Wednesday Remedies: ಆರ್ಥಿಕ ಸಂಕಷ್ಟದಿಂದ ಮುಕ್ತಿಗಾಗಿ ಇಂದೇ ಮಾಡಿ ಈ ಪರಿಹಾರ
ಜ್ಯೋತಿಷ್ಯ ಶಾಸ್ತ್ರದಲ್ಲಿ ಪ್ರತಿ ದಿನವನ್ನೂ ಒಂದೊಂದು ದೇವರಿಗೆ ಮೀಸಲಿಡಲಾಗಿದೆ. ಅಂತೆಯೇ, ಬುಧವಾರವನ್ನು ವಿಘ್ನ ವಿನಾಶಕ ಗಣೇಶನಿಗೆ ಸಮರ್ಪಿಸಲಾಗಿದೆ.
ಗಣೇಶ: ಜ್ಯೋತಿಷ್ಯದಲ್ಲಿ ಪ್ರತಿ ಕಾರ್ಯದಲ್ಲೂ ವಿಘ್ನ ವಿನಾಶಕನಿಗೆ ಮೊದಲ ಪೂಜೆ ಸಲ್ಲಿಸಲಾಗುತ್ತದೆ. ಈ ಮೂಲಕ ನಾವು ಕೈಗೊಳ್ಳುವ ಕೆಲಸಗಳಲ್ಲಿ ಯಾವುದೇ ರೀತಿಯ ವಿಘ್ನ ಎದುರಾಗದಂತೆ ಗಣಪತಿಯನ್ನು ಧ್ಯಾನಿಸಲಾಗುತ್ತದೆ.
ಬುಧವಾರದಂದು ಗಣೇಶನ ಪೂಜೆ: ಬುಧವಾರವನ್ನು ಗಣಪತಿಗೆ ಸಮರ್ಪಿಸಲಾಗಿದ್ದು ಈ ದಿನ ಕೆಲವು ಪರಿಹಾರಗಳನ್ನು ಕೈಗೊಳ್ಳುವುದರಿಂದ ಜೀವನದಲ್ಲಿ ಎದುರಾಗಿರುವ ಸಂಕಷ್ಟಗಳಿಂದ ಮುಕ್ತಿ ದೊರೆಯಲಿದೆ ಎಂಬ ನಂಬಿಕೆ ಇದೆ.
ಬುಧ ದೋಷ: ಬುಧವಾರದಂದು ಗಣೇಶನನ್ನು ಪೂಜಿಸುವುದರಿಂದ ಜಾತಕದಲ್ಲಿ ಬುಧ ದೋಷ ಕಡಿಮೆ ಆಗಿ, ಬುಧ ಬಲಗೊಳ್ಳುತ್ತಾನೆ.
ಆರ್ಥಿಕ ಬಿಕ್ಕಟ್ಟು: ನೀವು ಆರ್ಥಿಕ ಬಿಕ್ಕಟ್ಟಿನಿಂದ ಬಳಲುತ್ತಿದ್ದರೆ ಬುಧವಾರದಂದು ಗಣಪತಿಯನ್ನು ಪೂಜಿಸುವಾಗ 21 ದರ್ಬೆಯನ್ನು ಅರ್ಪಿಸಿ.
ಸಾಲಬಾಧೆ: ಯಾವುದೇ ಒಬ್ಬ ವ್ಯಕ್ತಿ ಸಾಲಬಾಧೆಯಿಂದ ಮುಕ್ತಿ ಪಡೆಯಲು ಬುಧವಾರದ ದಿನ ಅಕ್ಕಿ, ಬೇಳೆ, ಬೆಲ್ಲ, ತುಪ್ಪವನ್ನು ಬೆರೆಸಿ ಹಸುವಿಗೆ ಆಹಾರವಾಗಿ ನೀಡಿ.
ನೆಮ್ಮದಿಯ ಜೀವನ: ಬುಧವಾರ ಗಣಪತಿಯನ್ನು ಪೂಜಿಸುವಾಗ ಗಣಪತಿಯ ಪ್ರಿಯ ಭಕ್ಷ್ಯಗಳಾದ ಲಡ್ಡು, ಮೋದಕದಂತಹ ಆಹಾರಗಳನ್ನು ನೇವೇದ್ಯವಾಗಿ ಅರ್ಪಿಸಿ. ಇದರಿಂದ ಗಣಪತಿ ಬಹಳ ಬೇಗ ಪ್ರಸನ್ನನಾಗುತ್ತಾನೆ. ಭಕ್ತರಿಗೆ ಸುಖ-ಸಮೃದ್ಧಿಯ ಜೀವನವನ್ನು ಆಶೀರ್ವದಿಸುತ್ತಾನೆ.
ಬುಧವಾರದ ದಿನ ಕೈಲಾಗದವರಿಗೆ ಅಗತ್ಯ ಆರ್ಥಿಕ ನೆರವು ನೀಡುವುದರಿಂದ ನಿಮ್ಮ ಜೀವನದಲ್ಲಿ ಎದುರಾಗಿರುವ ಹಣಕಾಸಿಗೆ ಸಂಬಂಧಿಸಿದ ಸಮಸ್ಯೆಗಳಿಂದ ಮುಕ್ತಿ ದೊರೆಯಲಿದೆ.
ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.