ಕೇವಲ 30 ದಿನಗಳಲ್ಲಿ 5 ಕೆಜಿ ತೂಕ ಇಳಿಸಿಕೊಳ್ಳಲು ಸೂಪರ್ ಟಿಪ್ಸ್!

Thu, 27 Jun 2024-5:10 pm,

ಆರೋಗ್ಯಕರ ಜೀವನಶೈಲಿಗೆ ಪೌಷ್ಟಿಕ ಆಹಾರ ಅತ್ಯಗತ್ಯ. ಏಕೆಂದರೆ ಪೌಷ್ಠಿಕ ಆಹಾರವು ನಮ್ಮ ಬೆಳವಣಿಗೆಯ ದರವನ್ನು ಉತ್ತಮಗೊಳಿಸುವುದಲ್ಲದೆ ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಆದ್ದರಿಂದ, ಆರೋಗ್ಯಕರ ಜೀವನಶೈಲಿಗಾಗಿ ನಿಮ್ಮ ಆಹಾರದಲ್ಲಿ ಸೇರಿಸಬೇಕಾದ ಕೆಲವು ಆಹಾರಗಳು ಇಲ್ಲಿವೆ..  

ಸಾಲ್ಮನ್: ಸಾಲ್ಮನ್ ಅನ್ನು ನಿಯಮಿತವಾಗಿ ಸೇವಿಸುವುದರಿಂದ ನಿಮ್ಮ ತೂಕವನ್ನು ಕಳೆದುಕೊಳ್ಳಬಹುದು. ಇದು ಹಸಿವನ್ನು ಹೆಚ್ಚಿಸುವ ಹಾರ್ಮೋನುಗಳನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಹೆಚ್ಚಿನ ಪ್ರೊಟೀನ್ ಇರುವ ಆಹಾರವಾಗಿರುವುದರಿಂದ ಬಹು ಬೇಗನೇ ಹಸಿವಾಗುವುದಿಲ್ಲ.  

ಮೊಟ್ಟೆ : ಪ್ರತಿದಿನ ಮೊಟ್ಟೆ ತಿಂದರೆ ಹೆಚ್ಚು ಹೊತ್ತು ಹಸಿವಾಗುವುದಿಲ್ಲ. ಇದು ನಿಮ್ಮ ಆಹಾರದಲ್ಲಿನ ಕ್ಯಾಲೊರಿಗಳ ಪ್ರಮಾಣವನ್ನು ಸಹ ಕಡಿಮೆ ಮಾಡುತ್ತದೆ. ಆಹಾರದಲ್ಲಿ ವಿಧದ ಜೀವಸತ್ವಗಳು ಮತ್ತು ಖನಿಜಗಳ ಕೊರತೆಯನ್ನು ಮೊಟ್ಟೆ ಪೂರೈಸುತ್ತದೆ. ನೀವು ತೂಕ ಇಳಿಸಿಕೊಳ್ಳಲು ಬಯಸಿದರೆ, ಮೊಟ್ಟೆಗಳು ಉತ್ತಮ.  

ಸಾಕಷ್ಟು ನೀರು ಕುಡಿಯಿರಿ: ದೇಹವನ್ನು ಹೈಡ್ರೀಕರಿಸಿಟ್ಟುಕೊಳ್ಳುವುದು ಬಹಳ ಮುಖ್ಯ. ಅದಕ್ಕಾಗಿ, ಕೂಲ್‌ ಡ್ರೀಂಕ್ಸ್‌ ಅನ್ನು ಕುಡಿಯಬೇಡಿ.. ಬದಲಿಗೆ ಹೆಚ್ಚಾಗಿ ನೀರು ಕುಡಿಯಿರಿ.. ನೀರು ಮತ್ತು ಗ್ರೀನ್‌ ಟೀಗಳಂತಹ ಆರೋಗ್ಯಕರ ದ್ರವಗಳನ್ನು ಕುಡಿಯುವ ಅಭ್ಯಾಸ ಮಾಡಿಕೊಂಡಿಕೊಳ್ಳಿ.. ಇದು ನಿಮ್ಮ ತೂಕವನ್ನು ಕಡಿಮೆ ಮಾಡುವುದಲ್ಲದೆ ಅನೇಕ ರೋಗಗಳಿಂದ ನಿಮ್ಮನ್ನು ದೂರವಿಡುತ್ತದೆ.  

ಹಸಿರು ತರಕಾರಿಗಳು ಮತ್ತು ಸಲಾಡ್‌ಗಳು: ನಿಮ್ಮ ಆಹಾರದಲ್ಲಿ ಹೆಚ್ಚು ಹಸಿರು ತರಕಾರಿಗಳು ಮತ್ತು ಹಣ್ಣುಗಳನ್ನು ಸೇರಿಸಿ. ಇದು ನಿಮಗೆ ಹೆಚ್ಚಿನ ಶಕ್ತಿ, ಉತ್ತಮ ಚರ್ಮ ಮತ್ತು ಉತ್ತಮ ಜೀರ್ಣಕ್ರಿಯೆಯನ್ನು ನೀಡುತ್ತದೆ. ಅಲ್ಲದೆ, ನಿಮ್ಮ ಹೃದಯವನ್ನು ಅನೇಕ ಕಾಯಿಲೆಗಳಿಂದ ರಕ್ಷಿಸುತ್ತದೆ.   

ಮನೆಯಲ್ಲಿ ತಯಾರಿಸಿದ ಆಹಾರವನ್ನು ಸೇವಿಸಿ: ಮನೆಯಲ್ಲಿ ಮಾಡುವ ಅಡುಗೆಯಲ್ಲಿ ಆರೋಗ್ಯಕರ ಆಹಾರ ಪದಾರ್ಥಗಳನ್ನು ಸೇವಿಸುತ್ತೇವೆ, ಇವು ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತವೆ. ಮನೆಯಲ್ಲಿ ಅಡುಗೆ ಮಾಡಿ ತಿನ್ನುವುದರಿಂದ ಎಣ್ಣೆ ಮತ್ತು ಮಸಾಲೆಗಳ ಮೇಲೆ ಸಂಪೂರ್ಣ ನಿಯಂತ್ರಣ ಬರುತ್ತವೆ. ಇದು ತೂಕವನ್ನು ಕಳೆದುಕೊಳ್ಳಲು ಮತ್ತು ಆರೋಗ್ಯ ಕಾಪಾಡಲು ಸಹಾಯ ಮಾಡುತ್ತದೆ.  

ಕಡಿಮೆ ಕ್ಯಾಲೋರಿ ಆಹಾರ ಸೇವಿಸಿ : ತರಕಾರಿಗಳು ಮತ್ತು ಹಣ್ಣುಗಳು ಪೋಷಕಾಂಶಗಳಿಂದ ತುಂಬಿದ್ದು, ಹೆಚ್ಚಿನ ಪೋಷಣೆಯನ್ನು ಒದಗಿಸುತ್ತವೆ. ಅಲ್ಲದೆ, ಇವು ನಿಮ್ಮ ದೇಹಕ್ಕೆ ಕಡಿಮೆ ಕ್ಯಾಲೊರಿಗಳನ್ನು ನೀಡುತ್ತವೆ. ತರಕಾರಿಗಳು ಮತ್ತು ಹಣ್ಣುಗಳು ಸಾಕಷ್ಟು ಪೋಷಕಾಂಶಗಳನ್ನು ನೀಡುವುದು ಮಾತ್ರವಲ್ಲದೆ ಸಾಕಷ್ಟು ನೀರು ಮತ್ತು ನಾರಿನಂಶವನ್ನು ಒಳಗೊಂಡಿರುತ್ತವೆ, ಇದರಿಂದ ದಿನವಿಡೀ ಹೊಟ್ಟೆ ತುಂಬಿದಂತಿರುತ್ತದೆ.   

ಪ್ರೋಟೀನ್: ನೀವು ತೂಕ ಇಳಿಸಿಕೊಳ್ಳಲು ಬಯಸಿದರೆ ಹೆಚ್ಚು ಪ್ರೋಟೀನ್ ಸೇವಿಸಿ. ಏಕೆಂದರೆ ಪ್ರೋಟೀನ್ ಸ್ನಾಯುಗಳನ್ನು ಸರಿಪಡಿಸುವುದು ಮಾತ್ರವಲ್ಲದೆ ಹಸಿವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಮೊಟ್ಟೆಯ ಬಿಳಿಭಾಗ, ಕೊಬ್ಬು ರಹಿತ ಡೈರಿ ಉತ್ಪನ್ನಗಳು, ಬೀನ್ಸ್ ಮತ್ತು ದ್ವಿದಳ ಧಾನ್ಯಗಳನ್ನು ಸೇವಿಸಿ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link