Weight Loss: ಮುಂಜಾನೆ ಈ ಪಾನೀಯಗಳನ್ನು ಕುಡಿಯುವುದರಿಂದ ವಾರದಲ್ಲಿ ಕರಗುತ್ತೆ ಬೆಲ್ಲಿ ಫ್ಯಾಟ್
ನೀವು ಹೊಟ್ಟೆಯ ಸುತ್ತಲಿನ ಕೊಬ್ಬನ್ನು ಕರಗಿಸಿ ಚಪ್ಪಟೆಯಾದ ಬೆಲ್ಲಿಯನ್ನು ನಿಮ್ಮದಾಗಿಸಲು ಬಯಸಿದರೆ ಕೆಲವು ಸಾಂಪ್ರದಾಯಿಕ ಪಾನೀಯಗಳು ಹೆಚ್ಚು ಪ್ರಯೋಜನಕಾರಿ ಎಂದು ಸಾಬೀತುಪಡಿಸಬಹುದು.
ಹೌದು, ಮುಂಜಾನೆ ಆರೋಗ್ಯಕರ ಪಾನೀಯಗಳ ಸೇವನೆಯಿಂದ ತ್ವರಿತವಾಗಿ ತೂಕ ಇಳಿಕೆಯಾಗುತ್ತದೆ. ಅಂತಹ ಕೆಲವು ಮಾರ್ನಿಂಗ್ ಡ್ರಿಂಕ್ಸ್ ಇಲ್ಲಿವೆ...
ಎರಡು ಕಪ್ ನೀರಿನಲ್ಲಿ ಒಂದು ಚಮಚ ಜೀರಿಗೆ ಹಾಕಿ ರಾತ್ರಿ ನೆನೆಸಿಟ್ಟು ಮುಂಜಾನೆ ಈ ನೀರು ಅರ್ಧ ಆಗುವವರೆಗೆ ಕುದಿಸಿ, ಬಳಿಕ ಶೋಧಿಸಿ ಕುಡಿಯಿರಿ. ಇದು ಛಾಯಾಪಚಯವನ್ನು ಹೆಚ್ಚಿಸಿ ತ್ವರಿತ ತೂಕ ಇಳಿಕೆಗೆ ಸಹಾಯಕವಾಗುತ್ತದೆ.
ಒಂದು ಲೋಟ ನೀರಿನಲ್ಲಿ ಒಂದು ಚಮಚ ಅಜ್ವೈನ್ ಬೆರೆಸಿ ಚೆನ್ನಾಗಿ ಕುದಿಸಿ. ಇದು ತಣ್ಣಗಾದ ಬಳಿಕ ಖಾಲಿ ಹೊಟ್ಟೆಯಲ್ಲಿ ಈ ನೀರನ್ನು ಕುಡಿಯಿರಿ. ನಿಯಮಿತವಾಗಿ ಈ ಪಾನೀಯ ಸೇವನೆ ಟುಕ್ ನಷ್ಟವನ್ನು ಪ್ರಚೋದಿಸುತ್ತದೆ.
ಬೆಳಿಗ್ಗೆ ಎದ್ದ ಕೂಡಲೇ ಒಂದು ಲೋಟ ಹಾಲಿನಲ್ಲಿ ಅರ್ಧ ಚಮಚ ಅರಿಶಿನ, ಚಿಟಿಕೆ ಮೆಣಸಿನ ಪುಡಿ ಬೆರೆಸಿ ಕಾಯಿಸಿ ಕುಡಿಯಿರಿ. ನಿಯಮಿತವಾದ ಅರಿಶಿನ ಹಾಲಿನ ಸೇವನೆ ದೇಹದಲ್ಲಿರುವ ಕೊಬ್ಬನ್ನು ಕರಗಿಸಿ, ಚಪ್ಪಟೆ ಹೊಟ್ಟೆಯನ್ನು ಪಡೆಯಲು ಪ್ರಯೋಜನಕಾರಿ ಆಗಿದೆ.
ಜೀರ್ಣಕ್ರಿಯೆಗೆ ಸಹಕಾರಿ ಆಗಿರುವ ಪುದೀನಾ ಮತ್ತು ಕೊತ್ತಂಬರಿ ಸೊಪ್ಪನ್ನು ನೀರಿಂಡಿಕೆ ಬೆರೆಸಿ ರುಬ್ಬಿ. ಬಳಿಕ ಇದನ್ನು ಶೋಧಿಸಿ ಇದಕ್ಕೆ ನಿಂಬೆ ರಸವನ್ನು ಬೆರೆಸಿ ನಿತ್ಯ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಕೆಲವೇ ದಿನಗಳಲ್ಲಿ ಬೆಲ್ಲಿ ಫ್ಯಾಟ್ ಕರಗುತ್ತದೆ.
ರಾತ್ರಿ ವೇಳೆ ಒಂದು ಲೋಟ ನೀರಿಯಲ್ಲಿ ಒಂದು ಚಮಚ ಮೆಂತ್ಯ ಬೀಜಗಳನ್ನು ನೆನೆಸಿಡಿ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೀರನ್ನು ಕುಡಿಯುವುದರಿಂದ ಇದು ಕೊಬ್ಬನ್ನು ಸುಡುವಲ್ಲಿ ಪರಿಣಾಮಕಾರಿ ಮದ್ದಾಗಿ ಕಾರ್ಯನಿರ್ವಹಿಸುತ್ತದೆ.
ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.