Weight loss: ಈ 4 ನಿಯಮಗಳನ್ನು ಅನುಸರಿಸಿದರೆ ಸಾಕು ಸುಲಭವಾಗಿ ತೂಕ ಕಡಿಮೆಯಾಗುತ್ತೆ..!
ತೂಕ ಇಳಿಸಿಕೊಳ್ಳಲು ತರಬೇತಿಯನ್ನು ಪಡೆಯಬೇಕು. ಏಕೆಂದರೆ ಇದರಿಂದ ನಮ್ಮ ಸ್ನಾಯುಗಳು ಬಲವಾಗಿರುವಂತೆ ಮಾಡಬಹುದಾಗಿದೆ. ಅಲ್ಲದೇ ಸರಿಯಾದ ಮಾಹಿತಿ ಇಲ್ಲದೇ ಯಾವುದೇ ಪ್ರಯೋಗಗಳನ್ನು ಮಾಡುವುದನ್ನು ತಪ್ಪಿಸಬೇಕು.
ಬ್ರೆಡ್, ಅಕ್ಕಿ, ಆಲೂಗಡ್ಡೆ ಮತ್ತು ಓಟ್ಸ್ ಸೇವನೆಯನ್ನು ಕಡಿಮೆ ಮಾಡಿ. ನಾನ್ ವೆಜ್ ಪ್ರೊಟೀನ್ ಆಹಾರದ ಜೊತೆಗೆ ಬೀಜಗಳು, ಆಲಿವ್ ಎಣ್ಣೆ, ಸಾಸಿವೆ ಎಣ್ಣೆಯನ್ನು ತೆಗೆದುಕೊಳ್ಳಬಹುದು.
ಸಕ್ಕರೆಯ ಜೊತೆಗೆ ಜಂಕ್ ಫುಡ್ ಸೇವನೆಯನ್ನೂ ಕಡಿಮೆ ಮಾಡಬೇಕು. ಈ ಆಹಾರಗಳಲ್ಲಿ ಪೌಷ್ಟಿಕಾಂಶದ ಕೊರತೆಯಿದ್ದು, ಇದು ನಿಮ್ಮ ಚಯಾಪಚಯ ಕ್ರಿಯೆಗೆ ಅಡ್ಡಿಪಡಿಸುವ ಮೂಲಕ ತೂಕವನ್ನು ಹೆಚ್ಚಿಸಬಹುದು.
ಮೊದಲನೆಯದಾಗಿ, ಸಕ್ಕರೆಯ ಸೇವನೆಯನ್ನು ಕಡಿಮೆ ಮಾಡಿ. ಏಕೆಂದರೆ ಸಕ್ಕರೆ ಕೊಬ್ಬನ್ನು ಸಂಗ್ರಹಿಸಿ, ಹೊಟ್ಟೆಯ ಕೊಬ್ಬನ್ನು ಹೆಚ್ಚಿಸುತ್ತದೆ. ಅದಕ್ಕಾಗಿಯೇ ಸಿಹಿಕಾರಕಗಳನ್ನು ಸಂಪೂರ್ಣವಾಗಿ ಕಡಿಮೆ ಮಾಡುವುದು ಕೊಬ್ಬನ್ನು ಸುಡುವಲ್ಲಿ ಸಹಾಯ ಮಾಡುತ್ತದೆ.
ತೂಕ ಇಳಿಸಿಕೊಳ್ಳಲು ಕೆಲವು ಸಲಹೆಗಳು ನಿಮಗೆ ಬಹಳಷ್ಟು ಸಹಾಯ ಮಾಡುತ್ತವೆ. ನೀವು ಈ 4 ಹಂತಗಳನ್ನು ಅನುಸರಿಸಿದರೆ, ಒಂದು ತಿಂಗಳಲ್ಲಿ ತೂಕವನ್ನು ಕಳೆದುಕೊಳ್ಳಬಹುದು.