ಮಧ್ಯಮ ವರ್ಗದ ಮನೆಯಲ್ಲಿ ಈ ವಸ್ತುಗಳು ಇದ್ದೇ ಇರುತ್ತದೆ .! ಒಮ್ಮೆ ಗಮನಿಸಿ ನೋಡಿ
ಬಹುತೇಕ ಮಧ್ಯಮ ವರ್ಗದ ಮನೆಗಳ ವಾಶ್ ರೂಂನಲ್ಲಿ ಶೂನ್ಯ ವ್ಯಾಟ್ ಬಲ್ಬ್ ಇರುತ್ತದೆ. ವಾಶ್ ರೂಂನಲ್ಲಿ ಹೆಚ್ಚು ಬೆಳಕು ಬೇಕಾಗಿಲ್ಲ ಎಂಬ ಮನಸ್ಥಿತಿಯ ಆಧಾರದಲ್ಲಿ ಹೀಗೆ ಮಾಡಲಾಗುತ್ತದೆ. ಇದು ವಿದ್ಯುತ್ ಉಳಿಸುಅ ತಂತ್ರವೂ ಹೌದು.
ಪ್ರತಿ ಭಾರತೀಯ ಮಧ್ಯಮ ವರ್ಗದ ಮನೆಯಲ್ಲಿ ಇಂತಹ ವಿನ್ಯಾಸದ ಚಮಚ ಇದ್ದೇ ಇರುತ್ತದೆ. ಯಾರ ಮನೆಯಲ್ಲಿ ಇಂತಹ ಸ್ಪೂನ್‌ಗಳಿವೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಹಾಕಿ ಎನ್ನುವ ಪೋಸ್ಟ್ ಗಳನ್ನೂ ಕೂಡಾ ಇತ್ತೀಚಿನ ದಿನಗಳಲ್ಲಿ ಕಾಣಬಹುದು.
ಮಧ್ಯಮ ವರ್ಗದ ಮನೆಗಳಲ್ಲಿ, ಫ್ರಿಡ್ಜ್ ತೆರೆದಾಗ, ಐಸ್ ಟ್ರೇನಲ್ಲಿ ಐಸ್ ಇರುವುದಿಲ್ಲ. ಬದಲಾಗಿ ಸಣ್ಣ ಬಟ್ಟಲಿನಲ್ಲಿ ಐಸ್ ಇಡಲಾಗುತ್ತದೆ. ಟ್ರೇನಲ್ಲಿ ಕಡಿಮೆ ಐಸ್ ಆಗುತ್ತದೆ ಮತ್ತು ಫ್ರಿಜ್ ನಲ್ಲಿ ಹೆಚ್ಚಿನ ಜಾಗವನ್ನು ಆಕ್ರಮಿಸುತ್ತದೆ ಎನ್ನುವುದು ಇದರ ಹಿಂದಿನ ಕಾರಣ.
ಮಧ್ಯಮ ವರ್ಗದ ಜನರನ್ನು ಅತ್ಯಂತ ಸಂತೋಷಕರ ಬದುಕು ಬದುಕುತ್ತಾರೆ. ತಮ್ಮಲ್ಲಿ ಇದ್ದುದರಲ್ಲಿ ಆನಂದವಾಗಿರುವುದು ಅವರಿಗೆ ಗೊತ್ತು. ಭಾರತೀಯ ತಾಯಂದಿರಿಗೆ ಟೂತ್ ಬ್ರಷ್ ಅನ್ನು ಕೊನೆಯವರೆಗೂ ಬಳಸುವುಡು ಗೊತ್ತಿರುತ್ತದೆ.