Weight Loss Habits: ತ್ವರಿತ ತೂಕ ಇಳಿಕೆಯ ಜೊತೆಗೆ ಫ್ಲಾಟ್ ಬೆಲ್ಲಿ ನಿಮ್ಮದಾಗಿಸಲು ಈ ಐದು ಅಭ್ಯಾಸಗಳನ್ನು ರೂಢಿಸಿಕೊಳ್ಳಿ
ಸಾಧ್ಯವಾದಷ್ಟು ಮನೆಯಲ್ಲಿ ತಯಾರಿಸಿದ ಆಹಾರವನ್ನೇ ಸೇವಿಸಿ: ತೂಕ ಇಳಿಕೆಯಲ್ಲಿ ಮಾಡಬೇಕಾದ ಮೊದಲ ಕೆಲಸ ಎಂದರೆ ಹೊರಗಿನ ಆಹಾರಗಳ ಸೇವನೆಯನ್ನು ತಪ್ಪಿಸಬೇಕು. ಬದಲಿಗೆ ಸಾಧ್ಯವಾದಷ್ಟು ಮನೆಯಲ್ಲಿ ತಯಾರಿಸಿದ ಆಹಾರವನ್ನೇ ಸೇವಿಸುವು ಒಳ್ಳೆಯದು. ಕಾರಣ, ಮನೆಯಲ್ಲಿ ತಯಾರಿಸಿದ ಆಹಾರವು ತಾಜಾವಾಗಿರುತ್ತದೆ.
ಕರಿದ ಆಹಾರಗಳನ್ನು ತಪ್ಪಿಸಿ: ಭಾರತೀಯ ಖಾದ್ಯಗಳಲ್ಲಿ ಎಣ್ಣೆಯುಕ್ತ ಆಹಾರಗಳನ್ನು ಹೆಚ್ಚಾಗಿ ತಯಾರಿಸಲಾಗುತ್ತದೆ. ತಿನ್ನಲು ರುಚಿಕರವಾಗಿರುವ ಈ ಆಹಾರಗಳನ್ನು ಹಿತಮಿತವಾಗಿ ಸೇವಿಸಿದರೆ ಒಳ್ಳೆಯದು. ಇಲ್ಲದಿದ್ದರೆ ಆರೋಗ್ಯವನ್ನು ಕೆಡಿಸುವಲ್ಲಿ ಇವು ಪ್ರಮುಖ ಪಾತ್ರ ವಹಿಸುತ್ತದೆ. ಹಾಗಾಗಿ, ನೀವು ತೂಕ ಕಡಿಮೆ ಮಾಡಲು ಬಯಸಿದರೆ ನಿಮ್ಮ ದೈನಂದಿನ ಆಹಾರದಲ್ಲಿ ಕರಿದ ಆಹಾರಗಳ ಸೇವನೆಯನ್ನು ತಪ್ಪಿಸಿ.
ಸಾಕಷ್ಟು ನಿದ್ರೆ ಮಾಡಿ: ಆರೋಗ್ಯವಾಗಿರಲು ಉತ್ತಮ ಆಹಾರದ ಜೊತೆಗೆ ನಿತ್ಯ ಸಾಕಷ್ಟು ನಿದ್ರೆ ಮಾಡುವುದು ಕೂಡ ಬಹಳ ಮುಖ್ಯ. ಸಂಶೋಧನೆಯ ಪ್ರಕಾರ ಅಗತ್ಯಕ್ಕಿಂತ ಕಡಿಮೆ ನಿದ್ರೆ ಮಾಡುವ ಜನರಲ್ಲಿ ತೂಕ ವೇಗವಾಗಿ ಹೆಚ್ಚಾಗುತ್ತದೆ. ವಾಸ್ತವವಾಗಿ, ಪ್ರತಿಯೊಬ್ಬರಿಗೂ ನಿತ್ಯ 8 ಗಂಟೆಗಳ ನಿದ್ರೆ ಬಹಳ ಮುಖ್ಯ. ಇಲ್ಲದಿದ್ದರೆ ಅದು ತೂಕ ಹೆಚ್ಚಳ ಮಾತ್ರವಲ್ಲದೆ ಆರೋಗ್ಯದ ಮೇಲೂ ಗಂಭೀರ ಪರಿಣಾಮ ಬೀರುತ್ತದೆ.
ಖಾಲಿ ಹೊಟ್ಟೆಯಲ್ಲಿ ಈ ತಪ್ಪನ್ನು ಮಾಡಬೇಡಿ: ನಮ್ಮಲ್ಲಿ ಕೆಲವರಿಗೆ ಬೆಳಿಗ್ಗೆ ಎದ್ದ ತಕ್ಷಣ ಟೀ ಅಥವಾ ಕಾಫಿ ಕುಡಿಯುವ ಅಭ್ಯಾಸವಿರುತ್ತದೆ. ಆದರೆ, ಇದು ಮಲಬದ್ಧತೆ ಸಮಸ್ಯೆಗೆ ಕಾರಣವಾಗುವುದು. ಮಾತ್ರವಲ್ಲ ಜೀರ್ಣಕ್ರಿಯೆ ಸಂಬಂಧಿತ ಸಮಸ್ಯೆಗಳಿಗೂ ಕಾರಣವಾಗಬಹುದು. ಇದರಿಂದ ತೂಕ ಇಳಿಕೆ ಕಷ್ಟವಾಗುತ್ತದೆ. ಇದನ್ನು ತಪ್ಪಿಸಲು ಬೆಡ್ ಟೀ/ಕಾಫಿ ತಪ್ಪಿಸಿ.
ನಿತ್ಯ ಸಾಕಷ್ಟು ನೀರು ಕುಡಿಯಿರಿ: ನೀವು ತೂಕ ಇಳಿಸಿಕೊಳ್ಳುವ ಪ್ರಯತ್ನದಲ್ಲಿದ್ದರೆ ನಿತ್ಯ ಸಾಕಷ್ಟು ನೀರು ಕುಡಿಯಿರಿ. ಹಲವು ಸಂಶೋಧನೆಗಳ ಪ್ರಕಾರ ಆರೋಗ್ಯವಂತ ವಯಸ್ಕರು ನಿತ್ಯ ಕನಿಷ್ಠ 8 ಲೋಟ ನೀರು ಕುಡಿಯಬೇಕು. ಇದರಿಂದ ತೂಕ ನಿಯಂತ್ರಣವೂ ಸುಲಭವಾಗುತ್ತದೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ತಜ್ಞರನ್ನು ಸಂಪರ್ಕಿಸಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.