ಇಷ್ಟು ಸಮಯದ ನಂತರ ಫ್ರಿಜ್ ನಲ್ಲಿಟ್ಟ ಕಲ್ಲಂಗಡಿ ಹಣ್ಣು ವಿಷವಾಗುತ್ತದೆಯಂತೆ.. !
![ತಾಜಾ ಕಲ್ಲಂಗಡಿ ಪ್ರಯೋಜನಗಳು fresh Watermelon Health Benefits](https://kannada.cdn.zeenews.com/kannada/sites/default/files/5aa_48.jpg?im=FitAndFill=(500,286))
ಬೇಸಿಗೆಯಲ್ಲಿ ಕಲ್ಲಂಗಡಿ ಹಣ್ಣನ್ನು ಫ್ರೆಶ್ ಆಗಿ ಕತ್ತರಿಸಿ ತಿನ್ನುವುದೇ ಸರಿಯಾದ ಮಾರ್ಗ. ಅದನ್ನು ಫ್ರಿಜ್‌ನಲ್ಲಿ ಇಡುತ್ತಿದ್ದರೆ, ಫ್ರಿಜ್‌ನ ತಾಪಮಾನವು ತುಂಬಾ ಕಡಿಮೆಯಿರಬೇಕು. ಕಲ್ಲಂಗಡಿ ನಮ್ಮ ಆರೋಗ್ಯಕ್ಕೆ ವರದಾನವೇ ಸರಿ. ಇದು ಪೊಟ್ಯಾಸಿಯಮ್, ಮೆಗ್ನೀಸಿಯಮ್, ವಿಟಮಿನ್ ಎ, ವಿಟಮಿನ್ ಬಿ 6 ಮತ್ತು ವಿಟಮಿನ್ ಸಿ ಯಲ್ಲಿ ಸಮೃದ್ಧವಾಗಿದೆ. ಕಲ್ಲಂಗಡಿಯಲ್ಲಿ ಅತ್ಯಧಿಕ ಪ್ರಮಾಣದ ಲೈಕೋಪೀನ್ ಕಂಡುಬರುತ್ತದೆ. ಇದು ದೇಹದಲ್ಲಿ ರಕ್ತವನ್ನು ಹೆಚ್ಚಿಸುವ ಕೆಲಸ ಮಾಡುತ್ತದೆ. ಅಷ್ಟೇ ಅಲ್ಲ ಕ್ಯಾನ್ಸರ್ ನಂತಹ ಮಾರಕ ರೋಗಗಳನ್ನು ತಡೆಯಲು ಈ ಹಣ್ಣು ಸಹಕಾರಿಯಾಗಿದೆ.
![ಕಲ್ಲಂಗಡಿಯ ಪೌಷ್ಟಿಕಾಂಶದ ಮೌಲ್ಯ Nutrition Value Of Watermelon](https://kannada.cdn.zeenews.com/kannada/sites/default/files/4aa_51.jpg?im=FitAndFill=(500,286))
ಕಲ್ಲಂಗಡಿಯಲ್ಲಿ ಇರುವ ಆ್ಯಂಟಿ ಆಕ್ಸಿಡೆಂಟ್ ಪ್ರಮಾಣವೂ ಹೆಚ್ಚು. 2 ಕಪ್ ಕತ್ತರಿಸಿದ ಕಲ್ಲಂಗಡಿ 12.7 ಗ್ರಾಂ ಲೈಕೋಪೀನ್ ಅನ್ನು ಒದಗಿಸುತ್ತದೆ. ಆದರೆ ಕಲ್ಲಂಗಡಿ ಹಣ್ಣನ್ನು ಫ್ರಿಡ್ಜ್ ನಲ್ಲಿಟ್ಟರೆ ಅಥವಾ ಅತಿ ತಣ್ಣನೆಯ ತಾಪಮಾನದಲ್ಲಿಟ್ಟರೆ ಅದರಲ್ಲಿ ಲೈಕೋಪೀನ್ ಅಂಶ ಕಡಿಮೆಯಾಗುತ್ತದೆ. ಇದಲ್ಲದೆ, ಕಲ್ಲಂಗಡಿಯಲ್ಲಿ ಮತ್ತೊಂದು ಪೌಷ್ಟಿಕಾಂಶದ ಅಂಶವಿದೆ, ಇದನ್ನು ಸಿಟ್ರೋಲಿನ್ ಎಂದು ಕರೆಯಲಾಗುತ್ತದೆ. 2 ಕಪ್ ಕತ್ತರಿಸಿದ ಕಲ್ಲಂಗಡಿಯಲ್ಲಿ 286 ಗ್ರಾಂ ಸಿಟ್ರುಲಿನ್ ಕಂಡುಬರುತ್ತದೆ.
![ಫ್ರಿಡ್ಜ್‌ನಲ್ಲಿ ಇರಿಸಲಾದ ಕಲ್ಲಂಗಡಿ ಹಾನಿ side effects of watermelon kept in fridge](https://kannada.cdn.zeenews.com/kannada/sites/default/files/3aa_52.jpg?im=FitAndFill=(500,286))
ಕಲ್ಲಂಗಡಿ ಹಣ್ಣನ್ನು ರೆಫ್ರಿಜಿರೇಟರ್ ನಲ್ಲಿಟ್ಟರೆ ಲೈಕೋಪಿನ್, ಸಿಟ್ರೋಲಿನ್, ವಿಟಮಿನ್ ಎ, ವಿಟಮಿನ್ ಸಿ ಪ್ರಮಾಣ ಕಡಿಮೆಯಾಗುತ್ತದೆ ಎನ್ನುತ್ತಾರೆ ತಜ್ಞರು. ಅಷ್ಟೇ ಅಲ್ಲ ಕಲ್ಲಂಗಡಿ ಹಣ್ಣನ್ನು ಫ್ರಿಜ್ ನಲ್ಲಿಟ್ಟರೆ ಸೋಂಕು ತಗಲುವ ಸಾಧ್ಯತೆ ಹೆಚ್ಚುತ್ತದೆ. ಕತ್ತರಿಸಿದ ಕಲ್ಲಂಗಡಿಯನ್ನು ರೆಫ್ರಿಜರೇಟರ್‌ನಲ್ಲಿ ಇಡುವುದರಿಂದ ಅದರಲ್ಲಿ ಇರುವ ಸಕ್ಕರೆಯ ಪ್ರಮಾಣ ಹೆಚ್ಚುತ್ತದೆ.
ಕಲ್ಲಂಗಡಿ ಹಣ್ಣನ್ನು ಫ್ರಿಡ್ಜ್‌ನಲ್ಲಿ ಇಡುವ ಅಗತ್ಯವಿಲ್ಲ ಏಕೆಂದರೆ ಅದರ ಹೊರ ಪದರದ ಚರ್ಮವು ತುಂಬಾ ದಪ್ಪವಾಗಿರುತ್ತದೆ, ಇದರಿಂದಾಗಿ ಅದು ಬೇಗನೆ ಹಾಳಾಗುವುದಿಲ್ಲ. ನೀವು 15 ರಿಂದ 20 ದಿನಗಳವರೆಗೆ ಫ್ರಿಜ್ ನಲ್ಲಿ ಇಡೀ ಕಲ್ಲಂಗಡಿ ಇರಿಸಬಹುದು.
( ಸೂಚನೆ: ಈ ಮೇಲಿನ ಲೇಖನವು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)