Weight Control Tips: ನಮ್ಮ ಹಿರಿಯರ ಸಲಹೆಗಳನ್ನು ಅನುಸರಿಸಿದರೆ ಸುಲಭವಾಗಿ ತೂಕ ಇಳಿಸಬಹುದು- ಸಂಶೋಧನೆ

Mon, 31 Oct 2022-1:14 pm,

ಸಾಮಾನ್ಯವಾಗಿ ಮನೆಯ ಹಿರಿಯರು ಮನೆಯ ಮಕ್ಕಳಿಗೆ ಪ್ರತಿ ವಿಷಯದಲ್ಲೂ ಮಾರ್ಗದರ್ಶನ ನೀಡುತ್ತಾರೆ. ಅದು ಅವರು ತಿನ್ನುವ ಆಹಾರ, ನಡವಳಿಕೆ ಎಲ್ಲವನ್ನೂ ಒಳಗೊಂಡಿರುತ್ತದೆ. ಆದರೆ, ವಿಪರ್ಯಾಸವೆಂದರೆ ನಮ್ಮಲ್ಲಿ ಬಹುತೇಕ ಮಂದಿ ಹಿರಿಯರ ಮಾತುಗಳನ್ನು ನಿರ್ಲಕ್ಷಿಸುತ್ತೇವೆ. ಎಲ್ಲರಿಗೂ ತಿಳಿದಿರುವಂತೆ ನಮ್ಮ ಹಿರಿಯರು ಏನೇ ಹೇಳಿದರೂ, ಏನೇ ಮಾಡಿದರೂ ಅದರ ಹಿಂದೆ ಕೆಲವು  ವೈಜ್ಞಾನಿಕ ಅಂಶಗಳು ಅಡಗಿರುತ್ತವೆ. ಇತ್ತೀಚಿಗೆ ನಡೆದಿರುವ ಸಂಶೋಧನೆಯೊಂದು ಇದನ್ನು ಮತ್ತೆ ಸಾಬೀತುಪಡಿಸಿದೆ. 

ಪ್ರಸ್ತುತ ಯುಗದಲ್ಲಿ, ಬಹುತೇಕ ಜನರನ್ನು ಕಾಡುತ್ತಿರುವ ಸಮಸ್ಯೆ ಎಂದರೆ ತೂಕ ಹೆಚ್ಚಳ. ಈ ಕುರಿತಂತೆ ನಡೆಸಲಾಗಿರುವ ಸಂಶೋಧನೆಯಲ್ಲಿ ಬೆಳಗಿನ ಉಪಾಹಾರ ನಿಮ್ಮ ಹಸಿವನ್ನು ಹಾಳು ಮಾಡುವುದಿಲ್ಲ ಎಂಬುದಕ್ಕೆ ಪುರಾವೆಗಳಿವೆ ಎಂದು ತಜ್ಞರು ಹೇಳುತ್ತಾರೆ. ಆದರೆ ತಿಂಡಿಗಳ ರೂಪದಲ್ಲಿ, ಕರಿದ ಆಹಾರ, ಮೈದಾ ಬಿಸ್ಕತ್ತುಗಳಂತಹ ಅಲ್ಟ್ರಾ-ಪ್ರೊಸೆಸ್ಡ್ ತಿಂಡಿಗಳು ನಿಮ್ಮ ಹಸಿವನ್ನು ನೀಗಿಸುವ ಬದಲು, ನಿಮ್ಮ ಹಸಿವನ್ನು ಕಡಿಮೆ ಸಮಯದಲ್ಲಿ ಹೆಚ್ಚಿಸುತ್ತವೆ ಎಂದು ತಿಳಿಸಿದೆ.

ನಮ್ಮಲ್ಲಿ ಹೆಚ್ಚಿನ ಜನರಿಗೆ ತೂಕ ಹೆಚ್ಚಾಗಲು ಅವರ ಜೀವನಶೈಲಿ ಮತ್ತು ಕೆಟ್ಟ ಆಹಾರ ಪದ್ಧತಿಯೇ ಪ್ರಮುಖ ಕಾರಣವಾಗಿದೆ. ತೂಕವನ್ನು ಕಳೆದುಕೊಳ್ಳಲು, ಮೊದಲು ಜಂಕ್ ಫುಡ್‌ನಿಂದ ದೂರವಿರಬೇಕು. ಇದಲ್ಲದೆ, ಸರಿಯಾದ ಆಹಾರವನ್ನು ತೆಗೆದುಕೊಳ್ಳುವುದು ಬಹಳ ಮುಖ್ಯ. 

ಮನೆಯಲ್ಲಿ ಹಿರಿಯರು ಊಟದ ನಡುವೆ ಏನನ್ನೂ ತಿನ್ನಬೇಡಿ ಎಂದು ಗದರುತ್ತಾರೆ. ಅದು ಕಿರಿಯರಿಗೆ ಕೆಲವೊಮ್ಮೆ ಬೇಸರ ಉಂಟು ಮಾಡಿದರೆ, ಹಲವು ಬಾರಿ ಕೋಪವನ್ನೂ ತರಿಸುತ್ತದೆ. ಆದರೆ,  ಅವರ ಸಲಹೆಯು ವೈಜ್ಞಾನಿಕ ಸತ್ಯಗಳಿಂದ ಬೆಂಬಲಿತವಾಗಿದೆ ಎಂದು ಪ್ರಮುಖ ಪೌಷ್ಟಿಕತಜ್ಞರು ಹೇಳಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿರುವ ಲಂಡನ್‌ನ ಕಿಂಗ್ಸ್ ಕಾಲೇಜ್‌ನ ಜೆನೆಟಿಕ್ ಎಪಿಡೆಮಿಯಾಲಜಿಸ್ಟ್ ಪ್ರೊಫೆಸರ್ ಸ್ಪೆಕ್ಟರ್: 'ಜನರು ತಮ್ಮ ಆರೋಗ್ಯ ಮತ್ತು ತೂಕದ ಬಗ್ಗೆ ಕಾಳಜಿ ಹೊಂದಿದ್ದರೆ, ಅವರು ಊಟಕ್ಕೆ ಮುಂಚಿತವಾಗಿ ಬಡಿಸುವ ಸ್ಟಾರ್ಟರ್‌ಗಳು ಮತ್ತು ತಿಂಡಿಗಳನ್ನು ತಪ್ಪಿಸಬೇಕು. ಬಾಡಿ ಮಾಸ್ ಇಂಡೆಕ್ಸ್ ಅಥವಾ ಸಮತೋಲಿತ ತೂಕದ ಪ್ರಮಾಣದಲ್ಲಿ ಪರಿಪೂರ್ಣ ಫಿಟ್ ಎಂದು ಕಂಡುಬಂದಿರುವ ಈ ಸಂಶೋಧನೆಯಲ್ಲಿ ತೊಡಗಿರುವ ಹೆಚ್ಚಿನ ಜನರು ಸಾಮಾನ್ಯವಾಗಿ ಊಟದ ನಡುವೆ ಲಘು ಆಹಾರವನ್ನು ಸೇವಿಸುವುದಿಲ್ಲ ಎಂದಿದ್ದಾರೆ.

'ಡೈಲಿ ಮೇಲ್'ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ಪ್ರೊಫೆಸರ್ ಸ್ಪೆಕ್ಟರ್, 'ಜನರು ಬೆಳಿಗ್ಗೆ 11 ಗಂಟೆಯ ಮೊದಲು ಅಥವಾ ಸಂಜೆ 4 ಗಂಟೆಯ ಮೊದಲು ಏನನ್ನೂ ತಿನ್ನದಿದ್ದರೆ ಅವರ ದೇಹವು ಕೆಟ್ಟ ಪರಿಣಾಮ ಬೀರುತ್ತದೆ ಎಂಬುದು ಜನರ ಪರಿಕಲ್ಪನೆಯಾಗಿದೆ. ಈ ವಾದವು ಸಂಪೂರ್ಣವಾಗಿ ವಿಚಿತ್ರ ಮತ್ತು ಆಧಾರರಹಿತವಾಗಿದೆ ಎಂದಿದ್ದಾರೆ. ಈ ಅಂಶವನ್ನು ತಮ್ಮ ವರದಿಯಲ್ಲಿ ಅನೇಕ ಬಾರಿ ಪುನರುಚ್ಚರಿಸಿರುವ ಅಧ್ಯಾಪಕರು, ತೂಕವನ್ನು ಕಳೆದುಕೊಳ್ಳಲು ಸುಲಭವಾದ ಮಾರ್ಗವೆಂದರೆ ಪೂರ್ವ ಊಟದ ತಿಂಡಿಗಳನ್ನು ಸಂಪೂರ್ಣವಾಗಿ ನಿಷೇಧಿಸುವುದು. ಅಂತೆಯೇ, ಚಹಾ ಸಮಯದಲ್ಲಿ ಲಘು ಬಿಸ್ಕತ್ತುಗಳು, ಸ್ನ್ಯಾಕ್ ಬಾರ್‌ಗಳು, ಚಾಕೊಲೇಟ್‌ಗಳು ಮತ್ತು ಕ್ರಿಸ್ಪ್‌ಗಳಂತಹ ಅಲ್ಟ್ರಾ-ಪ್ರೊಸೆಸ್ಡ್ ಆಹಾರಗಳಿಂದ ದೂರವಿರುವುದು ಒಳಿತು ಎಂದವರು ಸಲಹೆ ನೀಡಿದ್ದಾರೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link