ಆಮೆ ಉಂಗುರ ಧರಿಸಿದರೆ ಈ ರಾಶಿಯವರಿಗೆ ಒಲಿಯುವುದು ಅದೃಷ್ಟ.. ಧನ ಸಂಪತ್ತು ಪ್ರಾಪ್ತಿಯಾಗಿ, ವಿಷ್ಣುವಿನ ಕೃಪೆಯಿಂದ ತೊಲಗುವುದು ಕಷ್ಟ!

Wed, 11 Sep 2024-6:14 pm,

ಆಮೆ ಉಂಗುರವು ದುರದೃಷ್ಟವನ್ನು ನಿವಾರಿಸಲು ಸಹಾಯ ಮಾಡುತ್ತದೆ. ಫೆಂಗ್ ಶೂಯಿಯಲ್ಲಿ, ಆಮೆಯನ್ನು ಸಂತೋಷ, ಸಮೃದ್ಧಿ, ಸಂಪತ್ತು ಮತ್ತು ಅದೃಷ್ಟದ ಸಂಕೇತವೆಂದು ಪರಿಗಣಿಸಲಾಗುತ್ತದೆ. 

ಆಮೆ ಉಂಗುರವು ಅನೇಕ ರೀತಿಯ ವಾಸ್ತು ದೋಷಗಳನ್ನು ನಿವಾರಿಸುತ್ತದೆ. ಇದನ್ನು ಧರಿಸುವುದರಿಂದ ವ್ಯಕ್ತಿಯ ಒಳಗಿನಿಂದ ಋಣಾತ್ಮಕ ಶಕ್ತಿ ದೂರವಾಗುತ್ತದೆ ಮತ್ತು ಅವನ ಆತ್ಮವಿಶ್ವಾಸ ಹೆಚ್ಚಾಗುತ್ತದೆ.

ವಾಸ್ತು ಶಾಸ್ತ್ರದ ಪ್ರಕಾರ ಆಮೆಯ ಉಂಗುರವನ್ನು ಬೆಳ್ಳಿಯಲ್ಲಿ ಮಾತ್ರ ಮಾಡಿಸಿಕೊಂಡು ಹಾಕಿಕೊಳ್ಳಬೇಕು. ಇತರ ಲೋಹದಿಂದ ಮಾಡಿದ ಉಂಗುರವು ಶುಭ ಪರಿಣಾಮವನ್ನು ನೀಡುವುದಿಲ್ಲ. 

ಆಮೆಯ ಉಂಗುರವನ್ನು ಬಲಗೈಯಲ್ಲಿ ಮಾತ್ರ ಧರಿಸಬೇಕು. ಎಡಗೈಯಲ್ಲಿ ಆಮೆಯ ಉಂಗುರವನ್ನು ಧರಿಸಬಾರದು. ಇದು ಅಶುಭ ಫಲಿತಾಂಶವನ್ನು ನೀಡುತ್ತದೆ. ತೋರುಬೆರಳು ಅಥವಾ ಮಧ್ಯದ ಬೆರಳಿನಲ್ಲಿ ಆಮೆ ಉಂಗುರ ಧರಿಸಬಹುದು.

ಈ ಉಂಗುರವನ್ನು ಧರಿಸುವಾಗ, ಆಮೆಯ ತಲೆಯ ಭಾಗವು ಧರಿಸಿದವರ ಕಡೆಗೆ ಇರಬೇಕು ಎಂಬುದನ್ನು ನೆನಪಿನಲ್ಲಿಡಬೇಕು. ಲಕ್ಷ್ಮಿಯ ದಿನವಾದ ಶುಕ್ರವಾರ ಬೆಳಿಗ್ಗೆ ಈ ಉಂಗುರವನ್ನು ಧರಿಸಬೇಕು.

ಮಿಥುನ, ಕನ್ಯಾ , ಕುಂಭ, ಮಕರ ರಾಶಿಯವರು ಆಮೆ ಉಂಗುರವನ್ನು ಧರಿಸಬಾರದು. ಆಮೆ ಉಂಗುರ ಹಾಕುವುದರಿಂದ ಈ ರಾಶಿಯವರಿಗೆ ಅಶುಭ ಪರಿಣಾಮ ಬೀರುತ್ತದೆ. ಇದರಿಂದ ಸಂಪತ್ತಿನ ಹಾನಿಯಾಗುತ್ತದೆ. 

ವೃಶ್ಚಿಕ, ಮೀನಾ ರಾಶಿಯವರು ಆಮೆ ಉಂಗುರವನ್ನು ಧರಿಸಿದರೆ ಅದೃಷ್ಟದ ಬಾಗಿಲು ತೆರೆಯುತ್ತದೆ. ವೆಂಕಟರಮಣ ದೇವಸ್ಥಾನದಲ್ಲಿ ಪೂಜೆ ಮಾಡಿಸಿ ಬಳಿಕ ಧರಿಸಿದರೆ ಮತ್ತಷ್ಟು ಶುಭ ಲಾಭಗಳನ್ನು ನೀಡುತ್ತದೆ.

ಗಮನಿಸಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಧಾರ್ಮಿಕ ವಿಚಾರವನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link