ಪಾರ್ಲರ್‌ಗೆ ಹೋಗದೆ ಮನೆಯಲ್ಲೇ ವ್ಯಾಕ್ಸಿಂಗ್ ಮಾಡುತ್ತೀರಾ? ಈ ವಿಷಯಗಳ ಬಗ್ಗೆ ಇರಲಿ ಎಚ್ಚರ

Mon, 22 Apr 2024-11:11 am,

ವ್ಯಾಕ್ಸಿಂಗ್ ಮಾಡಿಸುವುದು ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸುತ್ತದೆ. ಕೆಲವರು ಪಾರ್ಲರ್‌ಗೆ ಹೋಗಿ ವ್ಯಾಕ್ಸಿಂಗ್ ಮಾಡಿಸುವುದರಿಂದ ಇನ್ನೂ ಕೆಲವರು ಈ ಬ್ಯುಸಿ ಜೀವನಶೈಲಿಯಲ್ಲಿ ಪಾರ್ಲರ್‌ಗೆ ಹೋಗಲು ಸಮಯವಿಲ್ಲದೆ ಮನೆಯಲ್ಲಿಯೇ ವ್ಯಾಕ್ಸಿಂಗ್ ಮಾಡಿಕೊಳ್ಳುತ್ತಾರೆ. ಆದರೆ, ಈ ಸಮಯದಲ್ಲಿ ಸ್ವಲ್ಪ ಅಜಾಗರೂಕರಾಗಿದ್ದರೂ ಇದು ನಿಮ್ಮ ಚರ್ಮವನ್ನು ಹಾನಿಗೊಳಿಸಬಹುದು. ಇದನ್ನು ತಪ್ಪಿಸಲು ಮನೆಯಲ್ಲಿ ವ್ಯಾಕ್ಸಿಂಗ್ ಮಾಡಿಸುವಾಗ ಕೆಲವು ವಿಷಯಗಳ ಬಗ್ಗೆ ವಿಶೇಷ ಗಮನಹರಿಸಬೇಕು. ಅಂತಹ ವಿಷಯಗಳೆಂದರೆ... 

ಮನೆಯಲ್ಲಿ ವ್ಯಾಕ್ಸಿಂಗ್ ಮಾಡುವಾಗ,  ವ್ಯಾಕ್ಸ್ ತಾಪಮಾನದ ಬಗ್ಗೆ ವಿಶೇಷ ಎಚ್ಚರಿಕೆ ಇರಬೇಕು. ಇಲ್ಲದಿದ್ದರೆ, ಚರ್ಮವು ಸುಟ್ಟು ಹೋಗುವ ಸಾಧ್ಯತೆ ಇರುತ್ತದೆ. 

ವ್ಯಾಕ್ಸ್ ಅನ್ವಯಿಸುವಾಗ ಕೆಲವರು ತೆಳುವಾದ ಪದರವನ್ನು ಅನ್ವಯಿಸುತ್ತಾರೆ. ಆದರೆ, ಇದು ಸರಿಯಾದ ಮಾರ್ಗವಲ್ಲ. ಚರ್ಮದ ಮೇಲೆ ವ್ಯಾಕ್ಸ್ ಅನ್ವಯಿಸುವಾಗ ದಪ್ಪ ಪದರವನ್ನು ಅನ್ವಯಿಸಿ. 

ವ್ಯಾಕ್ಸ್ ರಿಮೂವ್ ಮಾಡುವಾಗ ಕೆಲವರು ನಿಧಾನವಾಗಿ ಸ್ವಲ್ಪ ಸ್ವಲ್ಪವೇ ವ್ಯಾಕ್ಸ್ ತೆಗೆಯುತ್ತಾರೆ. ಆದರಿದು ಹೆಚ್ಚು ನೋವುಂಟು ಮಾಡಬಹುದು. ಇದನ್ನು ತಪ್ಪಿಸಲು ನೀವು ವ್ಯಾಕ್ಸ್ ಮೇಲೆ ಸ್ಟ್ರಿಪ್ ಅನ್ವಯಿಸಿದಾದ ತ್ವರಿತವಾಗಿ ಅದನ್ನು ತೆಗೆಯಿರಿ. 

ಗಾಯಗೊಂಡಿರುವ ಜಾಗದಲ್ಲಿ ಎಂದಿಗೂ ವ್ಯಾಕ್ಸ್ ಹಚ್ಚಬೇಡಿ. ಇದರಿಂದ ಪ್ರತೀಕೂಲ ಪರಿಣಾಮಗಳನ್ನು ಎದುರಿಸಬೇಕಾಗಬಹುದು. 

ವ್ಯಾಕ್ಸಿಂಗ್ ಮಾಡಿದ ನಂತರ, ನೀರಿನಿಂದ ತೊಳೆದು ಬಳಿಕ ತಪ್ಪದೇ  ಮಾಯಿಶ್ಚರೈಸರ್ ಅನ್ವಯಿಸುವುದನ್ನು ಮರೆಯಬೇಡಿ. 

ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link