ಪ್ರಿಯಾಂಕಾ ಚೋಪ್ರಾ ಅವರ ಈ ಚಿತ್ರದ ದೃಶ್ಯವನ್ನು ನೋಡಿ ಭಾವುಕರಾದ ನಿಕ್ ಜೊನಸ್!

Mon, 09 Sep 2019-11:00 am,

ತನ್ನ ಚಿತ್ರದ ಪ್ರದರ್ಶನಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಟೊರೊಂಟೊ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ 2019 ಕ್ಕೆ ಪ್ರಿಯಾಂಕಾ ಚೋಪ್ರಾ ಆಗಮಿಸಿದರು. ಪ್ರಿಯಾಂಕಾ ಚೋಪ್ರಾ ತನ್ನ ಚಿತ್ರ ಮತ್ತು ಪತಿ ನಿಕ್ ಜೊನಸ್ ಬಗ್ಗೆ ಇಲ್ಲಿ ಮಾತನಾಡುತ್ತಾ ನಿಕ್ ತನ್ನ ಚಿತ್ರದ ಒಂದು ದೃಶ್ಯವನ್ನು ನೋಡಿ ಭಾವುಕರಾದರು ಎಂದು ಹೇಳಿದ್ದಾರೆ.

ಪ್ರಿಯಾಂಕಾ ಚೋಪ್ರಾ ಅವರು ಮುಂಬರುವ ಚಿತ್ರದ ಕೊನೆಯ ದೃಶ್ಯದ ಚಿತ್ರೀಕರಣದ ಸಮಯದಲ್ಲಿ, ವಾತಾವರಣವು ತುಂಬಾ ಭಾವುಕತೆಯಿಂದ ಕೂಡಿದ್ದು, ಪತಿ ನಿಕ್ ಜೊನಾಸ್ ಅವರು ಭಾವುಕರಾಗಿ ಕಣ್ಣಿರಿಡುವುದನ್ನು ತಡೆಯಲು ಸಾಧ್ಯವಾಗಲಿಲ್ಲ ಎಂದರು.

ಈ ದೃಶ್ಯವನ್ನು ನನ್ನ ಮದುವೆಗೆ ಕನಿಷ್ಠ ನಾಲ್ಕು ದಿನಗಳ ಮೊದಲು ಚಿತ್ರೀಕರಿಸಲಾಗಿದೆ, ಅವರ ವಿವಾಹದ ಮೊದಲು ಚಿತ್ರೀಕರಣದ ಕೊನೆಯ ದಿನದಂದು, ಶೋನಾಲಿ ಬೋಸ್ ನಿಕ್‌ರನ್ನು ಸೆಟ್‌ಗೆ ಆಹ್ವಾನಿಸಿದರು ಮತ್ತು ನಿಕ್ ಆಗ ಶೂಟಿಂಗ್‌ಗೆ ಆಗಮಿಸಿದ್ದರು ಎಂದು ಪ್ರಿಯಾಂಕಾ ಚೋಪ್ರಾ ತಿಳಿಸಿದ್ದಾರೆ.

ಚಿತ್ರದ ಶೂಟಿಂಗ್ ವೇಳೆ ನಿಕ್ ಸ್ವಲ್ಪ ಮುಂಚಿತವಾಗಿಯೇ ಬಂದರು. ಆ ವೇಳೆ ನಾವು ಕತ್ತಲೆಯಲ್ಲಿ ಶೂಟಿಂಗ್‌ನಲ್ಲಿ ನಿರತರಾಗಿದ್ದೆವು. ಆ ಸಮಯದಲ್ಲಿ ಯಾರೋ ಅಳುತ್ತಿರುವಂತೆ ಭಾಸವಾಯಿತು. ನಾನು ಬೆಳಕು ಹಿಡಿದು ಅವರನ್ನು ನೋಡಲು ಪ್ರಯತ್ನಿಸಿದೆ. ಅಗಾ ನನ್ನ ಪಕ್ಕದಲ್ಲಿ ನಿಂತಿದ್ದ ನಿಕ್ ಸಣ್ಣ ಮಗುವಿನಂತೆ ನಿರಂತರವಾಗಿ ಅಳುತ್ತಿದ್ದರು ಎಂದು ಪ್ರಿಯಾಂಕಾ ಅವರಿಗೆ ಶೋನಾಲಿ ಬೋಸ್ ಹೇಳಿದ್ರಂತೆ.

ಈ ಚಿತ್ರವನ್ನು ಪ್ರಿಯಾಂಕಾ ಚೋಪ್ರಾ, ಸಿದ್ಧಾರ್ಥ್ ರಾಯ್ ಕಪೂರ್ ಮತ್ತು ರೋನಿ ಸ್ಕ್ರೂವಾಲಾ ಒಟ್ಟಿಗೆ ನಿರ್ಮಿಸಿದ್ದಾರೆ. ಪಲ್ಮನರಿ ಫೈಬ್ರೋಸಿಸ್ ಎಂಬ ಕಾಯಿಲೆಯಿಂದ ಬಳಲುತ್ತಿದ್ದ ಬರಹಗಾರರು ಮತ್ತು ಪ್ರೇರಕ ಭಾಷಣಕಾರರೂ ಆದ ಆಯೆಷಾ ಚೌಧರಿ ಅವರ ಜೀವನವನ್ನು ಆಧರಿಸಿದ ಈ ಚಿತ್ರ ತೆಗೆಯಲಾಗಿದೆ. ಚಿತ್ರ ಅಕ್ಟೋಬರ್ 11 ರಂದು ಬಿಡುಗಡೆಯಾಗಲಿದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link