Weight Loss Fruits: ತೂಕ ನಷ್ಟಕ್ಕೆ ವರದಾನಕ್ಕಿಂತ ಕಡಿಮೆ ಇಲ್ಲ ಈ 4 ಹಣ್ಣುಗಳು
ತೂಕ ನಷ್ಟ ಪ್ರಕ್ರಿಯೆಯಲ್ಲಿ ನಾವು ಸೇವಿಸುವ ಆಹಾರಗಳ ಬಗ್ಗೆ ಹೆಚ್ಚಿನ ಗಮನ ಹರಿಸಬೇಕಾಗುತ್ತದೆ. ಆಹಾರ ತಜ್ಞರ ಪ್ರಕಾರ, ನಮ್ಮ ಡಯಟ್ನಲ್ಲಿ ಕೆಲವು ಹಣ್ಣುಗಳನ್ನು ಸರಿಸುವ ಮೂಲಕ ನಾವು ಸುಲಭವಾಗಿ ತೂಕ ಕಳೆದುಕೊಳ್ಳಬಹುದು ಎಂದು ಹೇಳಲಾಗುತ್ತದೆ. ಆ ಹಣ್ಣುಗಳು ಯಾವುವು ಎಂದು ತಿಳಿಯೋಣ...
ಪ್ರತಿ ದಿನ ಒಂದು ಸೇಬು ತಿನ್ನುವುದರಿಂದ ವೈದ್ಯರಿಂದ ದೂರ ಉಳಿಯಬಹುದು ಎಂಬ ಮಾತಿದೆ. ಇದಕ್ಕೆ ಮುಖ್ಯ ಕಾರಣ ಇದರಲ್ಲಿ ಕಂಡು ಬರುವ ಪೋಷಕಾಂಶಗಳು. ಆಹಾರ ತಜ್ಞರ ಪ್ರಕಾರ, ನಿತ್ಯ ಒಂದು ಸೇಬು ಸೇವನೆಯಿಂದ ತೂಕವನ್ನು ಕೂಡ ಕಡಿಮೆ ಮಾಡಬಹುದು.
ನೋಡಲು ಬಹಳ ಪುಟ್ಟದಾಗಿ ಕಾಣುವ ಕಿವಿ ಹಣ್ಣಿನಲ್ಲಿ ವಿಟಮಿನ್ ಸಿ, ವಿಟಮಿನ್ ಇ, ಫೋಲೇಟ್ ಮತ್ತು ಫೈಬರ್ ಹೇರಳವಾಗಿ ಕಂಡು ಬರುತ್ತದೆ. ಹಾಗಾಗಿ, ಇದನ್ನು ತೂಕ ನಷ್ಟಕ್ಕೆ ತುಂಬಾ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ.
ಕಿತ್ತಳೆ ಹಣ್ಣಿನಲ್ಲಿ ಫೈಬರ್ ಸಮೃದ್ಧವಾಗಿದೆ. ನಿತ್ಯ ಕಿತ್ತಳೆ ಹಣ್ಣನ್ನು ಸೇವಿಸುವುದರಿಂದ ಇಲ್ಲವೇ ಇದರ ಜ್ಯೂಸ್ ಸೇವಿಸುವುದರಿಂದ ತೂಕ ನಷ್ಟಕ್ಕೆ ತುಂಬಾ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ.
ಎಲ್ಲೆಡೆಯೂ ಎಲ್ಲಾ ಋತುಗಳಲ್ಲೂ ಬಹಳ ಸುಲಭವಾಗಿ ಲಭ್ಯವಿರುವ ಪರಂಗಿ ಹಣ್ಣನ್ನು ಜೀರ್ಣಕ್ರಿಯೆಗೆ ತುಂಬಾ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. ಈ ಹಣ್ಣಿನ ಸೇವನೆಯೂ ಕೂಡ ತೂಕ ಕಳೆದುಕೊಳ್ಳಲು ತುಂಬಾ ಪ್ರಯೋಜನಕಾರಿ ಆಗಿದೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು Zee ಮೀಡಿಯಾ ಖಚಿತಪಡಿಸುವುದಿಲ್ಲ.