Petrol Price : ಈ ದೇಶಗಳಲ್ಲಿ ಬಾಟಲಿ ನೀರಿಗಿಂತಲೂ ಕಡಿಮೆ ದರದಲ್ಲಿ ಸಿಗುತ್ತದೆ ಪೆಟ್ರೋಲ್

Sun, 10 Jan 2021-4:41 pm,

ಪೆಟ್ರೋಲ್ ಮತ್ತು ಡೀಸೆಲ್ ಖರೀದಿಸಲು ಒಂದು ಲೀಟರ್ ನೀರಿಗಿಂತ ಕಡಿಮೆ ಹಣವನ್ನು ಪಾವತಿಸಬೇಕಾದ ಅನೇಕ ದೇಶಗಳು ಪ್ರಪಂಚದಲ್ಲಿವೆ. ವಿಶ್ವದ ಮೂರು ದೇಶಗಳಾದ ವೆನೆಜುವೆಲಾ, ಇರಾನ್ ಮತ್ತು ಅಂಗೋಲಾಗಳಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 20 ರೂಪಾಯಿಗಳಿಗಿಂತ ಕಡಿಮೆಯಿದೆ. ವೆನೆಜುವೆಲಾದ ಪೆಟ್ರೋಲ್ ಬೆಲೆ ಜನವರಿ 4 ರಂದು ಪ್ರತಿ ಲೀಟರ್‌ಗೆ 1.46 ರೂ., ಇರಾನ್‌ನಲ್ಲಿ 4.24 ರೂ. ಮತ್ತು ಅಂಗೋಲಾದಲ್ಲಿ  17.88 ರೂ. ದಾಖಲಾಗಿದೆ.

ಇನ್ನು, ಗ್ಲೋಬಲ್ ಪೆಟ್ರೋಲ್ ಡೀಸೆಲ್ ಪ್ರೈಸ್.ಕಾಂನ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ,  ಹಾಂಗ್ ಕಾಂಗ್‌ನಲ್ಲಿ ಪ್ರತಿ ಲೀಟರ್‌ ಪೆಟ್ರೋಲ್ ಗೆ169.21 ರೂ., ಮಧ್ಯ ಆಫ್ರಿಕಾದ ಗಣರಾಜ್ಯದಲ್ಲಿ 150.29 ರೂ., ಸಿರಿಯಾದಲ್ಲಿ 149.08, ನೆದರ್‌ಲ್ಯಾಂಡ್‌ನಲ್ಲಿ 140.90 ರೂ. 135.38 ರೂಪಾಯಿ ಮತ್ತು ಫಿನ್‌ಲ್ಯಾಂಡ್‌ನಲ್ಲಿ  133.90 ರೂಪಾಯಿ ದರವನ್ನು ಹೊಂದಿದೆ. ಇದಲ್ಲದೆ, ಇಂಗ್ಲೆಂಡ್‌ನಲ್ಲಿ 116 ರೂ, ಸ್ವಿಟ್ಜರ್‌ಲ್ಯಾಂಡ್‌ನಲ್ಲಿ 115 ರೂ., ಜರ್ಮನಿಯಲ್ಲಿ 116 ರೂ., ಜಪಾನ್‌ನಲ್ಲಿ 93.62 ರೂ., ಆಸ್ಟ್ರೇಲಿಯಾದಲ್ಲಿ 68.91 ರೂ., ಯುಎಸ್‌ನಲ್ಲಿ 50.13 ರೂ. ಮತ್ತು ರಷ್ಯಾದಲ್ಲಿ ಒಂದು ಲೀಟರ್‌ ಪೆಟ್ರೋಲ್ ಬೆಲೆ  42.69 ರೂ.ಯಷ್ಟಿದೆ.

ಈ ಪೆಟ್ರೋಲ್  ಬೆಲೆಯನ್ನು  ನಮ್ಮ ನೆರೆಯ ರಾಷ್ಟ್ರಗಳ ಬೆಲೆಯೊಂದಿಗೆ ಹೋಲಿಸಿದರೆ ಭಾರತದಲ್ಲಿ ಪೆಟ್ರೋಲ್ ಗೆ ಬೆಲೆ ಅತಿ ಹೆಚ್ಚ ದರ ಇದೆ. ನೆರೆಯ ರಾಷ್ಟ್ರಗಳಾದ ಚೀನಾದಲ್ಲಿ 72.62 ರೂ., ನೇಪಾಳದಲ್ಲಿ 67.41 ರೂ., ಅಫ್ಘಾನಿಸ್ತಾನದಲ್ಲಿ 36.34 ರೂ., ಬರ್ಮಾದಲ್ಲಿ 43.53 ರೂ., ಪಾಕಿಸ್ತಾನದಲ್ಲಿ 48.19 ರೂ., ಭೂತಾನ್‌ನಲ್ಲಿ 49.56 ರೂ. ಮತ್ತು ಶ್ರೀಲಂಕಾದಲ್ಲಿ 62.79 ರೂ. ದರವನ್ನು ನಿಗದಿಪಡಿಸಲಾಗಿದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link