Watermelon Health Benefits: ಕಲ್ಲಂಗಡಿ ಹಣ್ಣಿನ ಆರೋಗ್ಯಕರ ಪ್ರಯೋಜನಗಳನ್ನು ತಿಳಿಯಿರಿ

Sat, 11 Feb 2023-4:31 pm,

ಬೇಸಿಗೆಯಲ್ಲಿ ಕಂಡುಬರುವ ಹಣ್ಣುಗಳಲ್ಲಿ ಕಲ್ಲಂಗಡಿ ಸಹ ಒಂದು. ಇದು ಹೈಡ್ರೇಟಿಂಗ್ ಹಣ್ಣಾಗಿದ್ದು, ಶೇ.92ರಷ್ಟು ನೀರು ಹೊಂದಿರುತ್ತದೆ. ಈ ಹಣ್ಣು ಸಾಕಷ್ಟು ಖನಿಜಗಳು ಮತ್ತು ವಿಟಮಿನ್‌ಗಳಿಂದ ಸಮೃದ್ಧವಾಗಿದೆ. ಈ ಹಣ್ಣನ್ನು ಸೇವಿಸುವಾಗ ನಾವು ಬೀಜಗಳನ್ನು ಎಸೆಯುತ್ತೇವೆ. ಆದರೆ ಕಲ್ಲಂಗಡಿ ಹಣ್ಣಿನ ಬೀಜಗಳ ಪ್ರಯೋಜನ ತಿಳಿದುಕೊಂಡರೆ ನೀವು ಅವುಗಳನ್ನು ಎಸೆಯುವುದಿಲ್ಲ. ಈ ಬೀಜಗಳು ಪೌಷ್ಟಿಕಾಂಶಗಳಿಂದ ಸಮೃದ್ಧವಾಗಿದ್ದು, ಅನೇಕ ಆರೋಗ್ಯಕರ ಲಾಭಗಳಿವೆ.

ಕಲ್ಲಂಗಡಿ ಬೀಜದಲ್ಲಿರುವ ಪ್ರೋಟೀನ್, ಕಬ್ಬಿಣ, ಮೆಗ್ನೀಸಿಯಮ್ ಮತ್ತು ಸತು ನಿಮ್ಮ ಕೂದಲಿಗೆ ಕೆಲವು ಪ್ರಮುಖ ಪೋಷಕಾಂಶಗಳನ್ನು ನೀಡುತ್ತದೆ. ನಿಯಮಿತವಾಗಿ ಅವುಗಳನ್ನು ಹಚ್ಚುವುದರಿಂದ ಕೂದಲಿಗೆ ಸಂಪೂರ್ಣ ಪ್ರಯೋಜನ ದೊರೆಯುತ್ತದೆ. ಇದು ಕೂದಲು ತೆಳುವಾಗುವುದು ಮತ್ತು ಕೂದಲು ಉದುರುವಿಕೆಯ ಸಮಸ್ಯೆಗೆ ಪರಿಹಾರ ನೀಡುವುದು.  

ಕಲ್ಲಂಗಡಿ ಬೀಜಗಳು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಣದಲ್ಲಿಡುತ್ತದೆ. ಇದು ದೇಹದಲ್ಲಿ ಇನ್ಸುಲಿನ್ ಪ್ರತಿರೋಧವನ್ನು ಕಡಿಮೆ ಮಾಡಲು ಸಹಕರಿಸುತ್ತವೆ. ಹೀಗಾಗಿ ಮಧುಮೇಹಿಗಳಿಗೆ ಇದು ಬಹಳ ಒಳ್ಳೆಯದು.

ಹುರಿದ ಕಲ್ಲಂಗಡಿ ಬೀಜ ತಿನ್ನುವುದು ನಿಮ್ಮ ಚರ್ಮಕ್ಕೆ ತುಂಬಾ ಪ್ರಯೋಜನಕಾರಿ. ಇದು ಮೊಡವೆಗಳ ಜೊತೆಗೆ ನೆರಿಗೆ, ಚರ್ಮ ಸುಕ್ಕುಗಟ್ಟುವುದನ್ನು ತಡೆಯುತ್ತದೆ.  

ಕಲ್ಲಂಗಡಿ ಬೀಜಗಳನ್ನು ತಿನ್ನುವುದರಿಂದ ಪುರುಷರಲ್ಲಿ ವೀರ್ಯದ ಸಂಖ್ಯೆ ಹೆಚ್ಚುತ್ತದೆ. ಇದರಿಂದ ಪುರುಷರ ಫಲವತ್ತತೆ ಸುಧಾರಿಸುತ್ತದೆ. ಕಲ್ಲಂಗಡಿ ಸಿಟ್ರುಲಿನ್ ಹೊಂದಿದ್ದು, ಉತ್ತಮ ರಕ್ತದ ಹರಿವನ್ನು ಉತ್ತೇಜಿಸಲು ರಕ್ತನಾಳ ಹಿಗ್ಗಿಸಲು ಈ ಅಂಶ ಕಾರಣವಾಗಿದೆ. ಕಲ್ಲಂಗಡಿ ಬೀಜಗಳು ಹೆಚ್ಚಿನ ಪ್ರಮಾಣದ ಸತು ಹೊಂದಿದ್ದು, ಇದು ಪುರುಷ ಸಂತಾನೋತ್ಪತ್ತಿ ವ್ಯವಸ್ಥೆಗೆ ಅವಶ್ಯಕವಾಗಿದೆ. ಸತುವು ಪುರುಷ ಬಂಜೆತನಕ್ಕೆ ಕಾರಣವಾದ ವೀರ್ಯದ ಗುಣಮಟ್ಟ ಸುಧಾರಿಸಲು ಸಹಾಯ ಮಾಡುತ್ತದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link