ಕೆಂಪಾದ ರಸಭರಿತ ಈ ಹಣ್ಣು ವರ್ಷದಲ್ಲಿ ಒಮ್ಮೆ ತಿಂದರೆ ಸಾಕು ಹೆಚ್ಚಾಗೋದೇ ಇಲ್ಲ ಬ್ಲಡ್ ಶುಗರ್ ! ಮಧುಮೇಹಿಗಳು ತಿಂದು ನೋಡಿ
ವಾಟರ್ ಆಪಲ್ ಹೆಸರನ್ನು ನೀವು ಎಂದಾದರೂ ಕೇಳಿದ್ದೀರಾ? ಈ ಹಣ್ಣಿನ ಪ್ರಯೋಜನಗಳ ಬಗ್ಗೆ ಇಂದು ನಾವು ನಿಮಗೆ ಹೇಳುತ್ತೇವೆ. ಇದು ಮಧುಮೇಹ ರೋಗಿಗಳಿಗೆ ವರದಾನದಂತಿದೆ.
ವಾಟರ್ ಆಪಲ್ ಒಂದು ವಿಶೇಷ ಹಣ್ಣು. ಇದು ಕೋಲ್ಕತ್ತಾ, ಕೇರಳ, ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರದಂತಹ ರಾಜ್ಯಗಳಲ್ಲಿ ಕಂಡುಬರುತ್ತದೆ. ಅದರಲ್ಲಿ ನೀರು ಹೇರಳವಾಗಿ ಕಂಡುಬರುತ್ತದೆ. ಅದಕ್ಕಾಗಿಯೇ ಇದನ್ನು ವಾಟರ್ ಆಪಲ್ ಎಂದು ಕರೆಯಲಾಗುತ್ತದೆ.
ವಾಟರ್ ಆಪಲ್ ಮಧುಮೇಹ ರೋಗಿಗಳಿಗೆ ತುಂಬಾ ಪ್ರಯೋಜನಕಾರಿ. ಇದಕ್ಕೆ ಕಾರಣವೆಂದರೆ ಇದರಲ್ಲಿ ಶಕ್ತಿಯುತವಾದ ಆಂಟಿಹೈಪರ್ಗ್ಲೈಸೆಮಿಕ್ ಗುಣಲಕ್ಷಣಗಳು ಕಂಡುಬರುತ್ತವೆ. ಅಂದರೆ ಇದನ್ನು ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಅಂಶವನ್ನು ಕಡಿಮೆ ಮಾಡಬಹುದು.
ಬಯೋಆಕ್ಟಿವ್ ಸ್ಫಟಿಕದಂತಹ ಆಲ್ಕಲಾಯ್ಡ್ 'ಜಾಂಬೋಸಿನ್' ವಾಟರ್ ಆಪಲ್ ನಲ್ಲಿ ಇರುತ್ತದೆ. ಈ ಕಾರಣಕ್ಕಾಗಿಯೇ ವಾಟರ್ ಆಪಲ್ ತಿನ್ನುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವು ನಿಯಂತ್ರಣದಲ್ಲಿರುತ್ತದೆ.
ವಾಟರ್ ಆಪಲ್ ಹಸಿಯಾಗಿರುವಾಗ ಅದು ಹಸಿರು ಬಣ್ಣವನ್ನು ಹೊಂದಿರುತ್ತದೆ. ಹಣ್ಣಾದ ನಂತರ ಅದು ಕೆಂಪು ಗುಲಾಬಿ ಬಣ್ಣಕ್ಕೆ ತಿರುಗುತ್ತದೆ. ಇದು ತಿನ್ನಲು ಸಾಕಷ್ಟು ರುಚಿಯಾಗಿರುತ್ತದೆ ಮತ್ತು ರಸಭರಿತವಾಗಿರುತ್ತದೆ.
ವಾಟರ್ ಆಪಲ್ ಉತ್ತಮ ಪ್ರಮಾಣದ ಪೊಟ್ಯಾಸಿಯಮ್ ಅನ್ನು ಹೊಂದಿರುತ್ತದೆ. ಈ ಕಾರಣದಿಂದಲೇ ಇದನ್ನು ತಿನ್ನುವುದರಿಂದ ಹೃದಯವು ಆರೋಗ್ಯವಾಗಿರಲು ಸಹಾಯ ಮಾಡುತ್ತದೆ. ಅಧಿಕ ರಕ್ತದೊತ್ತಡ ಸಮಸ್ಯೆಗೂ ಪರಿಹಾರ ಕಂಡುಕೊಳ್ಳಬಹುದು.
ವಾಟರ್ ಆಪಲ್ ಸೇವನೆಯ ಮೂಲ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು. ಇದರಲ್ಲಿ ಫೈಬರ್ ಹೇರಳವಾಗಿ ಕಂಡುಬರುತ್ತದೆ. ಅತಿಯಾಗಿ ತಿನ್ನುವ ಬಯಕೆಯನ್ನು ಇದು ಕಡಿಮೆ ಮಾಡುತ್ತದೆ.
Disclaimer – ಇಲ್ಲಿ ಉಲ್ಲೇಖಿಸಲಾದ ಸಲಹೆಗಳು ಸಾಮಾನ್ಯ ಮಾಹಿತಿಯನ್ನು ಮಾತ್ರ ಆಧರಿಸಿವೆ. ಆರೋಗ್ಯ ವೃತ್ತಿಪರರನ್ನು ಸಂಪರ್ಕಿಸಿದ ನಂತರವೇ ಅದನ್ನು ಅಳವಡಿಸಿಕೊಳ್ಳಬೇಕು. ಜೀ ಕನ್ನಡ ನ್ಯೂಸ್ ಇದಕ್ಕೆ ಹೊಣೆಯಲ್ಲ.