ಸರಳತೆಗೆ ಇನ್ನೊಂದು ಹೆಸರೇ ಲವ್ಲಿ ಸ್ಟಾರ್ ಎಂದ ಫ್ಯಾನ್ಸ್: ಪೋಟೋಸ್ ನೋಡಿ
ಲವ್ಲೀ ಸ್ಟಾರ್ ಪ್ರೇಮ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರವ ಪ್ರಮುಖ ನಟ. ಸರಳತೆಯ ಸರದಾರ ಇವರು ಎಂದರೆ ತಪ್ಪಾಗುವುದಿಲ್ಲ. ಇವರ ಸರಳತೆಗೆ ಬೆರಗಾಗದ ಮನಸ್ಸುಗಳೇ ಇಲ್ಲ.
2004 ರಲ್ಲಿ ತೆರೆಕಂಡ `ಪ್ರಾಣ' ಚಿತ್ರದಲ್ಲಿ ನಟಿಸುವ ಮೂಲಕ ಸಿನಿರಂಗ ಪ್ರವೇಶಿಸಿದರು. ಈ ಚಿತ್ರ ಅಷ್ಟು ಯಶಸ್ಸನ್ನು ನೀಡದಿದ್ದರೂ ಇದರ ಮುಂದಿನ ವರ್ಷ ತೆರೆಕಂಡ ಸಿನಿಮಾ ನೆನಪಿರಲಿ. ಈ ಸಿನಿಮಾ ಮೂಲಕ ಎಲ್ಲರ ಮನೆಮಾತಾಗಿ ಉಳಿದರು. ಇಂದಿಗೂ ಇವರನ್ನು ನೆನೆಪಿರಲಿ ಪ್ರೇಮ್ ಎಂದೇ ಜನ ಇವರನ್ನು ಗುರುತಿಸುತ್ತಾರೆ.
ಝೀ ಕನ್ನಡ ವಾಹಿನಿಯಲ್ಲಿ ಪ್ರತಿ ವಾರದ ಅಂತ್ಯದಲ್ಲಿ ಪ್ರಸಾರವಾಗುವ ವಿಕೇಂಡ್ ವಿತ್ ರಮೇಶ್ ಸೀಸನ್ 5 ನಲ್ಲಿ ಅಥಿತಿಯಾಗಿ ನೆನಪಿರಲಿ ಲವ್ಲಿ ಸ್ಟಾರ್ ಪ್ರೇಮ್ ಆಗಮಿಸಿದ್ದಾರೆ. ವೇದಿಕೆ ಮೇಲೆ ಪ್ರೇಮ್ ತಮ್ಮ ಸವಿನೆನಪುಗಳು, ತಮ್ಮ ಬದುಕು ಮುಖ್ಯವಾದ ನೆನಪುಗಳು ಎಲ್ಲವನ್ನು ಮರುಕಳಿಸಿದರು.
ಈ ನಟ ಎಷ್ಟು ಸರಳತೆ ಸ್ವಭಾವವನ್ನು ಹೊಂದಿದ್ದಾರೆ ಎನ್ನುವುದಕ್ಕೆ ಅವರು ವಿಕೇಂಡ್ ವಿತ್ ರಮೇಶ್ ಶೋನ ವೇದಿಕೆಯಲ್ಲಿ ಕುರ್ಚಿಗೆ ಕೈಮುಗಿದು ಕುಳಿತರು, ಇದನ್ನು ಮೆಚಿನ ಫ್ಯಾನ್ಸ್ ನಿಮಗೆ ನೀವೆ ಸರಿಸಾಟಿ, ಸರಳತೆಗೆ ಇನ್ನೊಂದು ಹೆಸರೇ ನೀವು ಎಂದು ಹೊಗಳಿದ್ದಾರೆ.
ವಿಕೇಂಡ್ ವಿತ್ ರಮೇಶ್ ಶೋ ಜೀವನ ಸಿಹಿ ಕಹಿ ನೆನೆಪುಗಳು, ಜೀವನದಲ್ಲಿ ವಿಶೇಷವಾದ ವ್ಯಕ್ತಿಗಳು, ಹಾಗೆಯೇ ನಾವು ಕಳೆದುಕೊಂಡ, ಮರೆತು ಹೋದ ಮತ್ತು ಅನಭವಿಸಿದ ದಿನಗಳನ್ನು ಮೆಲುಕುಹಾಕುವ ವೇದಿಕೆ ಇದಾಗಿದೆ.
ಪ್ರತಿಯೊಬ್ಬ ಯಶಸ್ಸನ್ನು ಪಡೆದ ವ್ಯಕ್ತಿಯ ಹಿಂದೆ ನಾವು ಊಹಿಸಲಾಗದಂತಹ ದುಃಖದ ಸಂಗತಿಗಳಿರುತ್ತವೆ. ಅವುಗಳೇ ನಮ್ಮ ಜೀವನದ ಸ್ಫೂರ್ತಿ ಎಂದು ತೋರಿಸುವ ವೇದಿಕೆ ವಿಕೇಂಡ್ ವಿತ್ ರಮೇಶ್.