ಸಿಹಿಯಾದ ರಸಭರಿತ ಈ ಹಣ್ಣಿನಲ್ಲಿದೆ ಮಧುಮೇಹ ಗುಣಪಡಿಸುವ ಶಕ್ತಿ; ವರ್ಷಕ್ಕೊಮ್ಮೆ ತಿಂದರೂ ಸಾಕು ಬ್ಲಡ್ ಶುಗರ್ ಬರೋದೇ ಇಲ್ಲ!
ಮಧುಮೇಹ ಒಮ್ಮೆ ಬಂದರೆ ಅದನ್ನು ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವಿಲ್ಲ. ಮಧುಮೇಹವನ್ನು ನಿಯಂತ್ರಿಸಬಹುದು. ಇದಕ್ಕಾಗಿ ಕೆಲವು ಆಹಾರಗಳು ಸೂಕ್ರವಾಗಿವೆ.
ಮಧುಮೇಹಿಗಳು ಸಿಹಿ ಹಣ್ಣನ್ನು ತಿನ್ನಬಾರದೆಂದು ಹೇಳಲಾಗುತ್ತದೆ. ಆದರೆ ಈ ಹಣ್ಣು ಒಮ್ಮೆ ತಿಂದರೆ ಸಾಕು ಬ್ಲಡ್ ಶುಗರ್ ಏರುಪೇರಾಗುವುದಿಲ್ಲ. ಇದರು ಮಧುಮೇಹಿಗಳಿಗೆ ಸಾಕಷ್ಟು ಪ್ರಯೋಜನವನ್ನು ನೀಡುತ್ತದೆ.
ವಾಟರ್ ಆಪಲ್ ಹೆಸರನ್ನು ಕೇಳಿರಬಹುದು. ಈ ಹಣ್ಣಿನ ಪ್ರಯೋಜನಗಳ ಬಗ್ಗೆ ಇಂದು ನಾವು ನಿಮಗೆ ಸಂಪೂರ್ಣ ಮಾಹಿತಿ ನೀಡಲಿದ್ದೇವೆ.
ವಾಟರ್ ಆಪಲ್ ಕೋಲ್ಕತ್ತಾ, ಕೇರಳ, ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರದಂತಹ ರಾಜ್ಯಗಳಲ್ಲಿ ಅತಿ ಹೆಚ್ಚಾಗಿ ಕಂಡುಬರುತ್ತದೆ. ನೀರು ಹೇರಳವಾಗಿ ಕಂಡುಬರುತ್ತದೆ ಇದೇ ಕಾರಣಕ್ಕೆ ವಾಟರ್ ಆಪಲ್ ಎನ್ನುತ್ತಾರೆ.
ಮಧುಮೇಹ ರೋಗಿಗಳಿಗೆ ವಾಟರ್ ಆಪಲ್ ಸೇವನೆ ತುಂಬಾ ಪ್ರಯೋಜನಕಾರಿ. ವಾಟರ್ ಆಪಲ್ ಆಂಟಿಹೈಪರ್ಗ್ಲೈಸೆಮಿಕ್ ಗುಣಲಕ್ಷಣಗಳಲ್ಲಿ ಸಮೃದ್ಧವಾಗಿದೆ. ಮಧುಮೇಹಿಗಳು ಇದನ್ನು ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಅಂಶ ಏರುಪೇರಾಗುವುದಿಲ್ಲ.
ವಾಟರ್ ಆಪಲ್ ನಲ್ಲಿ ಬಯೋಆಕ್ಟಿವ್ ಸ್ಫಟಿಕದಂತಹ ಆಲ್ಕಲಾಯ್ಡ್ 'ಜಾಂಬೋಸಿನ್' ಕಂಡು ಬರುತ್ತದೆ. ವಾಟರ್ ಆಪಲ್ ಹಸಿಯಾಗಿರುವಾಗ ಹಸಿರು ಬಣ್ಣ ಹಣ್ಣಾದ ನಂತರ ಕೆಂಪು ಗುಲಾಬಿ ಬಣ್ಣಕ್ಕೆ ತಿರುಗುತ್ತದೆ. ತಿನ್ನಲು ಸಾಕಷ್ಟು ರುಚಿಯಾಗಿ ಮತ್ತು ರಸಭರಿತವಾಗಿರುತ್ತದೆ.
ಪೊಟ್ಯಾಸಿಯಮ್ ಹೊಂದಿರುವ ಕಾರಣದಿಂದ ವಾಟರ್ ಆಪಲ್ ತಿನ್ನುವುದರಿಂದ ಹೃದಯವು ಆರೋಗ್ಯವಾಗಿರಲು ಸಹಾಯ ಮಾಡುತ್ತದೆ. ಅಧಿಕ ರಕ್ತದೊತ್ತಡ ಸಮಸ್ಯೆಗೂ ಇದು ಮದ್ದಾಗಿದೆ.
ತೂಕವನ್ನು ಕಡಿಮೆ ಮಾಡಿಕೊಳ್ಳಲು ಸಹ ವಾಟರ್ ಆಪಲ್ ತಿನ್ನಬಹುದಾಗಿದೆ. ವಾಟರ್ ಆಪಲ್ ನಲ್ಲಿ ಫೈಬರ್ ಹೇರಳವಾಗಿ ಕಂಡುಬರುತ್ತದೆ.
Disclaimer - ಇಲ್ಲಿ ಉಲ್ಲೇಖಿಸಲಾದ ಸಲಹೆಗಳು ಸಾಮಾನ್ಯ ಮಾಹಿತಿ ಮತ್ತು ಮನೆಮದ್ದುಗಳನ್ನು ಮಾತ್ರ ಆಧರಿಸಿದೆ. ವೈದ್ಯರನ್ನು ಸಂಪರ್ಕಿಸಿದ ನಂತರವೇ ಅಳವಡಿಸಿಕೊಳ್ಳಬೇಕು. ಜೀ ಕನ್ನಡ ನ್ಯೂಸ್ ಇದಕ್ಕೆ ಹೊಣೆಯಲ್ಲ.