Waxing Tips: ವ್ಯಾಕ್ಸಿಂಗ್ ಬಳಿಕ ಈ ತಪ್ಪುಗಳನ್ನು ಮಾಡಲೇಬಾರದು!
ದೇಹದಲ್ಲಿ ಅನಗತ್ಯ ಕೂದಲುಗಳನ್ನು ತೆಗೆದು ಕೈ ಮತ್ತು ಕಾಲುಗಳನ್ನು ಸುಂದರಗೊಳಿಸಲು ವ್ಯಾಕ್ಸಿಂಗ್ ಮಾಡಿಸಲಾಗುತ್ತದೆ. ಆದರೆ, ವ್ಯಾಕ್ಸಿಂಗ್ ಬಳಿಕ ಚರ್ಮವು ಸಂಪೂರ್ಣವಾಗಿ ಮೃದುವಾಗಿರುತ್ತದೆ. ಈ ಸಂದರ್ಭದಲ್ಲಿ ನೀವು ಮಾಡುವ ಕೆಲವು ತಪ್ಪುಗಳು ನಿಮ್ಮ ಚರ್ಮ ಕಪ್ಪಾಗುವಂತೆ ಮಾಡುತ್ತದೆ. ಹಾಗಿದ್ದರೆ, ವ್ಯಾಕ್ಸಿಂಗ್ ಬಳಿಕ ಯಾವ ತಪ್ಪುಗಳನ್ನು ಮಾಡಬಾರದು ಎಂದು ತಿಳಿಯಿರಿ.
ವ್ಯಾಕ್ಸ್ ಮಾಡಿದ ನಂತರ ತುಂಬಾ ಬಿಸಿ ನೀರಿನಿಂದ ಸ್ನಾನ ಮಾಡಬಾರದು. ಇದರಿಂದ ಚರ್ಮ ಕಪ್ಪಾಗಬಹುದು.
ವ್ಯಾಕ್ಸ್ ಮಾಡಿಸಿದ ನಂತರ ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದರಿಂದ ಚರ್ಮವು ಹೆಚ್ಚು ಗಾಢವಾಗಿ ಕಾಣುತ್ತದೆ.
ವ್ಯಾಕ್ಸ್ ಮಾಡಿಸಿದ ಬಳಿಕ ಕನಿಷ್ಠ ಮೂರ್ನಾಲ್ಕು ದಿನಗಳವರೆಗೆ ಸ್ಕ್ರಬ್ ಮಾಡಬಾರದು. ಇಲ್ಲವೇ, ಇದು ಚರ್ಮವನ್ನು ಹಾನಿಗೊಳಿಸುತ್ತದೆ.
ವ್ಯಾಕ್ಸಿಂಗ್ ಮಾಡಿಸಿದ ಬಳಿಕ ರಾಸಾಯನಿಕ ಕ್ರೀಮ್ ಗಳನ್ನು ಬಳಸಬೇಡಿ. ವ್ಯಾಕ್ಸ್ ಮಾಡಿಸಿದ ಚರ್ಮಕ್ಕೆ ರಾಸಾಯನಿಕಗಳನ್ನು ಬಳಸುವುದರಿಂದ ಚರ್ಮಕ್ಕೆ ಹಾನಿಯಾಗುತ್ತದೆ.
ವ್ಯಾಕ್ಸ್ ಮಾಡಿಸಿದ ಬಳಿಕ ತುರಿಕೆ ಉಂಟಾಗಬಹುದು. ಆ ಸಂದರ್ಭದಲ್ಲಿ ಒರಟಾದ ವಸ್ತುಗಳನ್ನು ಬಳಸಿ ತುರಿಕೆ ಮಾಡಿಕೊಳ್ಳುವುದರಿಂದ ಇದು ಗಮನಾರ್ಹವಾಗಿ ಹೆಚ್ಚಾಗಬಹುದು. ಇದರಿಂದಾಗಿ ಚರ್ಮ ಕೆಂಪಾಗಬಹುದು.
ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.