ಈ ರಾಶಿಗಳ ಜನರು ಚಿನ್ನ ಧರಿಸಿದರೆ ಅದೃಷ್ಟದ ಬಾಗಿಲೇ ತೆರೆಯುತ್ತದೆ, ಧನ-ಧಾನ್ಯದಿಂದ ಮನೆ ತುಂಬಿ ತುಳುಕುತ್ತದೆ!

Sat, 29 Jul 2023-4:16 pm,

ಮೇಷ ರಾಶಿ: ಜೋತಿಷ್ಯ ಶಾಸ್ತ್ರದ ಪ್ರಕಾರ ಮೇಷ ರಾಶಿಗಳ ಜನರ ಜೀವನ ಸಾಕಷ್ಟು ಸವಾಲುಗಳಿಂದ ಕೂಡಿರುತ್ತದೆ. ಆದರೆ, ಇವರು ತಮ್ಮ ಆತ್ಮವಿಶ್ವಾಸ ಹಾಗೂ ಪರಾಕ್ರಮದ ಬಲದಿಂದ ಇವರು ಎಲ್ಲಾ ಸಂಕಷ್ಟಗಳನ್ನು ಸುಲಭವಾಗಿ ದಾಟುತ್ತಾರೆ. ಹೀಗಿರುವಾಗ, ಇವರು ಚಿನ್ನಾಭರಣ ಧರಿಸಿದರೆ ಇವರ ಧನಸಂಪತ್ತು ಹೆಚ್ಚಾಗಿ, ಆದಾಯದಲ್ಲಿಯೂ ಕೂಡ ಹೆಚ್ಚಾಗುತ್ತದೆ.   

ವೃಷಭ ರಾಶಿ: ಈ ಜಾತಕದ ಜನರು ತುಂಬಾ ಕಠಿಣ ಪರಿಶ್ರಮಿಗಳು, ಸಾಹಸ ಹಾಗೂ ಧೈರ್ಯಶಾಲಿಗಳಾಗಿರುತ್ತಾರೆ. ಯಾರೊಬ್ಬರ ಸಹಾಯಕ್ಕೆ ಮುಂದೆ ಬರಲು ಇವರು ತತ್ಪರರಾಗಿರುತ್ತಾರೆ. ಈ ರಾಶಿಯ ಜನರು ಒಂದು ವೇಳೆ ಚಿನ್ನವನ್ನು ಧರಿಸಿದರೆ, ಇವರ ಆರ್ಥಿಕ ಸ್ಥಿತಿಯೇ ಬದಲಾಗುತ್ತದೆ. ಇದರ ಜೊತೆಗೆ ಮನೆಯಲ್ಲಿ ಸುಖ-ಸಮೃದ್ಧಿಯ ಜೊತೆಗೆ ಖುಷಿಗಳ ಆಗಮನವಾಗುತ್ತದೆ.  

ಸಿಂಹ ರಾಶಿ: ಈ ರಾಶಿಯ ಜನರು ಸ್ವತಂತ್ರವಾಗಿ ಬದುಕಲು ಇಷ್ಟಪಡುತ್ತಾರೆ. ಇವರು ಪ್ರತಿಯೊಬ್ಬರ ಅಚ್ಚುಮೆಚ್ಚಿನ ವ್ಯಕ್ತಿಗಳಾಗಿರುತ್ತಾರೆ. ಇವರು ಪ್ರತಿಯೊಬ್ಬರಿಗೆ ದಾರಿಯನ್ನು ತೋರಿಸುವವರಾಗಿರುತ್ತಾರೆ. ಹೀಗಿರುವಾಗ ಒಂದು ವೇಳೆ ಈ ಜಾತಕದ ಜನರು ಚಿನ್ನವನ್ನು ಚರಿಸಿದರೆ, ಸಮಾಜದಲ್ಲಿ ಘನತೆ-ಗೌರವ ಹೆಚ್ಚಾಗುತ್ತದೆ ಜೊತೆಗೆ ಆಡಳಿತದಲ್ಲಿ ತನ್ನ ವರ್ಚಸ್ವವನ್ನು ಸ್ಥಾಪಿಸುತ್ತಾರೆ. ಇದಲ್ಲದೆ, ಇವರು ತಮ್ಮ ಕೌಶಲ್ಯದಿಂದ ಇತರರ ಮಧ್ಯೆ ವಿಶೇಷ ಹಿಡಿತವನ್ನು ಸಾಧಿಸುತ್ತಾರೆ. ಇವರು ಒಂದು ವೇಳೆ ಚಿನ್ನವನ್ನು ಧರಿಸಿದರೆ, ಇವರ ಜೀವನದಲ್ಲಿ ಹಣಕಾಸಿನ ಸಮಸ್ಯೆ ಎಂದಿಗೂ ಎದುರಾಗುವುದಿಲ್ಲ.   

ಮಕರ ರಾಶಿ: ಈ ರಾಶಿಗಳ ಜಾತಕದವರು ಯಾವಾಗಲೂ ಪರಿಶ್ರಮಿಗಳಾಗಿರುತ್ತಾರೆ. ಇವರು ತಮ್ಮ ಪರಿಶ್ರಮದ ಬಲದಿಂದ ದೊಡ್ಡ ದೊಡ್ಡ ಗುರಿಗಳನ್ನು ಸುಲಭವಾಗಿ ಸಾಧಿಸುತ್ತಾರೆ. ಜೀವನದಲ್ಲಿ ಇವರು ಉನ್ನತಾಧಿಕಾರಿಗಳ ಸ್ಥಾನಮಾನ ಸಾಧಿಸುತ್ತಾರೆ. ಒಂದು ವೇಳೆ ಈ ರಾಶಿಗಳ ಜಾತಕದವರು ಚಿನ್ನವನ್ನು ಧರಿಸಿದರೆ, ಇವರಿಗೆ ಅವರ ಅದೃಷ್ಟದ ಸಂಪೂರ್ಣ ಬೆಂಬಲ ಪ್ರಾಪ್ತಿಯಾಗುತ್ತದೆ. ಇವರು ತಮ್ಮ ಕ್ಷೇತ್ರದಲ್ಲಿ ಯಶಸ್ಸು ಸಾಧಿಸುವುದರ ಜೊತೆಗೆ ಉನ್ನತ ಸ್ಥಾನಮಾನ ಸಾಧಿಸುತ್ತಾರೆ. ಚಿನ್ನ ಇವರ ಜೀವನದಲ್ಲಿ ಒಂದು ಸ್ಥಿರತೆಯನ್ನು ತರುತ್ತದೆ. ಇದರಿಂದ ಇವರಿಗೆ ಜೀವನದಲ್ಲಿ ಎಂದಿಗೂ ಕೂಡ ಆರ್ಥಿಕ ಮುಗ್ಗಟ್ಟು ಎದುರಾಗುವುದಿಲ್ಲ. 

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)

ZEENEWS TRENDING STORIES

By continuing to use the site, you agree to the use of cookies. You can find out more by Tapping this link