Weight Loss Foods: ತೂಕ ಇಳಿಕೆಗೆ ವರದಾನಕ್ಕಿಂತ ಕಡಿಮೆ ಇಲ್ಲ ಈ ಕಪ್ಪು ಆಹಾರ ಪದಾರ್ಥಗಳು

Mon, 10 Jul 2023-4:08 pm,

ತೂಕ ಇಳಿಕೆಗೆ ವರದಾನವಿದ್ದಂತೆ ಈ ಕಪ್ಪು ಆಹಾರಗಳು:  ನೀವೂ ಕೂಡ ತೂಕ ಇಳಿಸಿಕೊಳ್ಳಲು ಬಯಸುವಿರಾ... ಆರೋಗ್ಯ ತಜ್ಞರ ಪ್ರಕಾರ, ಕೆಲವು ಕಪ್ಪು ಬಣ್ಣದ ಆಹಾರಗಳು ನಿಮ್ಮ ತೂಕ ಇಳಿಕೆ ಪ್ರಕ್ರಿಯೆಯಲ್ಲಿ ಬಹಳ ಪ್ರಮುಖ ಪಾತ್ರ ವಹಿಸುತ್ತವೆ. ಇವುಗಳ ಸೇವನೆಯಿಂದ ಆರೋಗ್ಯಕರವಾಗಿ ಶೀಘ್ರದಲ್ಲೇ ತೂಕ ಇಳಿಸಿಕೊಳ್ಳಬಹುದು ಎಂದು ಹೇಳಲಾಗುತ್ತದೆ. ಅಂತಹ ಆಹಾರ ಪದಾರ್ಥಗಳು ಯಾವುವು ಎಂದು ತಿಳಿಯೋಣ... 

ಕಪ್ಪು ಬೆಳ್ಳುಳ್ಳಿ:  ಸಾಮಾನ್ಯವಾಗಿ ಅಡುಗೆಗೆ ಬಿಳಿ ಬಣ್ಣದ ಬೆಳ್ಳುಳ್ಳಿಯನ್ನು ಬಳಸಲಾಗುತ್ತದೆ. ಕಪ್ಪು ಬಣ್ಣದ ಬೆಳ್ಳುಳ್ಳಿಯನ್ನು ಕಾಣುವುದು ಅತಿ ವಿರಳವೇ. ಜೊತೆಗೆ ಅಷ್ಟು ರುಚಿಕರವಲ್ಲದ ಈ ಕಪ್ಪು ಬೆಳ್ಳುಳ್ಳಿಗಳು ಬಿಳಿ ಬೆಳ್ಳುಳ್ಳಿಗೆ ಹೋಲಿಸಿದರೆ, ಎರಡು ಪಟ್ಟು ಹೆಚ್ಚು ವಿಟಮಿನ್ ಸಿ ಮತ್ತು ಆಂಟಿ-ಆಕ್ಸಿಡೆಂಟ್‌ಗಳನ್ನು ಹೊಂದಿವೆ. ಹಾಗಾಗಿ, ಇದು ದೇಹದಿಂದ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕರಗಿಸಲು ತುಂಬಾ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. 

ಕಪ್ಪಕ್ಕಿ:  ಬಿಳಿ ಅಕ್ಕಿಯಿಂದ ತೂಕ ಹೆಚ್ಚಾಗುತ್ತದೆ ಎಂದು ಕೆಲವರು ಅನ್ನ ಸೇವನೆಯನ್ನು ತಪ್ಪಿಸುತ್ತಾರೆ. ಆದಾಗ್ಯೂ, ಕೆಂಪು ಅಕ್ಕಿಯನ್ನು ಆರೋಗ್ಯಕ್ಕೆ ಉತ್ತಮ ಎಂದು ಬಣ್ಣಿಸಲಾಗುತ್ತದೆ. ಆದರೆ, ನಿವೆಂದಾದರೂ ಕಪ್ಪಕ್ಕಿಯನ್ನು ತಿಂಡಿದ್ದೀರಾ. ಆಂಥೋಸಯಾನಿನ್ ಮತ್ತು ಆ್ಯಂಟಿಆಕ್ಸಿಡೆಂಟ್‌ಗಳನ್ನು ಹೊಂದಿರುವ ಕಪ್ಪು ಅಕ್ಕಿಯಲ್ಲಿರುವ ಫೈಬರ್‌ನ ಸಹಾಯದಿಂದ ಶೀಘ್ರವಾಗಿ ಆರೋಗ್ಯಕರವಾಗಿ ತೂಕವನ್ನು ಇಳಿಸಿಕೊಳ್ಳಬಹುದು ಎಂದು ಹೇಳಲಾಗುತ್ತದೆ. 

ಬ್ಲಾಕ್ ಟೀ:  ಸಾಮಾನ್ಯವಾಗಿ ಮೈಂಡ್ ಫ್ರೆಶ್ ಗಾಗಿ ಟೀ ಸೇವಿಸಲಾಗುತ್ತದೆ ಹಿತಮಿತವಾಗಿ ಸೇವಿಸಿದರೆ ಇದು ಆರೋಗ್ಯಕ್ಕೆ ಹಲವು ಪ್ರಯೋಜನಗಳನ್ನು ಹೊಂದಿದೆ. ಆದರೆ, ನೀವು ತೂಕ ಇಳಿಸಿಕೊಳ್ಳಲು ಬಯಸಿದರೆ, ಆರೋಗ್ಯಕರವಾಗಿ ಬೆಲ್ಲಿ ಫ್ಯಾಟ್ ಕರಗಿಸಲು ಇಚ್ಛಿಸಿದರೆ ನಿಮ್ಮ ಡಯಟ್ನಲ್ಲಿ ಹಾಲು ಮತ್ತು ಸಕ್ಕರೆಯಿಂದ ತಯಾರಿಸಿದ ಸಾಮಾನ್ಯ ಚಹಾ ಬದಲಿಗೆ ಬ್ಲಾಕ್ ಟೀ ಅನ್ನು ಸೇರಿಸಿ. 

ಬ್ಲ್ಯಾಕ್ ಬೆರ್ರಿ:  ಹಲವು ಪೋಷಕಾಂಶಗಳ ಗಣಿಯಾಗಿರುವ ಬ್ಲ್ಯಾಕ್ ಬೆರ್ರಿಯನ್ನು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಬಣ್ಣಿಸಲಾಗುತ್ತದೆ. ಅದರಲ್ಲೂ ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಇದನ್ನು ವರದಾನಕ್ಕಿಂತ ಕಡಿಮೆ ಇಲ್ಲ ಎಂದು ಹೇಳಲಾಗುತ್ತದೆ. 

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು Zee ಮೀಡಿಯಾ ಖಚಿತಪಡಿಸುವುದಿಲ್ಲ.   

ZEENEWS TRENDING STORIES

By continuing to use the site, you agree to the use of cookies. You can find out more by Tapping this link