Weight Loss Diet: ಆರೋಗ್ಯಕರ ತೂಕ ಇಳಿಕೆಗೆ ನಿತ್ಯ ಉಪಹಾರದಲ್ಲಿರಲಿ ಈ ಕಡಿಮೆ ಕ್ಯಾಲೋರಿ ಆಹಾರಗಳು

Thu, 08 Feb 2024-8:27 am,

ತೂಕ ಇಳಿಕೆ ಉಪಹಾರ:  ಪ್ರಸ್ತುತ ನಮ್ಮಲ್ಲಿ ಬಹುತೇಕ ಜನರು ತೂಕ ಹೆಚ್ಚಳದಿಂದಾಗಿ ಚಿಂತಿತರಾಗಿದ್ದಾರೆ. ನೀವು ಅಂತಹವರಲ್ಲಿ ಒಬ್ಬರಾಗಿದ್ದು ತೂಕ ಕಳೆದುಕೊಳ್ಳಲು ಪ್ರಯತ್ನಿಸುತ್ತಿದ್ದರೆ ನಿಮ್ಮ ಬೆಳಗಿನ ಉಪಹಾರದ ಬಗ್ಗೆ ಹೆಚ್ಚಿನ ಗಮನವಹಿಸಬೇಕು. ಮುಂಜಾನೆ ಉಪಹಾರದಲ್ಲಿ ಕಡಿಮೆ ಕ್ಯಾಲೋರಿ ಆಹಾರವನ್ನು ಸೇವಿಸುವುದರಿಂದ ನೀವು ಆರೋಗ್ಯಕರವಾಗಿ ತೂಕ ಇಳಿಸಿಕೊಳ್ಳಬಹುದು. ಆರೋಗ್ಯಕರ ತೂಕ ಇಳಿಕೆಗೆ ಸಹಾಯಕವಾಗುವ ಅಂತಹ ಉಪಹಾರಗಳು ಯಾವುವು ಎಂದು ತಿಳಿಯೋಣ...  

ಅವಲಕ್ಕಿ:  ಅವಲಕ್ಕಿ ಕಡಿಮೆ ಕ್ಯಾಲೋರಿ ಆಹಾರವಾಗಿದೆ. ಅವಲಕ್ಕಿ ಬಹಳ ಸುಲಭವಾಗಿ ಫಟಾಫಟ್ ತಯಾರಿಸಬಹುದಾದ ಆಹಾರವೂ ಆಗಿದೆ. ಉಪಹಾರದಲ್ಲಿ ತರಕಾರಿಗಳೊಂದಿಗೆ ಅವಲಕ್ಕಿ ತಯಾರಿಸಿ ಸೇವಿಸುವುದರಿಂದ ಇದು ತೂಕ ಇಳಿಕೆಗೆ ಪ್ರಯೋಜನಕಾರಿಯಾಗಿದೆ. 

ಹೆಸರು ಬೇಳೆ ದೋಸೆ:  ಹೆಸರು ಬೇಳೆ ಫೈಬರ್‌ನಿಂದ ಸಮೃದ್ಧವಾಗಿದೆ. ಇದರಲ್ಲಿ ಪ್ರೋಟೀನ್ ಕೂಡ ಹೇರಳವಾಗಿ ಕಂಡುಬರುತ್ತದೆ.  ಹೆಸರು ಬೇಳೆಯಲ್ಲಿ ದೋಸೆ ತಯಾರಿಸಿ ತಿನ್ನುವುದರಿಂದ ಇದು ಉದರ ಸಂಬಂಧಿತ ಸಮಸ್ಯೆಗಳಿಂದಲೂ ದೂರ ಉಳಿಯಬಹುದು. ಮಾತ್ರವಲ್ಲ, ಆರೋಗ್ಯಕರವಾಗಿ ತೂಕ ಇಳಿಕೆಯಲ್ಲೂ ಇದು ಪ್ರಯೋಜನಕಾರಿ ಆಗಿದೆ. 

ಓಟ್ಸ್:   ಓಟ್ಸ್ ಹೇರಳವಾದ ಫೈಬರ್ ಅನ್ನು ಹೊಂದಿರುತ್ತದೆ. ಇದು ದೇಹವನ್ನು ಸಂಪೂರ್ಣವಾಗಿ ಫಿಟ್ ಆಗಿ ಇಡಲು ತುಂಬಾ ಸಹಕಾರಿ. ಬೆಳಗಿನ ಉಪಹಾರದಲ್ಲಿ ಓಟ್ಸ್ ತಿನ್ನುವುದರಿಂದ ಬೇಗ ತೂಕ ಕಡಿಮೆ ಮಾಡಿಕೊಳ್ಳಬಹುದು. 

ಇಡ್ಲಿ:  ಇಡ್ಲಿ ತೂಕ ನಿರ್ವಹಣೆಗೆ ಅತ್ಯುತ್ತಮವೆಂದು ಪರಿಗಣಿಸಲಾಗಿದೆ.  ಬೆಳಗಿನ ಉಪಾಹಾರಕ್ಕಾಗಿ ಇಡ್ಲಿ ತಿನ್ನುವುದರಿಂದ ಇದು ತೂಕ ಇಳಿಸಿಕೊಳ್ಳಲು ತುಂಬಾ ಸಹಕಾರಿ. 

ದಲಿಯಾ:  ಸಾಕಷ್ಟು ತರಕಾರಿಗಳನ್ನು ಸೇರಿಸಿ ತಯಾರಿಸಿದ ದಲಿಯಾವನ್ನು ಬೆಳಿಗ್ಗೆ ಉಪಹಾರದಲ್ಲಿ ಸೇವಿಸುವುದರಿಂದ ಆರೋಗ್ಯಕ್ಕೆ ಹಲವು ಪ್ರಯೋಜನಗಳಿವೆ. ಇದು ತೂಕ ಇಳಿಸಿಕೊಳ್ಳಲು ಕೂಡ ತುಂಬಾ ಪ್ರಯೋಜನಕಾರಿಯಾಗಿದೆ.  

ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link