿಸಿಕೊಂಡಿರುವ ನಟಿ ಇಷ್ಟೇ ಸಾಕು ಬಿಡಿ ಎಂದಿದ್ದಾರೆ. ಇದರ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ಸಕತ್​ ವೈರಲ್​ ಆಗುತ್ತಿದೆ. 

ಒಂದೇ ಶಬ್ದದಲ್ಲಿ ನಟಿಯನ್ನು ವರ್ಣಿಸಿ ಅಂತಾ ಈ ವಿಡಿಯೋಗೆ ಕ್ಯಾಪ್ಷನ್​ ಕೊಡಲಾಗಿದೆ. ಇದಕ್ಕೆ ವಿವಿಧ ರೀತಿಯಲ್ಲಿ ಕಾಮೆಂಟ್ಸ್‌ಗಳ ಸುರಿಮಳೆಯಾಗುತ್ತಿದೆ. ಕ್ವೀನ್​, ಬ್ಯೂಟಿ, ಹಾಟಿ ಅಂತಾ ನೆಟಿಜನ್ಸ್‌ ಕಾಮೆಂಟ್‌ ಮಾಡುತ್ತಿದ್ದಾರೆ. ಎಲ್ಲಾ ಕ್ರಿಯೆಟಿವಿಟಿಗಳನ್ನ ನೀವೇ ಮಾಡಿದ್ರೆ ಬೇರೆ ನಟಿಯರು ಏನು ಮಾಡಬೇಕು, ಅವರಿಗೂ ಏನಾದ್ರೂ ಉಳಿಸಿ ಅಂತಾ ಕೆಲವರು ಕಿಚಾಯಿಸಿದ್ದಾರೆ.  

 ಅಷ್ಟಕ್ಕೂ ಇಂಥ ಚಿತ್ರ-ವಿಚಿತ್ರ ಡ್ರೆಸ್​ ತಾವು ಏಕೆ ಧರಿಸುವುದು ಎಂಬ ಬಗ್ಗೆ ಕೆಲ ದಿನಗಳ ಹಿಂದಷ್ಟೇ ನಟಿ ಮಾತನಾಡಿದ್ದರು. 'ನಾನು ಏನೇ ಮಾಡಿದರೂ ಅದು ನನ್ನ ಸಲುವಾಗಿ. ನಾನು ಯಾರನ್ನೂ ಮೆಚ್ಚಿಸಬೇಕಿಲ್ಲ. ಯಾವುದೇ ಹೆಣ್ಣುಮಕ್ಕಳನ್ನು ಮೆಚ್ಚಿಸುವ ಉದ್ದೇಶವೂ ನನಗಿಲ್ಲ, ಯಾವುದೇ ಮಹಿಳೆಯರನ್ನು ಸಬಲೀಕರಣ ಮಾಡುವ ಉದ್ದೇಶವೂ ಇಲ್ಲ. ನಾನು ಇದನ್ನು ಫೇಮಸ್ ಮತ್ತು ಶ್ರೀಮಂತೆ ಆಗುವುದಕ್ಕಾಗಿ ಮಾಡುತ್ತಿದ್ದೇನೆ. ಅದನ್ನು ಬಿಟ್ಟು ಬೇರೆ ಯಾವುದೇ ಉದ್ದೇಶವಿಲ್ಲ. ಯಾರು ಏನೇ ಹೇಳಿದರೂ ಅದಕ್ಕೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ನನ್ನನ್ನು ನೋಡಿ ಯಾರೂ ಮೆಚ್ಚಿಕೊಳ್ಳಬೇಕಾದದ್ದೂ ಇಲ್ಲ' ಎಂದಿದ್ದರು.

ಹೆಚ್ಚು ಹಣ ಬಂದ ತಕ್ಷಣ ಏನು ಮಾಡುವಿರಿ ಎನ್ನುವ ಪ್ರಶ್ನೆಗೆ ಉತ್ತರಿಸಿದ ಉರ್ಫಿ, ʼನಾನು ರೋಲ್ಸ್ ರಾಯ್ಸ್‌ ಕಾರು ಖರೀದಿ ಮಾಡುತ್ತೇನೆ. ಇದು ನನ್ನ ಆಸೆ ಎಂದಿದ್ದರು. ಇದೇ ವೇಳೆ, ನಾನು ಹಣವನ್ನು ತುಂಬಾ ಇಷ್ಟಪಡುತ್ತೇನೆ. ಹಣ ಇದ್ದರೆ ಏನು ಬೇಕಾದರೂ ಮಾಡಲು ಸಾಧ್ಯ. ಪ್ರತಿಯೊಬ್ಬರ ಜೀವನದಲ್ಲಿಯೂ ಹಣಕ್ಕಿಂತ ಮುಖ್ಯವಾದದ್ದು ಏನೂ ಇಲ್ಲ. ಹಣ ಇದ್ದರೆ ಸುಖ ಪಡೆದುಕೊಳ್ಳಲು ಸಾಧ್ಯವಿಲ್ಲ ಎನ್ನುತ್ತಾರೆ. ಆದರೆ ಅದು ಸುಳ್ಳು. ಹಣ ಇದ್ದರೆ ಸುಖವನ್ನೂ ಪಡೆದುಕೊಳ್ಳಬಹುದು ಎಂದಿದ್ದರು.

ಹಣ ಇದ್ದರೆ ಜೀವನದಲ್ಲಿ ಏನುಬೇಕಾದರೂ ಮಾಡಬಹುದು. ನಮ್ಮ ಜೀವನಕ್ಕೆ ಹಣವೇ ಮುಖ್ಯ, ಹಣವೇ ಜೀವನ. ಹಣದಿಂದ ಎಲ್ಲವೂ ಸಾಧ್ಯ, ಹಣವಿದ್ದರೆ ಮಾತ್ರ ಜನರು ನಿಮ್ಮ ಜೊತೆಗಿರುತ್ತಾರೆ. ನಿಮ್ಮ ಸುತ್ತಲಿನ ಜನರನ್ನು ಖುಷಿಯಾಗಿ ಇಡಲು ಸಾಧ್ಯವಾಗುವುದು ಹಣದಿಂದ ಮಾತ್ರ. ಹಣ ಇಲ್ಲದಿದ್ದರೆ ಈ ಜೀವನದಲ್ಲಿ ಏನೂ ಇಲ್ಲ ಅಂತಾ ಉರ್ಫಿ ಹೇಳಿದ್ದರು.

ZEENEWS TRENDING STORIES

By continuing to use the site, you agree to the use of cookies. You can find out more by Tapping this link